ಅಂತರಾಷ್ಟ್ರೀಯ

ಪ್ರಣಯಕ್ಕೆ ಮುಂಜಾನೆಯೇ ಒಳ್ಳೆಯ ಸಮಯ…! ಯಾಕೆ ಎಂಬುದು ಇಲ್ಲಿದೆ ಓದಿ…

Pinterest LinkedIn Tumblr

Unprotected-sex1

ಬಹಳಷ್ಟು ಮಂದಿ ತಮ್ಮ ಮುಂಜಾವನ್ನು ವಾಯುವಿಹಾರ ಇಲ್ಲವೆ ಉದ್ಯಾನವನದಲ್ಲಿ ಕಾಲಕಳೆಯಲು ವ್ಯಯಿಸುತ್ತಾರೆ. ಆದರೆ, ಇತ್ತೀಚಿನ ಸಂಶೋಧನೆಯೊಂದು ಮುಂಜಾವಿನಲ್ಲಿ ಪ್ರಣಯದಲ್ಲಿ ತೊಡಗುವುದರಿಂದ ಆರೋಗ್ಯವಾಗಿರಬಹುದು ಎಂಬ ಅಂಶವನ್ನು ಹೊರಗೆಡವಿದೆ.

ಸಂಶೋಧಕರ ಪ್ರಕಾರ, ಮುಂಜಾವಿನಲ್ಲಿ ಪ್ರಣಯದಲ್ಲಿ ತೊಡಗುವವರು ಇತರೆ ವ್ಯಕ್ತಿಗಳಿಗಿಂತ ಆರೋಗ್ಯಕರ ಹಾಗೂ ಉಲ್ಲಾಸಕರ ವ್ಯಕ್ತಿಗಳಾಗಿರುತ್ತಾರಂತೆ. `ಪ್ರಣಯವು ವ್ಯಕ್ತಿಗಳ ರೋಗನಿರೋಧಕ ಶಕ್ತಿಯನ್ನು ಉದ್ದೀಪನಗೊಳಿಸುವುದರೊಂದಿಗೆ ದಿನದ ಉದ್ದಕ್ಕೂ ಅವರು ಆರೋಗ್ಯಕರವಾಗಿರಲು ಸಹಕರಿಸುತ್ತದೆ. ಇಂತಹ ವ್ಯಕ್ತಿಗಳು ಆರೋಗ್ಯವಂತರಾಗಿ ಕಂಗೊಳಿಸುವುದು ಅವರ ಸಹೋದ್ಯೋಗಿಗಳ ಕಣ್ಣಿಗೆ ಢಾಳಾಗಿ ಗೋಚರಿಸುತ್ತದೆ’ ಎಂದು `ಬಿಕಾಸ್ ಇಟ್ ಫೀಲ್ಸ್ ಗುಡ್’ ಎಂಬ ಕೃತಿಯ ಕರ್ತೃ ಹಾಗೂ ಲೈಂಗಿಕ ಸಲಹೆಗಾರ ಡೆಬ್ಬಿ ಹೆರ್ಬೆನಿಕ್ ಹೇಳಿದ್ದಾರೆ.

ಡೆಬ್ಬಿ ಹೆರ್ಬೆನಿಕ್ ಪ್ರಕಾರ, ಲೈಂಗಿಕ ಕ್ರಿಯೆ ಈಸ್ಟ್ರೋಜನ್ ಬಿಡುಗಡೆಯನ್ನು ಉದ್ದೀಪನಗೊಳಿಸಿ, ಕೂದಲು ಗಟ್ಟಿ ಮತ್ತು ಆರೋಗ್ಯಕರವಾಗಿರಲು ಸಹಕರಿಸುತ್ತದೆ. ಲೈಂಗಿಕ ಕ್ರಿಯೆ ಐಜಿಎ ಎಂಬ ರೋಗನಿರೋಧಕ ಬಿಳಿಕಣ ಬಿಡುಗಡೆಯ ಮಟ್ಟವನ್ನು ಹೆಚ್ಚುಗೊಳಿಸುವುದರೊಂದಿಗೆ ಸೋಂಕಿನ ವಿರುದ್ಧ ಹೋರಾಡುವ ಶಕ್ತಿಯನ್ನು ನೀಡುತ್ತದೆ ಎಂದು ಹೇಳುತ್ತಾರೆ. ಈಸ್ಟ್ರೋಜನ್ ಹಾಗೂ ಟೆಸ್ಟಿಸ್ಟಿರೋನ್ ಹಾರ್ಮೋನ್‍ಗಳು ಮುಪ್ಪನ್ನು ತಡೆಯುವ ಶಕ್ತಿಯನ್ನೂ ಹೊಂದಿವೆ ಎನ್ನುತ್ತಾರೆ ಡೆಬ್ಬಿ ಹೆರ್ಬೆನಿಕ್.

Comments are closed.