ಕರಾವಳಿ

ಸೌದಿಯಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಮಾಲತಿ ನಾಯ್ಕನ್ನು ತಾಯಿನಾಡಿಗೆ ಕಳುಹಿಸುವಲ್ಲಿ ಸೌಹಾರ್ದತೆ ಮೆರೆದ ಇಂಡಿಯನ್ ಸೋಷಿಯಲ್ ಫಾರಂ

Pinterest LinkedIn Tumblr

malathi

ಸೌದಿ ಅರಬಿಯದಲ್ಲಿರುವ ಅನಿವಾಸಿ ಭಾರತೀಯರ ಸಮಸ್ಯೆಗಳಿಗೆ ಸದಾ ಸ್ಪಂದಿಸುವ, ಸಮಾಜಸೇವೆಗಳ ಮೂಲಕ ಪ್ರಖ್ಯಾತಿ ಪಡೆದಿರುವ ಇಂಡಿಯನ್ ಸೋಷಿಯಲ್ ಫಾರಂ ತನ್ನ ಪ್ರಶಂಸೆಯ ಕಿರೀಟಕ್ಕೆ ಮತ್ತೊಂದು ಗರಿಯನ್ನು ಸೇರಿಸಿದೆ.

ಸುಮಾರು ಓಂಭತ್ತು ತಿಂಗಳುಗಳ ಹಿಂದೆ ಉತ್ತಮ ಜೀವನದ ಆಸೆಯನ್ನು ಅರಸಿಕೊಂಡು ಉಡುಪಿ ಮೂಲದ ಮಾಲತಿ ನಾಯ್ಕ ರವರು ಸೌದಿ ಅರೇಬಿಯಾದ ರಾಜಧಾನಿ ರಿಯಾದಿನಿಂದ ಸುಮಾರು ಆರ್ನೂರು ಕಿ.ಮಿ ದೂರ ಇರುವೆ ವಾದಿ ದವಾಸಿರ್ ಎನ್ನುವ ಸ್ಥಳಕ್ಕೆ ನರ್ಸ್ ಕೆಲಸಕ್ಕಾಗಿ ಬಂದಿದ್ದರು.ಆದರೆ ಮಾಲತಿರವರ ಕಫೀಲ್ (ವೀಸಾ ಪ್ರಾಯೊಜಕ)ನ್ನು ಮುಂದಿನ ದಿನಗಳಲ್ಲಿ ತಾನು ಆಸ್ಪತ್ರೆಯಲ್ಲಿ ನರ್ಸ್ ಕೆಲಸ ಕೊಡಸುವುದಾಗಿ ಸಧ್ಯಕ್ಕೆ ತನ್ನ ಮನೆಯಲ್ಲಿ ಮನೆಕೆಲಸ ಮಾಡಿಕೋಂಡಿರುವಂತೆ ಎಂದು ಹೇಳಿದಾಗ ಪ್ರಾರಂಭದಲ್ಲಿ ಇದಕ್ಕೆ ಒಪ್ಪದ ಮಾಲತಿ ಮುಂದೆ ಬೇರೆ ಉಪಾಯವೀಲ್ಲದೆ ಇದಕ್ಕೆ ಒಪ್ಪಿಕೊಳ್ಳುತಾಳೆ.

ಹೀಗೆ ತಾತ್ಕಾಲಿಕವಾಗಿ ಮನೆಕೆಲಸಕ್ಕೇ ಸೇರಿದ ಮಾಲತಿಯು ಮುಂದೆಯೂ ಸಹ ಅವನ ಬೆದರಿಕೆಗೆ ಹೆದರಿ ಕೆಲಸವನ್ನು ಮುಂದುವರೆಸುತ್ತಾಳೆ. ಆದರೆ ಅವಳ ಕಫೀಲ್ ಅವಳಿಗೆ ಸರಿಯಾದ ಸಂಬಳವು ಕೊಡದೆ, ಮನೆಯವರನ್ನು ಸಂಪರ್ಕಿಸಲು ಒಂದು ಮೊಬೈಲನ್ನು ಕೊಡಿಸದೆ ಸತಾಯೀಸಲು ಪ್ರಾರಂಭಿಸಿಸುತ್ತಾನೆ.

