ಕರ್ನಾಟಕ

ಈ ಬಸ್ ಈ ಡ್ರೈವರ್ ಗೆ ಮಗು ಇದ್ದಂತೆ

Pinterest LinkedIn Tumblr

bus-newಬೆಂಗಳೂರು: ಇವರ ಹೆಸರು ಆರ್. ಸತೀಶ್. ಬಿಎಂಟಿಸಿ ಬಸ್ ಚಾಲಕ. ಈತ ಇತರ ಡ್ರೈವರ್ ಗಳಂತೆ ಅಲ್ಲ. ಯಾಕಂದರೇ ಈತ ತಾನು ಓಡಿಸುವ ಬಸ್ ಅನ್ನು ಪ್ರತಿ ದಿವ ಸ್ವಚ್ಛಗೊಳಿಸಿ ಬಸ್ ಅನ್ನು ನೀರಿನಿಂದ ತೊಳೆಯುತ್ತಾನೆ. ಜೊತೆಗೆ ಬಸ್ ನಲ್ಲಿ ಸ್ವಂತ ಖರ್ಚಿನಲ್ಲಿ ಸ್ಪೀಕರ್ ಅಳವಡಿಸಿದ್ದಾನೆ. ಪ್ರತಿ ತಿಂಗಳು ಕನಿಷ್ಠ ಪಕ್ಷ 1 ಸಾವಿರ ರೂಪಾಯಿಯನ್ನು ಬಸ್ ಗಾಗಿ ಖರ್ಚು ಮಾಡುತ್ತಾನೆ.
ಕೆಎ-57 ಎಫ್ 432 ಬಸ್ 201 Q, ಇದು ಪ್ರತಿದಿನ ಸಿಲ್ಕ್ ಬೋರ್ಡ್ ನಿಂದ ಜೀವನ್ ಭೀಮಾ ನಗರಕ್ಕೆ ಸಂಚರಿಸುತ್ತದೆ. ಆಟೋ ಡ್ರೈವರ್ ಆಗಿದ್ದ ಸತೀಶ್ 8 ವರ್ಷಗಳ ಹಿಂದೆ ಬಿಎಂಟಿಸಿ ಚಾಲಕರಾಗಿ ಸೇರಿಕೊಂಡರು. ಇದುವರೆಗೂ ಸತೀಶ್ ನಿಂದ ಯಾವುದೇ ಸಣ್ಣಪುಟ್ಟ ತೊಂದರೆಗಳು ಆಗಿಲ್ಲ. ಅಷ್ಟು ಸುರಕ್ಷಿಕವಾಗಿ ಚಾಲನೆ ಮಾಡುತ್ತಾರೆ.
ಇವರು ಶಾಲಾ ಮಕ್ಕಳನ್ನ ಕರೆದೊಯ್ಯುವ ಬಸ್ ಗೆ ಚಾಲಕ. ಮಕ್ಕಳನ್ನ ಸುರಕ್ಷಿತವಾಗಿ ಕರೆದುಕೊಂಡು ಹೋಗಿ, ಅಷ್ಟೇ ಸುರಕ್ಷಿತವಾಗಿ ವಾಪಸ್ ಮನೆಗೆ ಕರೆದುಕೊಂಡು ಬಂದು ಬಿಡುತ್ತಾರೆ. ಹೀಗಾಗಿ ಮಕ್ಕಳ ಪೋಷಕರು ಸತೀಶ್ ಅವರನ್ನೇ ಚಾಲಕರನ್ನಾಗಿ ಮುಂದುವರಿಸಬೇಕೆಂಗು ಸಾರಿಗೆ ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.
