ದೇಹದಲ್ಲಿ ಎಲ್ಲಿ ನೋವಾದರೂ ಅದನ್ನು ಸಹಿಸಿಕೊಳ್ಳುವುದು ಕಷ್ಟ ಸಾಧ್ಯವಾಗುತ್ತದೆ. ದೇಹದಲ್ಲಿ ರೋಗ ನಿರೋಧಕ ಶಕ್ತಿ ಕುಂದಿದಾಗ ನೋವು ಸಹಿಸಿಕೊಳ್ಳಲು ಕಷ್ಟವಾಗುತ್ತದೆ.
ದೇಹದಲ್ಲಿನ ನೋವುಗಳಿಗೆ ಬರಿಯ ಸೋಂಕುಗಳು ಮಾತ್ರ ಕಾರಣವಲ್ಲ. ಜೀವನಶೈಲಿ, ಆಹಾರ ಕ್ರಮಗಳು ನೋವಿಗೆ ಕಾರಣವಾಗುತ್ತದೆ. ದೇಹಕ್ಕೆ ಬರುವ ನೋವುಗಳಲ್ಲಿ ಕಿವಿನೋವು ಕೂಡ ಒಂದಾಗಿದ್ದು, ದೊಡ್ಡವರು ಮತ್ತು ಮಕ್ಕಳು ಎಂಬ ತಾರತಮ್ಯವಿಲ್ಲದೆ ಕಾಡುತ್ತದೆ. ಕಿವಿನೋವು ಹೆಚ್ಚಾಗಿದ್ದರೆ, ಕಿವಿ ಕೇಳುವುದಕ್ಕೆ ತೊಂದರೆ ಆಗುತ್ತದೆ.
ಕಿವಿನೋವಿಗೆ ಹಲವು ಕಾರಣಗಳಿವೆ. ದವಡೆಯ ಸಂಧಿವಾತ, ಕಿವಿಯ ಮೇಣ, ಕಿವಿಯಲ್ಲಿ ಏನಾದರೂ ಸಿಕ್ಕಿಹಾಕಿಕೊಳ್ಳುವುದು, ಒತ್ತಡದ ಬದಲಾವಣೆ, ಕಿವಿಯಲ್ಲಿ ಗಾಯ, ಕಿವಿಯ ತಮಟೆಯಲ್ಲಿ ತೂತು, ನೋಯುತ್ತಿರುವ ಗಂಟಲು ಮತ್ತು ಸೈನಸ್‌ಗಳಿಂದ ಕಿವಿನೋವು ಬರುತ್ತದೆ.
ಕಿವಿನೋವು ಆರಂಭದಲ್ಲಿ ಅಲ್ಪವಾಗಿದ್ದರೆ, ಮನೆಯಲ್ಲಿ ಕೆಲ ಮದ್ದುಗಳನ್ನು ಮಾಡಿಕೊಳ್ಳಬಹುದು.
ಕಿವಿನೋವು ಇದ್ದಾಗ ತುಳಸಿಯ ಎಲೆಯಿಂದ ರಸವನ್ನು ಪಡೆದು 2 ಹನಿಗಳಷ್ಟು ನೋವಿರುವ ಕಿವಿಗೆ ಹಾಕುವುದರಿಂದ ನೋವು ಕಡಿಮೆಯಾಗುತ್ತದೆ.
ನೋವಿಗೆ ಬೆಳ್ಳುಳ್ಳಿ ಸಹ ಮನೆ ಮದ್ದಾಗಿದ್ದು, ಬೇಯಿಸಿದ ಬೆಳ್ಳುಳ್ಳಿಯನ್ನು (3-4 ಎಸಳು) ಚೆನ್ನಾಗಿ ಜಜ್ಜಿಕೊಂಡು ಸ್ವಲ್ಪ ನೀರಿಗೆ ಹಾಕಿ ಇದಕ್ಕೆ ಚಿಟಿಕೆ ಉಪ್ಪು ಹಾಕಬೇಕು. ನಂತರ ಹತ್ತಿಯ ಬಟ್ಟೆಯಲ್ಲಿ ಈ ಪೇಸ್ಟನ್ನು ಕಟ್ಟಿ ನೋಯುತ್ತಿರುವ ಕಿವಿಯ ಮೇಲಿಟ್ಟುಕೊಂಡರೆ ನೋವು ಕಡಿಮೆಯಾಗುತ್ತದೆ.
