ಗಲ್ಫ್

ಶಾರ್ಜಾದಲ್ಲಿ ಯಶಸ್ವಿಯಾಗಿ ಮೂಡಿಬಂದ “ಮಧ್ಯ ಪ್ರಾಚ್ಯ ಕನ್ನಡ ಸಾಹಿತ್ಯ ಸಮ್ಮೇಳನ “

Pinterest LinkedIn Tumblr

sharjah-kannada-sammelana-2016-016

Photo: Ashok Belman

ದುಬೈ: ದುಬೈನ ಧ್ವನಿ ಪ್ರತಿಷ್ಟಾನ ಸಂಸ್ಥೆ ಏರ್ಪಡಿಸಿದ್ದ “ಮಧ್ಯ ಪ್ರಾಚ್ಯ ಕನ್ನಡ ಸಾಹಿತ್ಯ ಸಮ್ಮೇಳನ ” ಶುಕ್ರವಾರ ಶಾರ್ಜಾದ ಯಕ್ಸ್ಪೋ ಸೆಂಟರ್ ನಲ್ಲಿ ಬಹಳ ಯಶಸ್ವಿಯಾಗಿ ಮೂಡಿ ಬಂತು. ಸಮ್ಮೇಳನವನ್ನು ಜಾನಪದ ತಜ್ಞ ಡಾ. ಗೊ.ರು. ಚೆನ್ನಬಸಪ್ಪ ಉದ್ಘಾಟಿಸಿದರು.

ಸಮ್ಮೇಳನದಲ್ಲಿ ‘ಅನಿವಾಸಿಯ ಅಂತರಾತ್ಮ’ ಗೋಷ್ಠಿಯಲ್ಲಿ ಮಾತನಾಡಿದ ಕುವೈತ್‌ ತುಳು ಕೂಟದ ಅಧ್ಯಕ್ಷ ಎಲಿಯಾಸ್‌ ಸಾಂಕ್ಟಿಸ್‌, ‘ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ವಾಸವಾಗಿರುವ ಕನ್ನಡಿಗರ ಹಿತರಕ್ಷಣೆಗಾಗಿ ವಿಶೇಷ ಅಧಿಕಾರಿಯೊಬ್ಬರನ್ನು ನೇಮಿಸಬೇಕು’ ಎಂದು ಮನವಿ ಮಾಡಿದರು.

sharjah-kannada-sammelana-2016-001

sharjah-kannada-sammelana-2016-002

sharjah-kannada-sammelana-2016-003

sharjah-kannada-sammelana-2016-004

sharjah-kannada-sammelana-2016-005

sharjah-kannada-sammelana-2016-006

sharjah-kannada-sammelana-2016-007

sharjah-kannada-sammelana-2016-008

sharjah-kannada-sammelana-2016-009

sharjah-kannada-sammelana-2016-010

sharjah-kannada-sammelana-2016-011

sharjah-kannada-sammelana-2016-012

ಈಚೆಗೆ ಕುವೈತ್‌ನಲ್ಲಿ ಸತ್ಯನಾರಾಯಣ ಪೂಜೆ ಮಾಡಿ ದೇಶದಿಂದಲೇ ಹೊರದಬ್ಬಿಸಿಕೊಂಡ ಕನ್ನಡಿಗರ ಸಂಕಷ್ಟವನ್ನು ಪ್ರಸ್ತಾಪಿಸಿದ ಅವರು, ‘ಇಂತಹ ಸಣ್ಣಪುಟ್ಟ ಸಮಸ್ಯೆಗಳ ನಿವಾರಣೆಗಾಗಿ ದೇಶದ ದೂತಾವಾಸದ ಮೊರೆ ಹೋಗುವುದು ಸುಲಭವಲ್ಲ’ ಎಂದರು.

