ಕರ್ನಾಟಕ

ಭಾರತೀಯ ವಾಯುಪಡೆ ವಿಂಗ್ ಕಮಾಂಡರ್ ಆಗಿರುವ ರಾಜಶೇಖರ ರೆಡ್ಡಿ ಮನೆಯಲ್ಲಿದ್ದ ಕೋಟ್ಯಂತರ ರು. ಮೌಲ್ಯದ ಮಾದಕ ವಸ್ತು ವಶ

Pinterest LinkedIn Tumblr

32

ಬೆಂಗಳೂರು: ಹೊರ ರಾಜ್ಯಗಳಿಗೆ ಮಾದಕ ವಸ್ತು ಪೂರೈಸುತ್ತಿದ್ದ ಆರೋಪದಡಿ ಬಂಧತವಾಗಿರುವ ಭಾರತೀಯ ವಾಯುಪಡೆ ವಿಂಗ್ ಕಮಾಂಡರ್ ಆಗಿರುವ ರಾಜಶೇಖರ ರೆಡ್ಡಿ ಮನೆಯಲ್ಲಿ ಸುಮಾರು 9.1 ಕೆ.ಜಿ. ಮಾದಕ ವಸ್ತುವನ್ನು ವಶಪಡಿಸಿಕೊಳ್ಳಲಾಗಿದೆ.

ಎನ್‌ಸಿಬಿ ಬೆಂಗಳೂರು ದಳದ ಅಧಿಕಾರಿಗಳು ಸಿಕಂದರಬಾದ್‌ನ ವಿದ್ಯಾಪುರಿಯಲ್ಲಿರುವ ವಿಂಗ್‌ ಕಮಾಂಡರ್‌ಗೆ ಸೇರಿದ ಮನೆ ಮೇಲೆ ದಾಳಿ ನಡೆಸಿದ್ದು, ಈ ವೇಳೆ ಮಾದಕ ವಸ್ತುಗಳು ಸಿಕ್ಕಿವೆ. ಅದಕ್ಕೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 9 ಕೋಟಿ ರೂ. ಬೆಲೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿದ್ಯಾಪುರಿಯಲ್ಲಿ ಮನೆಯೊಂದನ್ನು ಬಾಡಿಗೆ ಪಡೆದ ವಾಯುಪಡೆಯ ವಿಂಗ್‌ ಕಮಾಂಡರ್‌ ರಾಜಶೇಖರ ರೆಡ್ಡಿ , ಅಲ್ಲಿ ಮಾದಕ ವಸ್ತು ಉತ್ಪಾದನೆ ಮಾಡಿ ಮಾರಾಟ ಮಾಡುತ್ತಿದ್ದರು. ಮಾದಕ ವಸ್ತು ತಯಾರು ಮಾಡಲು ಅಗತ್ಯವಿದ್ದ ಎಲ್ಲಾ ಸಾಮಾಗ್ರಿಗಳನ್ನು ಮನೆಯಲ್ಲೇ ಶೇಖರಿಸಿ ಇಡಲಾಗಿತ್ತು. ಆ ಎಲ್ಲಾ ವಸ್ತುಗಳನ್ನು ಜಪ್ತಿ ಮಾಡಿದ್ದು, ವಶಪಡಿಸಿಕೊಂಡಿರುವ ವಸ್ತುಗಳನ್ನು ಹೈದ್ರಾಬಾದ್‌ನಲ್ಲಿರುವ ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ವಿಜ್ಞಾನಿಯಾಗಿದ್ದ ವೆಂಕಟರಾಮ ರಾವ್‌ ಹಾಗೂ ಅವರ ಪತ್ನಿ ಪ್ರೀತಿ ಎಂಬುವವರನ್ನು ಈ ಹಿಂದೆ ಎನ್‌ಸಿಬಿ ಪೊಲೀಸರು ಬಂಧಿಸಿದ್ದರು. ಇದೇ ವೇಳೆ ಹೈದ್ರಾಬಾದ್‌ನಲ್ಲಿ ಏಕಕಾಲದಲ್ಲಿ ದಾಳಿ ಮಾಡಿದ ತಂಡ ಹೈದ್ರಾಬಾದ್‌ ಮೂಲದ ರವಿಶಂಕರ ರಾವ್‌ ಸಿಕ್ಕಿ ಬಿದ್ದಿದ್ದರು. ವಿಚಾರಣೆ ವೇಳೆ ಆರೋಪಿಗಳು ವಾಯುಪಡೆಯ ವಿಂಗ್‌ಕಮಾಂಡರ್‌ ರಾಜಶೇಖರ ರೆಡ್ಡಿ ಅವರ ಬಗ್ಗೆ ಮಾಹಿತಿ ನೀಡಿದ್ದರು. ಅವರು ನೀಡಿದ ಮಾಹಿತಿ ಆಧಾರದ ಮೇಲೆ ದಾಳಿ ಮಾಡಿದ ಅಧಿಕಾರಿಗಳು ಮಹಾರಾಷ್ಟ್ರದ ನಾಂದೇವಾಡದಲ್ಲಿ ಕೆಲಸ ಮಾಡುತ್ತಿದ್ದ ವಿಂಗ್‌ಕಮಾಂಡರ್‌ ರಾಜಶೇಖರ ರೆಡ್ಡಿಯನ್ನು ಈ ಹಿಂದೆಯೇ ಬಂಧಿಸಿದ್ದರು.

Comments are closed.