ಪರಿಸ್ಥಿತಿಯು ಮಿತಿಮೀರಿದಾಗ ಯಾರು ಇಲ್ಲದ ಸಮಯವನ್ನು ನೋಡಿ ಮನೆಯವರಿಗೆ ಕರೆ ಮಾಡಿ ತನ್ನ ಅಳಲನ್ನು ಹೇಳಿ ಕೊಳ್ಳುತ್ತಾಳೆ.ಈ ಬಗ್ಗೆ ದಿಗಿಲುಗೊಂಡ ಮನೆಯವರು ಮಾಲತಿಯನ್ನು ಹೇಗಾದರು ಮಾಡಿ ಪುನಹ ಸ್ವದೇಶಕ್ಕೆ ಕರೆತರಲು ಪ್ರಯತ್ನಿಸುತ್ತಾರೆ.

ಆದರೆ ಸೌದಿಯಲ್ಲಿ ಯಾರು ಪರಿಚಯದವರು ಇಲ್ಲದ ಕಾರಣ ಕೊನೆಗೆ ಜಿದ್ದಾದಲ್ಲಿರುವ ಉಡುಪಿ ಮೂಲದ ಸಂದೀಪ್ ಶೆಟ್ಟಿಯಲ್ಲಿ ವಿಷಯವನ್ನು ತಿಳಿಸುತ್ತಾರೆ.

ವಿಷಯದ ಗಾಂಭಿರ್ಯತೆಯನ್ನು ಅರ್ಥಮಾಡಿಕೊಂಡ ಸಂದೀಪ್ ಶೆಟ್ಟಿ ನೇರವಾಗಿ ಇಂಡಿಯನ್ ಸೋಷಿಯಲ್ ಫಾರಂನಲ್ಲಿ ಸಹಾಯಕ್ಕಾಗಿ ಕೇಳುತ್ತಾನೆ.

ಸಮಸ್ಯೆಯನ್ನು ಅರಿತ ಇಂಡಿಯನ್ ಸೋಷಿಯಲ್ ಫಾರಂ ರಿಯಾದ್ ಘಟಕವು ಇಸ್ಮಾಯಿಲ್ ಮಂಗಳಪೇಟೆ, ಶಾಹುಲ್ ಹಮೀದ್ ವಾಮಂಜೂರು ಮತ್ತು ಸಯ್ಯದ್ ಅಬ್ದುಲ್ ಹಕ್ಕ್ ರವರ ತಂಡವನ್ನು ರಚಿಸಿ ತಕ್ಷಣವೇ ಸಮಸ್ಯಯ ಪರಿಹಾರಕ್ಕೆ ಧಾವೀಸುತ್ತದೆ.

ಪ್ರಪ್ರಥಮವಾಗಿ ತುಂಬ ಮಾನಸಿಕವಾಗಿ ನೊಂದು, ಆತ್ಮವಿಶ್ವಾಸವನ್ನು ಕಳೆದುಕೊಂಡಿದ್ದ ಮಾಲತಿಗೆ ಕರೆ ಮಾಡಿ ಸಾಂತ್ವನ ಹೇಳಿ ಬಹಳ ಬೇಗನೆ ಸೂಕ್ತ ವ್ಯವಸ್ಥೆಮಾಡಿಕೊಡುವ ಭರವಸೆ ನೀಡಲಾಯಿತು.

ಆದರೆ ತನ್ನ ಮಾಲಿಕನಿಂದ ಬೇಸತ್ತ ಮಾಲತಿಯು ಮನೆಯಿಂದ ಹೊರಕ್ಕೆ ಓಡಿಹೋಗಿ ಇಸ್ಮಾಯಿಲ್ ಮಂಗಳಪೇಟೆ ಮತ್ತು ವಿಷಯ ಶಾಹುಲ್ ಹಮೀದ್ ವಾಮಂಜೂರಿಗೆ ತಿಳಿಸುತ್ತಾಳೆ.ರಿಯಾದಿನಿಂದ ಸಾಕಷ್ಟು ದೂರವಿರುವ ವಾದಿ ದವಾಸಿರಿಗೆ ತಕ್ಷಣ ಹೋಗುವುದು ಕಷ್ಟಸಾದ್ಯ ವಾದುದರೀಂದ ಮತ್ತು ಆಕೆಯನ್ನು ಸುರಕ್ಷಿತ ಸ್ಥಳದಲ್ಲಿರಿಸುವ ಸಲುವಾಗಿ ವಾದಿ ದವಾಸಿರಿನಲಿರುವ ತಮಿಳುನಾಡು ಮೂಲದ ಅಬ್ದುಲ್ ರಹಿಂರವರನ್ನು ಸಂಪರ್ಕಿಸಿ ಅವರ ಪ್ರಾಯೊಜಕನ ಮನೆಯಲ್ಲಿರಿಸುವ ಸಕಲ ವ್ಯವಸ್ತೆ ಮಾಡಲಾಯಿತು.

