ಅಂತರಾಷ್ಟ್ರೀಯ

ಮಹಿಳೆಯರೇ ಈ ಆಹಾರವನ್ನು ತಿನ್ನಿ…ಏನು ಉಪಯೋಗ ಮುಂದೆ ಓದಿ…

Pinterest LinkedIn Tumblr

basale

ಊಟ ಬಲ್ಲವನಿಗೆ ರೋಗವಿಲ್ಲ. ಮಾತು ಬಲ್ಲವನಿಗೆ ಜಗಳವಿಲ್ಲ ಎಂಬ ಗಾದೆ ಮಾತಿದೆ. ಯಾವ ಆಹಾರಗಳನ್ನು ಸೇವಿಸಬೇಕು ಎಂಬ ಜ್ಞಾನವನ್ನು ರೂಢಿಸಿಕೊಂಡರೆ ಆರೋಗ್ಯಕರವಾಗಿ ಜೀವನ ನಡೆಸಬಹುದು.

ಅದರಲ್ಲೂ ಮಹಿಳೆಯರು ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಹೆಚ್ಚು. ಆರೋಗ್ಯ ಹಾಗೂ ಸೌಂದರ್ಯದ ಬಗ್ಗೆ ಹೆಚ್ಚಿನ ಗಮನ ನೀಡುವ ಮಹಿಳೆಯರು ಊಟದಲ್ಲಿ ಸರಿಯಾದ ಆಹಾರಗಳನ್ನು ತೆಗೆದುಕೊಳ್ಳುವ ಮೂಲಕ ನಳನಳಿಸುವಂತೆ ಇರಬಹುದು.

ಸರಿಯಾದ ಪ್ರಮಾಣದಲ್ಲಿ ಕ್ಯಾಲೋರಿ ಅಂಶ ಹಾಗೂ ಪೋಷಕಾಂಶಗಳನ್ನು ಸಮ ಪ್ರಮಾಣದಲ್ಲಿ ತೆಗೆದುಕೊಳ್ಳುವುದರಿಂದ ರೋಗ ಹಾಗೂ ವಯಸ್ಸಾಗುವ ಸಮಸ್ಯೆಗಳನ್ನು ದೂರ ಮಾಡಬಹುದು.

ಊಟದಲ್ಲಿ ಹೆಚ್ಚು ನಾರಿನಾಂಶವಿರುವ ಆಹಾರಗಳನ್ನು ಸೇವಿಸಬೇಕು. ಮಹಿಳೆಯರ ಆರೋಗ್ಯ ಕಾಪಾಡುವಲ್ಲಿ ಈ ನಾರಿನಾಂಶವಿರುವ ಬೀಜಗಳು ಸಹಕಾರಿಯಾಗುತ್ತವೆ. ಹೃದಯ ಕಾಯಿಲೆ, ಸ್ತನ ಕ್ಯಾನ್ಸರ್‌ನ ಅಪಾಯವನ್ನು ಇವುಗಳು ತಡೆಗಟ್ಟುತ್ತವೆ.

ಜೀರ್ಣಶಕ್ತಿ ಸಮಸ್ಯೆ, ಸಂಧಿವಾತವನ್ನು ನಾರಿನಾಂಶವಿರುವ ಆಹಾರ ಸೇವನೆಯಿಂದ ನಿಯಂತ್ರಿಸಬಹುದು.