ಸಾಸಿವೆ ಎಣ್ಣೆ ಆಂಟಿ ಬ್ಯಾಕ್ಟೀರಿಯಲ್ ಅಂಶಗಳನ್ನು ಹೊಂದಿದೆ. ಕಿವಿನೋವಿಗೆ ಉತ್ತಮ ಪರಿಹಾರ ನೀಡುತ್ತದೆ. ತುಸು ಬೆಚ್ಚಗಿನ ಸಾಸಿವೆ ಎಣ್ಣೆಯನ್ನು ಅಂದರೆ, 2-3 ಹನಿಗಳನ್ನು ನೋವಿರುವ ಕಿವಿಗೆ ಹಾಕುವುದರಿಂದ ನೋವು ಕಡಿಮೆಯಾಗುತ್ತದೆ.
ಕಿವಿನೋವಿಗೆ ಶಾಖ ಉತ್ತಮ ಮನೆ ಮದ್ದಾಗಿದ್ದು, ನೋವು ಕಡಿಮೆ ಮಾಡಲು ಸ್ವಚ್ಛವಾದ ಟವೆಲ್‌ಅನ್ನು ಬಿಸಿನೀರಿಗೆ ಅದ್ದಿ ನಂತರ ಅದನ್ನು 20 ನಿಮಿಷಗಳ ಕಾಲ ನೋವಿರುವ ಕಿವಿಗೆ ಮೃದುವಾಗಿ ಒತ್ತಿ ಹಿಡಿಯಬೇಕು.
ಈರುಳ್ಳಿ ರಸ ಸಹ ಕಿವಿ ನೋವಿಗೆ ಪರಿಣಾಮಕಾರಿಯಾಗಿದ್ದು, ಈರುಳ್ಳಿಯಿಂದ ಬೇರ್ಪಡಿಸಿದ ರಸವನ್ನು ಹತ್ತಿಯಲ್ಲಿ ಮುಳುಗಿಸಿ ಕಿವಿಯ ಮೇಲೆ ಒತ್ತಿ ಹಿಡಿಯಬೇಕು. ಇದರಿಂದ ನೋವು ಹಾಗೂ ಕಿವಿಯಲ್ಲಿ ತುರಿಕೆ ಇದ್ದರೆ ಕಡಿಮೆಯಾಗುತ್ತದೆ.
ವಿಟವಿನ್ ಸಿ ಮತ್ತು ಜಿಂಕ್ ಅಂಶ ಇರುವ ಆಹಾರಗಳನ್ನು ಸೇವಿಸುವ ಮೂಲಕವೂ ಕಿವಿನೋವು ಕಡಿಮೆಯಾಗುತ್ತದೆ.
ಈಜುವಾಗ ಕೆಲವರಿಗೆ ಕಿವಿನೋವು ಆಗುವ ಸಾಧ್ಯತೆ ಇರುತ್ತದೆ. ಅಂತಹ ಸಂದರ್ಭಗಳಲ್ಲಿ ಕಿವಿಗೆ ವಿನೆಗರ್ ಎಣ್ಣೆ ಹಾಕಿಕೊಳ್ಳಬೇಕು.
ಈ ಮನೆ ಮದ್ದುಗಳು ಕಿವಿನೋವಿಗೆ ತಾತ್ಕಾಲಿಕ ಉಪಶಮನವಾಗಿದೆ. ನೋವು ತೀವ್ರವಾಗಿದ್ದಲ್ಲಿ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು.
Comments are closed.