ಉತ್ತಮ ಸ್ವಭಾವದ ಅವರ ಪ್ರಾಯೊಜಕನು ಮಾಲತಿಯನ್ನು ಸುಮಾರು ಒಂದು ತಿಂಗಳುಗಳ ಕಾಲ ಅವನ ನಿವಾಸದಲ್ಲೇ ಎಲ್ಲ ಸವಲತ್ತುಗಳೊಂದಿಗೆ ತಂಗುವ ವ್ಯವಸ್ಥೆ ಮಾಡುತ್ತಾನೆ.

ಇತ್ತ ಸೋಷಿಯಲ್ ಫಾರಂನ ಸದಸ್ಯರು ಭಾರತಿಯ ರಾಯಭಾರ ಕಚೇರಿಯನ್ನು ನಿರಂತರ ಸಂಪರ್ಕಿಸಿ ಮಾಲತಿಯನ್ನು ಸ್ವದೇಶಕ್ಕೆ ಕಳುಹಿಸಲು ಬೇಕಾದ ಸಿದ್ದತೆಯನ್ನು ಮಾಡುತ್ತಾರೆ.

ಅಂತಿಮವಾಗಿ ಸೋಷಿಯಲ್ ಫಾರಂನ ತಂಡ ಮಾಲತಿಯನ್ನು ಸುರಕ್ಷಿತವಾಗಿ ವಾದಿ ದವಾಸಿರ್ ನಿಂದ ರಿಯಾದಿ ನಲ್ಲಿರುವ ಭಾರತಿಯ ರಾಯಭಾರ ಕಚೇರಿಗೆ ಹಸ್ತಾಂತರೀಸುತ್ತದೆ.

ಇಂಡಿಯನ್ ಸೋಷಿಯಲ್ ಫಾರಂನ ಸಹಯಕ್ಕೆ ಭಾವುಕಳಾದ ಮಾಲತಿಯು ತಮ್ಮ ಋಣ ತೀರಿಸಲು ಅಸದ್ಯವೆಂದು ಕಣ್ಣೀರಿಟ್ಟರು. ಮಾಲತಿಯನ್ನು ಶನಿವಾರ ರಿಯಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಬೆಂಗಳೂರಿಗೆ ಕಳುಹಿಸಿ ಕೊಡಲಾಯೀತು.

ಹೀಗೆ ಮಾಲತಿ ನಾಯ್ಕ್ ಪ್ರಕರಣವು ಇಂಡಿಯನ್ ಸೋಷಿಯಲ್ ಫಾರಂ ಮತ್ತು ಭಾರತಿಯ ರಾಯಭಾರ ಕಚೇರಿಯ ಮಧ್ಯಸ್ಥಿಕೆಯಿಂದ ಸುಖಾಂತ್ಯ ಕಂಡಿದೆ.

ಕೆಲವು ದಿನಗಳ ಹಿಂದೆ ರಮೇಶ್ ಶೆಟ್ಟಿ ಮೃತ ದೇಹವನ್ನು ಸ್ವ ಗ್ರಾಮಕ್ಕೆ ತಲುಪಿಸಲು ಸಕಲ ವ್ಯವಸ್ತೆ ಮಾಡಿದ ಸೋಷಿಯಲ್ ಫಾರಂ ಇಂದು ಮಾಲತಿ ನಾಯ್ಕನ್ನು ತವರೂರು ಕಳುಹಿಸುವ ಮೂಲಕ ಮತ್ತೇ ಸೌಹಾರ್ದತೆ ಮೆರೆದಿದೆ.

Comments are closed.