ಒಮನ್‌ನ ಉದ್ಯಮಿ ಶಶಿಧರ ಶೆಟ್ಟಿ, ಕತಾರ್‌ನ ತುಳು ಕೂಟದ ಅಧ್ಯಕ್ಷ ರವಿ ಶೆಟ್ಟಿ ಅವರೂ ಮಾತನಾಡಿದರು.

sharjah-kannada-sammelana-2016-013

sharjah-kannada-sammelana-2016-014

sharjah-kannada-sammelana-2016-015

sharjah-kannada-sammelana-2016-017

sharjah-kannada-sammelana-2016-018

sharjah-kannada-sammelana-2016-019

sharjah-kannada-sammelana-2016-020

sharjah-kannada-sammelana-2016-021

sharjah-kannada-sammelana-2016-022

sharjah-kannada-sammelana-2016-023

sharjah-kannada-sammelana-2016-024

ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಅಬುದಾಭಿಯ ಕರ್ನಾಟಕ ಸಂಘದ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ, ‘ಅನಿವಾಸಿ ಭಾರತೀಯರಿಗೆ ಮತದಾನದ ಅಧಿಕಾರ ನೀಡಬೇಕು’ ಎಂದು ಒತ್ತಾಯಿಸಿದರು.

‘ಸಾಹಿತ್ಯ ಮತ್ತು ಸಮಕಾಲೀನತೆ’ ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಬರಗೂರು ರಾಮಚಂದ್ರಪ್ಪ ಮಾತನಾಡಿ, ‘ಪಂಪನ ಕಾಲದಿಂದಲೂ ಕನ್ನಡ ಸಮಕಾಲೀನ ಪ್ರಜ್ಞೆಯನ್ನು ಉಳಿಸಿಕೊಂಡು ಬಂದಿದೆ’ ಎಂದರು. ‘ಕನ್ನಡ ಭಾಷೆಯನ್ನು ತಂತ್ರಜ್ಞಾನದ ಹೊಸ ಅಗತ್ಯಗಳಿಗೆ ಒಗ್ಗಿಸುವ ಕೆಲಸ ಆಗಬೇಕು’ ಎಂದೂ ಅವರು ಆಶಿಸಿದರು.

sharjah-kannada-sammelana-2016-025

sharjah-kannada-sammelana-2016-026

sharjah-kannada-sammelana-2016-027

sharjah-kannada-sammelana-2016-029

sharjah-kannada-sammelana-2016-030

sharjah-kannada-sammelana-2016-031

sharjah-kannada-sammelana-2016-032

sharjah-kannada-sammelana-2016-033

sharjah-kannada-sammelana-2016-034

sharjah-kannada-sammelana-2016-036

ಗೋಷ್ಠಿಯಲ್ಲಿ ದುಬೈನ ಲೇಖಕರಾದ ಸುಧಾಕರ ರಾವ್ ಪೇಜಾವರ, ಗೋಪಿನಾಥ ರಾವ್‌ ಮತ್ತು ಅಬುದಾಭಿಯ ಬಿ.ಕೆ. ಗಣೇಶ್‌ ರೈ ಮಾತನಾಡಿದರು. ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಜಾನಪದ ತಜ್ಞ ಡಾ. ಗೊ.ರು. ಚೆನ್ನಬಸಪ್ಪ ಅವರು, ದುಬೈನಲ್ಲಿ ಕನ್ನಡದ ಪ್ರಜ್ಞೆಯನ್ನು ವಿಸ್ತರಿಸುತ್ತಿರುವ ಧ್ವನಿ ಪ್ರತಿಷ್ಠಾನದ ಕಾರ್ಯವನ್ನು ಶ್ಲಾಘಿಸಿದರು.

ಕವಿ ಜರಗನಗಳ್ಳಿ ಅಧ್ಯಕ್ಷತೆಯಲ್ಲಿ ನಡೆದ ‘ಕಾವ್ಯಧಾರೆ’ ಕವಿಗೋಷ್ಠಿಯಲ್ಲಿ ಇರ್ಷಾದ್‌ ಮೂಡುಬಿದಿರೆ, ಆರತಿ ಘಾಟಿಕರ್‌, ಪ್ರಕಾಶ್‌ ರಾವ್‌ ಪಯ್ಯಾರ್‌, ಅವನೀಶ್ ಭಟ್‌ ಮುಂತಾದ ಕವಿಗಳು ಹನಿಗವನ ವಾಚನ ಮಾಡಿದರು. ಕಾವೇರಿ ಸಂಕಷ್ಟವೂ ಇಲ್ಲಿಯೂ ಪ್ರಸ್ತಾಪವಾಯಿತು.

