ಪ್ರಮುಖ ವರದಿಗಳು

ಸಾಮಾಜಿಕ ತಾಣಗಳಲ್ಲಿ ಪ್ರಸಿದ್ಧಿಗಳಿಸುತ್ತಿರುವ ಛತ್ತೀಸ್’ಗಡ್’ನ ಮಹಿಳಾ ಕಾನ್ಸ್’ಸ್ಟೇಬಲ್ ! ಈಕೆಯದ್ದು ಸಾಧನೆ ಏನು ಗೊತ್ತಾ..?

Pinterest LinkedIn Tumblr

smita-tandi-3

ಛತ್ತೀಸ್’ಗಡ್: ಸ್ಮಿತಾ ಠಾಂಡಿ, ಈಕೆ ಛತ್ತೀಸ್’ಗಡ್’ನ ಓರ್ವ ಮಹಿಳಾ ಪೊಲೀಸ್ ಕಾನ್ಸ್’ಸ್ಟೇಬಲ್ ಆಗಿದ್ದರೂ ಸದ್ಯ ಸಾಮಾಜಿಕ ಜಾಲಾತಾಣಗಳಲ್ಲಿ ಮಾತ್ರ ಸೆಲೆಬ್ರಿಟಿಗಿಂತಲೂ ಹೆಚ್ಚು ಸದ್ದು ಮಾಡುತ್ತಿದ್ದಾಳೆ.

ಫೇಸ್’ಬುಕ್’ನಲ್ಲಿ 7 ಲಕ್ಷದ 20 ಸಾವಿರ ಫಾಲೊವರ್ಸ್ ಹೊಂದಿರುವ ಈಕೆ ಸದ್ಯ ಛತ್ತೀಸ್’ಗಡ್’ನಲ್ಲಿ ಜನಪ್ರಿಯ ವ್ಯಕ್ತಿಯಾಗಿದ್ದಾಳೆ. ಅಚ್ಚರಿಪಡಿಸುವ ವಿಚಾರವೆಂದರೆ ಈಕೆ ಫೇಸ್’ಬುಕ್ ಅಕೌಂಟ್ ಕ್ರಿಯೇಟ್ ಮಾಡಿದ ಕೇವಲ 20 ತಿಂಗಳಲ್ಲೇ ಇಷ್ಟೊಂದು ಅಭಿಮಾನಿಗಳನ್ನು ಹೊಂದಿದ್ದಾರೆ.

2011ರಲ್ಲಿ ಛತ್ತೀಸ್’ಗಡ್’ನ ಪೊಲೀಸ್ ಇಲಾಖೆಗೆ ಸೇರ್ಪಡೆಯಾಗಿದ್ದ 24 ವರ್ಷದ ಸ್ಮಿತಾ ಯಾವತ್ತೂ ಅಭಿಮಾನಿಗಳನ್ನು ಪಡೆಯಲು ಯಾವತ್ತೂ ಹಣ ಖರ್ಚು ಮಾಡಿಲ್ಲವಂತೆ. ಫೇಸ್’ಬುಕ್’ನಲ್ಲಿ ಅವರಿಗಿರುವ ಎಲ್ಲಾ ಫಾಲೊವರ್ಸ್ ಅವರ ನಿಜವಾದ ಅಭಿಮಾನಿಗಳು.

ಈ ಕುರಿತಾಗಿ ಮಾತನಾಡಿದ ಸ್ಮಿತಾ ‘ನಾಣು ಹಾಕುತ್ತಿರುವ ಪೋಸ್ಟ್’ಗಳಲ್ಲಿನ ವಿಷಯವನ್ನು ಗಮನಿಸಿ ಇಷ್ಟು ಜನ ನನ್ನ ಅಭಿಮಾನಿಗಳಾಗಿರಬಹುದು’ ಎಂದಿದ್ದಾರೆ. ಇವರು ತಮ್ಮ ಪೋಸ್ಟ್’ಗಳ ಮೂಲಕ ಅಸಹಾಯಕ, ನಿರ್ಗತಿಕ ಹಾಗೂ ಬಡ ಜನರ ಕರುಣಾಜನಕ ಕಥೆಯನ್ನು ಬರೆಯುತ್ತಾರೆ ಈ ಮೂಲಕ ಅವರಿಗೆ ಸಹಾಯ ಮಾಡುತ್ತಾರೆ.

ಇವರ ಈ ಗುಣ ಜನರನ್ನು ಅದೆಷ್ಟು ಆಕರ್ಷಿಸಿದೆ ಎಂದರೆ ಖುದ್ದು ಜನರೇ ಅವರ ಅಕೌಂಟ್ ಹುಡುಕಿ ಲೈಕ್ ನೀಡುತ್ತಿದ್ದಾರೆ.

Comments are closed.