ಪ್ರಮುಖ ವರದಿಗಳು

ಮಹಾತ್ಮಾಗಾಂಧಿ ಚಿತ್ರವಿರುವ ಚಪ್ಪಲಿ ಮಾರಾಟಕ್ಕಿಟ್ಟ ಅಮೆಜಾನ್ ನಿಂದ ರಾಷ್ಟ್ರಪಿತನಿಗೆ ಅವಮಾನ

Pinterest LinkedIn Tumblr

ನವದೆಹಲಿ: ಭಾರತದ ರಾಷ್ಟ್ರಧ್ವಜ ಚಿತ್ರ ಹೊಂದಿರುವ ಡೋರ್​ಮ್ಯಾಟ್ ಮಾರಾಟಕ್ಕಿಡುವ ಮೂಲಕ ಭಾರತೀಯರ ಆಕ್ರೋಶಕ್ಕೆ ಗುರಿಯಾಗಿ ಕ್ಷಮೆ ಕೋರಿದ್ದ ಅಮೆಜಾನ್ ಮತ್ತೊಂದು ಯಡವಟ್ಟು ಮಾಡಿದೆ.

ಮಹಾತ್ಮ ಗಾಂಧಿ ಚಿತ್ರ ಹೊಂದಿರುವ ಚಪ್ಪಲಿಯನ್ನು ವೆಬ್​ಸೈಟ್​ನಲ್ಲಿ ಪ್ರಕಟಿಸಿ ಭಾರತೀಯರ ಭಾವನೆಗಳಿಗೆ ಘಾಸಿ ಉಂಟು ಮಾಡಿದೆ ಇ- ಕಾಮರ್ಸ್ ಸಂಸ್ಥೆ ಅಮೆಜಾನ್.

ಮಹಾತ್ಮ ಗಾಂಧಿ ಚಿತ್ರವಿರುವ ಒಂದು ಜೊತೆ ರಬ್ಬರ್ ಚಪ್ಪಲಿಗೆ 16 ಡಾಲರ್ ನಿಗದಿ ಪಡಿಸಲಾಗಿದೆ. ಅಂದರೆ 1,200 ರುಪಾಯಿಗಳು. ಇದು ಭಾರತದಲ್ಲಿ ಮಾರಾಟಕ್ಕೆ ಲಭ್ಯವಿಲ್ಲ. ಅಮೆರಿಕದ ಅಮೆಜಾನ್ ವೆಬ್​ಸೈಟಲ್ಲಿ ಈ ರೀತಿಯ ಚಪ್ಪಲಿಗಳನ್ನು ಮಾರಾಟಕ್ಕೆ ಇಡಲಾಗಿದೆ.

ಮಹಾತ್ಮ ಗಾಂಧಿಯಿರುವ ಚಪ್ಪಲಿಗಳ ಫೋಟೋ ತೆಗೆದು ಪ್ರಧಾನ ಮಂತ್ರಿ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಟ್ವಿಟ್ಟರಿಗರು ಟ್ಯಾಗ್ ಮಾಡಿದ್ದಾರೆ. ಭಾರತೀಯ ಭಾವನೆಗಳನ್ನು ಅಮೆಜಾನ್ ಸಂಸ್ಥೆ ಗೌರವಿಸಬೇಕು ಎಂದು ವಿದೇಶಾಂಗ ಇಲಾಖೆ ಟ್ವೀಟ್ ಮಾಡಿದೆ.

Comments are closed.