sharjah-kannada-sammelana-2016-037

sharjah-kannada-sammelana-2016-038

sharjah-kannada-sammelana-2016-039

sharjah-kannada-sammelana-2016-040

sharjah-kannada-sammelana-2016-041

sharjah-kannada-sammelana-2016-042

sharjah-kannada-sammelana-2016-043

sharjah-kannada-sammelana-2016-044

sharjah-kannada-sammelana-2016-045

sharjah-kannada-sammelana-2016-046

sharjah-kannada-sammelana-2016-047

sharjah-kannada-sammelana-2016-048

‘ಪ್ರಜಾವಾಣಿ’ಯ ಕಾರ್ಯನಿರ್ವಾಹಕ ಸಂಪಾದಕ ಪದ್ಮರಾಜ ದಂಡಾವತಿ ಅಧ್ಯಕ್ಷತೆಯಲ್ಲಿ ನಡೆದ ‘ಮಾಧ್ಯಮ ಮತ್ತು ಇತ್ತೀಚಿನ ಸವಾಲುಗಳು’ ಗೋಷ್ಠಿಯಲ್ಲಿ ಪತ್ರಕರ್ತರಾದ ಶಿವಾನಂದ ತಗಡೂರು, ವಾಲ್ಟರ್‌ ನಂದಳಿಕೆ, ವಿನಯ್‌ ಕುಮಾರ್‌ ನಾಯಕ್‌ ಭಾಗವಹಿಸಿದ್ದರು. ಜಾಹೀರಾತು ಮತ್ತು ಸುದ್ದಿಯ ನಡುವಿನ ಅಂತರ ತೆಳುವಾಗುತ್ತಿರುವ ಬಗ್ಗೆ ಗೋಷ್ಠಿಯಲ್ಲಿ ಆತಂಕ ವ್ಯಕ್ತವಾಯಿತು.

sharjah-kannada-sammelana-2016-049

sharjah-kannada-sammelana-2016-050

sharjah-kannada-sammelana-2016-051

sharjah-kannada-sammelana-2016-053

sharjah-kannada-sammelana-2016-054

sharjah-kannada-sammelana-2016-055

sharjah-kannada-sammelana-2016-056

sharjah-kannada-sammelana-2016-057

sharjah-kannada-sammelana-2016-058

sharjah-kannada-sammelana-2016-059

sharjah-kannada-sammelana-2016-061

sharjah-kannada-sammelana-2016-062

sharjah-kannada-sammelana-2016-063

sharjah-kannada-sammelana-2016-064

ಇದೇ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ಅವರಿಗೆ ‘ಧ್ವನಿ ಶ್ರೀ ರಂಗ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಅವರ ಅನುಪಸ್ಥಿತಿಯಲ್ಲಿ ಬರಗೂರು ರಾಮಚಂದ್ರಪ್ಪ ಪ್ರಶಸ್ತಿ ಸ್ವೀಕಾರ ಮಾಡಿದರು. ರಂಗಕರ್ಮಿ ಶ್ರೀನಿವಾಸ ಜಿ. ಕಪ್ಪಣ್ಣ ಅವರು ಉಮಾಶ್ರೀ ನಡೆದು ಬಂದ ದಾರಿಯನ್ನು ಪರಿಚಯಿಸಿದರು.

ವಾಣಿಜ್ಯ ಕ್ಷೇತ್ರದ ಸಾಧನೆಗಾಗಿ ಯುಎಇ ಎಕ್ಸ್‌ಚೇಂಜ್‌ ಅಧ್ಯಕ್ಷ ವೈ. ಸುಧೀರ್‌ ಕುಮಾರ್‌ ಶೆಟ್ಟಿ ಅವರನ್ನು ಪುರಸ್ಕರಿಸಲಾಯಿತು. ಧ್ವನಿ ಪ್ರತಿಷ್ಠಾನದ ಅಧ್ಯಕ್ಷ ಪ್ರಕಾಶ್‌ ರಾವ್‌ ಪಯ್ಯಾರ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಮುರುಗೇಶ್‌ ಗಾಜರೆ ವಂದಿಸಿದರು. ಸ್ಥಳೀಯ ಕಲಾವಿದರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟು ಸಮ್ಮೇಳನಕ್ಕೆ ಕಳೆ ತುಂಬಿದರು.

Comments are closed.