ಬಿಎಂಟಿಸಿಯಲ್ಲಿ ಕೆಲಸ ಮಾಡುತ್ತಿರುವುದು ನನಗೆ ಹೆಮ್ಮೆಯ ವಿಷಯ ಎಂದು ಪ್ರತಿದಿನ ಶಿಸ್ತಾಗಿ ಬರುವ ಸತೀಶ್ ರೆಡ್ಡಿ ಹೇಳುತ್ತಾರೆ. 5 ವರ್ಷಗಳ ಹಿಂದೆ ಇಲಾಖೆಯ ಹಿರಿಯ ಅಧಿಕಾರಿಗಳು ನನಗೆ ಹೊಸ ಬಸ್ ನ ಕೀ ನೀಡಿದಾಗ ನಾನು ತುಂಬಾ ಸಂಭ್ರಮಸಿದ್ದೆ. ವರ್ಷಗಳು ಕಳೆಯುತ್ತಿದ್ದಂತೆ ನಾನು ಬಸ್ ಜೊತೆ ಒಂದು ಭಾವನಾತ್ಮಕ ಸಂಬಂಧ ಬೆಳೆಸಿಕೊಂಡಿದ್ದೇನೆ. ಬಿಎಂಟಿಸಿ ಬಸ್ ಅನ್ನು ನನ್ನ ಸ್ವಂತ ವಾಹನದಂತೆ ಭಾವಿಸಿದ್ದೇನೆ. ಬಸ್ ಗಾಗಿ ಸ್ವಂತ ಹಣದಿಂದ ಖರ್ಚು ಮಾಡಬೇಡ ಎಂದು ಹಲವು ಸಹೋದ್ಯೋಗಿಗಳು ನನಗೆ ಸಲಹೆ ನೀಡಿದರು, ಆದರೆ ಬಸ್ ಗಾಗಿ ಮಾಡುವ ಖರ್ಚನ್ನು ನಾನು ನಿಲ್ಲಿಸಿಲ್ಲ ಎಂದು ಸತೀಶ್ ತಿಳಿಸಿದ್ದಾರೆ.
ತುಂಬಾ ಜಾಗರೂಕತೆಯಿಂದ ಚಾಲನೆ ಮಾಡುವುದರಿಂದಾಗಿ ಬಸ್ ಗೆ ಯಾವುದೇ
ಹಾನಿಯಾಗಿಲ್ಲ. ಬಸ್ ಇನ್ನು ಹೊಸದರಂತಿರುವುದರಿಂದ ಹಲವು ಜನ ಇದನ್ನು ಹವನಿಯಂತ್ರಿತ ವೋಲ್ವೋ ಬಸ್ ರೀತಿ ಕಾಣುತ್ತದೆ ಎಂದು ಹೇಳುತ್ತಾರೆ.
ನನ್ನ ಬಗ್ಗೆ ಪ್ರಯಾಣಿಕರು ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದ್ದರಿಂದ 2013 ರಲ್ಲಿ ನನಗೆ ಸಾರಿಗೆ ಇಲಾಖೆ ಪ್ರಶಸ್ತಿ ನೀಡಿದೆ ಎಂದು ಸತೀಶ್ ತಿಳಿಸಿದ್ದಾರೆ, ತಾವು ಬಸ್ ಅನ್ನು ಉತ್ತಮ ಸ್ಥಿತಿಯಲ್ಲಿ ಇಟ್ಟಿರುವುದರಿಂದ ಬಸ್ ಒಳ್ಳೆಯ ಮೈಲೇಜ್ ಕೊಡುತ್ತದೆ ಎಂದು ಅವರು ಹೇಳಿದ್ದಾರೆ.
ಸತೀಶ್ ಬೇರೆ ಡ್ರೈವರ್ ಗಳ ಹಾಗೆ ರಜೆ ತೆಗೆದುಕೊಳ್ಳುವುದಿಲ್ಲ. ಪ್ರತಿ 20 ಸಾವಿರ ಕಿ.ಮೀ ಬಸ್ ಓಡಿದ ಮೇಲೆ ಸರ್ವೀಸ್ ಗೆ ಬಿಡಲಾಗುತ್ತದೆ. ಆಗ ಮಾತ್ರ ಸತೀಶ್ ರಜೆ ತೆಗೆದುಕೊಳ್ಳುತ್ತಾರೆ ಎಂದು ಬಿಎಂಟಿಸಿ ಅಧಿಕಾರಿಗಳು ಹೇಳಿದ್ದಾರೆ.

Comments are closed.