ಕರ್ನಾಟಕ

ಬಿಬಿಸಿ ವಾಹಿನಿಯ 2016 ನೇ ಸಾಲಿನ ಪ್ರತಿಷ್ಠಿತ 100 ಅತ್ಯಂತ ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ತಿಮ್ಮಕ್ಕಗೆ ಸ್ಥಾನ

Pinterest LinkedIn Tumblr

saalumarada-thimmakka

ಬೆಂಗಳೂರು : ಕರ್ನಾಟಕದ ಹೆಮ್ಮೆ, ಶತಾಯುಷಿ , ಸಾಲು ಮರದ ತಿಮ್ಮಕ್ಕ ಬಿಬಿಸಿ ವಾಹಿನಿಯ 2016 ನೇ ಸಾಲಿನ  ಪ್ರತಿಷ್ಠಿತ 100 ಅತ್ಯಂತ ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಈ ಪಟ್ಟಿಯಲ್ಲಿ ತಿಮ್ಮಕ್ಕ ( ತಿಮ್ಮಜ್ಜಿ !) ಅತ್ಯಂತ ಹಿರಿಯರೂ ಆಗಿದ್ದಾರೆ.

ಮಕ್ಕಳಿಲ್ಲ ಎಂಬ ಮೂದಲಿಕೆಗೆ ಪ್ರತಿಯಾಗಿ ಸಸಿ ನೆಡಲು ಪ್ರಾರಂಭಿಸಿ 80 ವರ್ಷಗಳಲ್ಲಿ 8,000 ಕ್ಕೂ ಹೆಚ್ಚು ಮರಗಳನ್ನು ಬೆಳೆಸಿದ ಕೀರ್ತಿ ತಿಮ್ಮಕ್ಕನದ್ದು. ಇದೀಗ ವಿಶ್ವದ ವಿವಿಧೆಡೆಗಳಿಂದ ಆಯ್ಕೆಯಾದ ಅತ್ಯಂತ ಪ್ರಭಾವಿ ಉದ್ಯಮಿಗಳು, ಟೆಕ್ಕಿಗಳು, ಸಂಶೋಧಕರು, ಫ್ಯಾಶನ್ ಐಕನ್ ಗಳು ಹಾಗು ಕಲಾವಿದರಲ್ಲಿ ನಮ್ಮ ತಿಮ್ಮಕ್ಕನೂ ಸ್ಥಾನ ಪಡೆದಿದ್ದಾರೆ.

ತಿಮ್ಮಕ್ಕ ಅಲ್ಲದೆ ಸಾಂಗ್ಲಿಯ ಗೌರಿ ಚಿಂದಾರ್ಕರ್ , ಚೆನ್ನೈನ ಮಲ್ಲಿಕಾ ಶ್ರೀನಿವಾಸನ್ , ಮುಂಬೈಯ ನೇಹಾ ಸಿಂಗ್ ಹಾಗು ನಟಿ ಸನ್ನಿ ಲಿಯೋನ್ ಈ ಪಟ್ಟಿಯಲ್ಲಿರುವ ಇತರ ಭಾರತೀಯರು.

Comments are closed.