ಕರ್ನಾಟಕ

ಕಲಬುರ್ಗಿಯವರ ಹತ್ಯೆ ಪ್ರಕರಣದ ತನಿಖೆಗೆ ಬ್ರಾಹ್ಮಣ-ಲಿಂಗಾಯತ ಮೂಲಭೂತವಾದಿಗಳಿಂದ ಅಡ್ಡಿ: ಚಂಪಾ

Pinterest LinkedIn Tumblr

champa

ಧಾರವಾಡ: ಕೋಮುವಾದಕ್ಕೆ ಲಿಂಗಾಯತರು ಸಾಥ್ ನೀಡುತ್ತಿದ್ದು, ಇದು ದುರದೃಷ್ಟಕರ ಎಂದು ಖ್ಯಾತ ಸಾಹಿತಿ ಚಂದ್ರಶೇಖರ್ ಪಾಟೀಲ್ ಅವರು ಮಂಗಳವಾರ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಧಾರವಾಡದಲ್ಲಿ ನಡೆದ ಸಾಹಿತಿ ಎಂ.ಎಂ.ಕಲಬುರ್ಗಿ ಅವರ ಮೊದಲನೇ ವರ್ಷದ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಮಾತನಾಡಿದ ಚಂಪಾ ಅವರು, ಕೋಮುವಾದಿ ಶಕ್ತಿಗಳು ಕಲಬುರ್ಗಿ ಅವರ ಹತ್ಯೆ ಪ್ರಕರಣದ ತನಿಖೆಗೆ ಅಡ್ಡಿಪಡಿಸುತ್ತಿದ್ದು, ಇದರ ಹಿಂದೆ ಆಡಳಿತ ಮತ್ತು ಪ್ರತಿಪಕ್ಷಗಳ ಕೈವಾಡ ಇರುವ ಶಂಕೆ ಇದೆ ಎಂದು ಹೇಳಿದ್ದಾರೆ.

ಬ್ರಾಹ್ಮಣ ಮೂಲಭೂತವಾದಿಗಳು ಅಥವಾ ಲಿಂಗಾಯತ ಮೂಲಭೂತವಾದಿಗಳು ಕಲಬುರ್ಗಿಯವರ ಹತ್ಯೆ ಪ್ರಕರಣದ ತನಿಖೆಗೆ ಅಡ್ಡಿಪಡಿಸುತ್ತಿವೆ ಎಂದು ಆರೋಪಿಸಿದ ಚಂದ್ರಶೇಖರ್ ಪಾಟೀಲ್ ಅವರು, ವೀರಶೈವ ಮತ್ತು ಲಿಂಗಾಯತರು ಕೋಮುವಾದಕ್ಕೆ ಸಾಥ್ ನೀಡುತ್ತಿರುವುದು ದುರದೃಷ್ಟಕರ ಎಂದಿದ್ದಾರೆ.

ಹಿರಿಯ ಸಂಶೋಧಕ ಎಂ.ಎಂ. ಕಲಬುರ್ಗಿಯವರ ಹತ್ಯೆಯಾಗಿ ಒಂದು ವರ್ಷ ಕಳೆದಿದ್ದರೂ, ಹಂತಕರ ಬಂಧಿಸುವಲ್ಲಿ ಸರ್ಕಾರ ವಿಫಲವಾಗಿದೆ.

2015ರ ಆ.30 ರಂದು ಕಲ್ಯಾಣನಗರದಲ್ಲಿ ಡಾ.ಕಲಬುರ್ಗಿಯವರ ಹತ್ಯಾಯಾಗಿದ್ದು. ಘಟನೆ ನಡೆದ ಮರುದಿನವೇ ಸರ್ಕಾರ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿತ್ತು. ಹತ್ಯೆಯಾಗಿ ಸಾಕಷ್ಟು ಸಮಯವಾದರೂ ಹಂತಕರ ಸುಳಿವು ಪತ್ತೆಯಾಗದ ಹಿನ್ನೆಲೆಯಲ್ಲಿ ಅಧಿಕಾರಿಗಳು ತನಿಖೆಯನ್ನು ಚುರುಕುಗೊಳಿಸಿ 22 ತಂಡಗಳನ್ನು ರಚಿಸಿತ್ತು. ಇದರಂತೆ 36ಕ್ಕೂ ಹೆಚ್ಚು ಅಧಿಕಾರಿಗಳು ಹಂತಕರಿಗಾಗಿ ಹುಡುಕಾಡುತ್ತಿದ್ದಾರೆ. ಆದರೆ, ಹತ್ಯೆಯಾಗಿ ಇಂದಿಗೆ ವರ್ಷ ಕಳೆದರೂ ಯಾವುದೇ ಸುಳಿವುಗಳು ಸಿಕ್ಕಲ್ಲ.

Comments are closed.