ಬಸಳೆ ಸೊಪ್ಪು ಆರೋಗ್ಯಕ್ಕೆ ಬಹಳ ಒಳ್ಳೆಯದು. ಬಸಳೆ ಸೊಪ್ಪನ್ನು ಮಹಿಳೆಯರು ಪ್ರತಿನಿತ್ಯ ಸೇವಿಸಬೇಕು. ಈ ಸೊಪ್ಪಿನಲ್ಲಿ ಖನಿಜಾಂಶಗಳು ಹೆಚ್ಚಿಸುವುದರಿಂದ ದೈಹಿಕವಾಗಿ ಕಾಡುವ ಹಲವು ಕಾಯಿಲೆಗಳನ್ನು ನಿಯಂತ್ರಿಸಬಹುದು. ತೂಕ ನಿಯಂತ್ರಿಸುವಲ್ಲಿ ಈ ಬಸಳೆ ಸೊಪ್ಪು ಸಹಾಯ ಮಾಡುತ್ತದೆ. ಅಲ್ಲದೆ ಸ್ತನದ ಊತವನ್ನು ಇದು ತಡೆಯುತ್ತದೆ.

ಓಡ್ಸ್ ಸಹ ಆರೋಗ್ಯಕ್ಕೆ ಒಳ್ಳೆಯದು. ಇದು ರಕ್ತದೊತ್ತಡ, ಹೃದಯದ ಆರೋಗ್ಯ ಹಾಗೂ ಜೀರ್ಣಶಕ್ತಿಗೆ ಒಳ್ಳೆಯದು. ಕೊಬ್ಬನ್ನು ನಿಯಂತ್ರಣದಲ್ಲಿಡಲು ಓಡ್ಸ್ ಸಹಾಯ ಮಾಡುತ್ತದೆ. ತೂಕ ಇಳಿಕೆಗೂ ಓಡ್ಸ್ ಸೇವನೆ ಒಳ್ಳೆಯದು. ಹಾಲು ಸಹ ಮಹಿಳೆಯರಿಗೆ ಆರೋಗ್ಯಕ್ಕೆ ಒಳ್ಳೆಯದು. ಇದು ಎನರ್ಜಿ ಡ್ರಿಂಕ್‌ನಂತೆ ಕೆಲಸ ಮಾಡುತ್ತದೆ. ಕ್ಯಾಲ್ಸಿಯಂ ಕೊರತೆ ಇರುವ ಮಹಿಳೆಯರು ಹೆಚ್ಚಿನ ಹಾಲನ್ನು ಸೇವಿಸಬೇಕು. ಯಾವುದೇ ವಯಸ್ಸಿನ ಮಹಿಳೆಯರು ಹಾಲನ್ನು ತೆಗೆದುಕೊಳ್ಳಬಹುದು. ಇದರಿಂದ ಕ್ಯಾಲ್ಸಿಯಂ ಕೊರತೆಯನ್ನು ನೀಗಲು ಸಾಧ್ಯ.

ಟಮೊಟೊ ಸಹ ಆರೋಗ್ಯಕ್ಕೆ ಒಳ್ಳೆಯದು. ಟಮೊಟೊದಲ್ಲಿ ಲೈಕೊಪೆನ್ ಎಂಬ ಅಂಶವಿದ್ದು, ಇದು ಮಹಿಳೆಯರ ಸ್ತನ ಕ್ಯಾನ್ಸರನ್ನು ತಡೆಯಲು ಸಹಾಯ ಮಾಡುತ್ತದೆ. ಜೊತೆಗೆ ಹೃದಯದ ಆರೋಗ್ಯವನ್ನು ಉತ್ತಮವಾಗಿ ಇಡುತ್ತದೆ.

ಮೀನು ಸಹ ಆರೋಗ್ಯಕ್ಕೆ ಒಳ್ಳೆಯದು. ಮಾಂಸಾಹಾರಿಗಳು ಎಳೆಗಪ್ಪು ಮೀನು ತಿನ್ನುವುದರಿಂದ ಆರೋಗ್ಯ ಕಾಪಾಡಿಕೊಳ್ಳಬಹುದು. ಮೀನಿನಲ್ಲಿರುವ ಅಂಶಗಳು ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು.

ಮೀನು ಸೇವನೆ ಅಭ್ಯಾಸವಿರುವ ಮಹಿಳೆಯರು ದಿನವೂ ಮೀನು ಸೇವಿಸುವುದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

Comments are closed.