
ಬೆಂಗಳೂರು: ತನಗೆ ಮೋಸ ಮಾಡಿ ಮತ್ತೊಬ್ಬಳನ್ನು ಮದುವೆಯಾಗಿ ಮನೆಗೆ ಕರೆ ತಂದಿದ್ದ ಪತಿಗೆ, ಮೊದಲ ಪತ್ನಿ ಮತ್ತು ಆಕೆಯ ಸಂಬಂಧಿಕರು ಗೂಸಾ ನೀಡಿದ ಘಟನೆ ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ನಡೆದಿದೆ.
ಮಂಜುಳಾ ಮತ್ತು ನವೀನ್‌ಗೆ ಕಳೆದೆರಡು ವರ್ಷಗಳ ಹಿಂದೆ ಮದುವೆಯಾಗಿತ್ತು. ಇತ್ತೀಚಿಗೆ ಮಂಜುಳಾ ಡೆಲಿವರಿಗೆಂದು ತವರಿಗೆ ಹೋಗಿದ್ದರು. ಅಷ್ಟರಲ್ಲಿ ನವೀನ್ ಮತ್ತೊಂದು ಮದುವೆಯಾಗಿದ್ದಾನೆ. ಇದು ಮೊದಲ ಪತ್ನಿಗೆ ತಿಳಿಯುತ್ತಿದ್ದಂತೆ ತನ್ನ ಕುಟುಂಬದವರೊಂದಿಗೆ ಬಂದು ನವೀನ್‌ಮತ್ತು ಆತನ ಎರಡನೆಯ ಪತ್ನಿ ಪ್ರಿಯಾಂಕಾಗೆ ಗೂಸಾ ನೀಡಿದ್ದಾಳೆ.
ಈ ಕುರಿತು ಪ್ರತಿಕ್ರಿಯಿಸಿರುವ ನವೀನ್, ನಾನು ಮಂಜುಳಾನ್ನು ಮದುವೆಯಾಗುವ ಮೊದಲೇ ಪ್ರಿಯಾಂಕಾಳನ್ನು ಪ್ರೀತಿಸಿದ್ದೆ. ಇಬ್ಬರಿಗೂ ಮೋಸ ಮಾಡಲಾರೆ. ಸಾಕುತ್ತೇನೆ ಎನ್ನುತ್ತಾನೆ. ಆದರೆ ಮಂಜುಳಾ ಮಾತ್ರ ನನ್ನ ಗಂಡನನ್ನು ಆಕೆಗೆ ಬಿಟ್ಟುಕೊಡಲಾರೆ ಎಂದು ಪಟ್ಟು ಹಿಡಿದಿದ್ದಾಳೆ. ಚನ್ನರಾಯನಪಟ್ಟಣ ಪೊಲೀಸ್ ಠಾಣೆಯಲ್ಲಿ ಈ ಘಟನೆ ನಡೆದಿದೆ.
Comments are closed.