ಅಂತರಾಷ್ಟ್ರೀಯ

ಅಂಡಾಣು ಉತ್ಪತ್ತಿ ಪ್ರಕ್ರಿಯೆ ವೇಳೆ ಹೆಣ್ಣಿನ ಮುಖ ಹೆಚ್ಚು ಕೆಂಪಾಗುತ್ತದಂತೆ ! ಇಲ್ಲಿದೆ ಇಂಟರೆಸ್ಟಿಂಗ್ ಸುದ್ದಿ…

Pinterest LinkedIn Tumblr

wo

ಸಂತಾನೋತ್ಪತ್ತಿಗೆ ದೇಹ ಅಣಿಗೊಂಡಾಗ ಮಹಿಳೆ ಆಕರ್ಷಕವಾಗಿ ಕಾಣುತ್ತಾರೆ ಎಂದು ಇತ್ತೀಚೆಗಷ್ಟೇ ಅಧ್ಯಯನವೊಂದು ಹೇಳಿತ್ತು. ಈಗ ಮತ್ತೊಂದು ಅಧ್ಯಯನದ ಪ್ರಕಾರ, ಅಂಡಾಣು ಉತ್ಪತ್ತಿ ಪ್ರಕ್ರಿಯೆ ವೇಳೆ ಹೆಣ್ಣಿನ ಮುಖ ಹೆಚ್ಚು ಕೆಂಪಾಗುತ್ತದಂತೆ. ಆದರೆ, ನಾರಿಯ ಮೊಗದಲ್ಲಾಗುವ ಈ ಬದಲಾವಣೆ ಬಹಳ ಸೂಕ್ಷ್ಮವಾಗಿದ್ದು, ಅದು ನಮ್ಮ ಸಹಜ ನೋಟಕ್ಕೆ ಸುಲಭವಾಗಿ ನಿಲುಕುವುದಿಲ್ಲ ಎಂದು ಹೊಸ ಅಧ್ಯಯನವೊಂದು ಹೇಳಿದೆ.

ಪೂರ್ವಕಾಲಘಟ್ಟದಲ್ಲಿ ಸಂತಾನೋತ್ಪತ್ತಿಗೆ ಸಜ್ಜಾದ ಹೆಣ್ಣಿನ ಮುಖ ಕೆಂಪಗಾಗುವುದು ಹೆಚ್ಚು ಸ್ಪಷ್ಟವಾಗಿ ಕಂಡುಬರುತ್ತಿತ್ತು. ಆಗ, ಹೆಣ್ಣಿನ ಜೊತೆ ಮಿಲನವಾಗಲು ಗಂಡಿಗೆ ಸ್ಪಷ್ಟ ಸೂಚನೆ ರವಾನೆಯಾಗುತ್ತಿತ್ತು. ಆದರೆ, ಕಾಲ ಕಳೆದಂತೆ ಮನುಷ್ಯನ ಸಾಮಾಜಿಕ ಕಟ್ಟುಪಾಡು ಬೆಳೆದಂತೆಲ್ಲಾ ಹೆಣ್ಣಿಗೆ ಸಂತಾನೋತ್ಪತ್ತಿಯಿಂದಾಗುವ ಕಷ್ಟ ಹೆಚ್ಚಾಗತೊಡಗಿತು. ಹೀಗಾಗಿ, ಈಕೆಯ ಮುಖಚರ್ಯೆಯಲ್ಲಿ ಕೆಂಪು ಬಣ್ಣ ತೀರಾ ಅಸ್ಪಷ್ಟವಾಗತೊಡಗಿತು. ಅಷ್ಟೇ ಅಲ್ಲ, ಆಧುನಿಕ ಮಾನವ ಅಂಡಾನೋತ್ಪತ್ತಿ ಪ್ರಕ್ರಿಯೆ ವೇಳೆಯಲ್ಲಷ್ಟೇ ಅಲ್ಲ, ಬೇರೆ ದಿನಗಳಲ್ಲೂ ಕೂಡಿಕೆ ಮಾಡುವುದರಿಂದ ಈ ವರ್ಣ ಬದಲಾವಣೆಯ ಸುಳಿವಿನ ಅಗತ್ಯವೇ ಇಲ್ಲ.

ಈಗಂತೂ ನಮ್ಮ ಬರಿಗಣ್ಣಿಗೆ ಈ ಬಣ್ಣ ಬದಲಾವಣೆ ಗ್ರಹಿಕೆಯೇ ಆಗುವುದಿಲ್ಲ. ಹೀಗಾಗಿ, ಹುಡುಗರು ನಾರಿಯರ ಕೆಂಪು ಮೋರೆಗೆ ಹುಡುಕಾಟ ನಡೆಸುವ ಹುಮ್ಮಸ್ಸು ಪಡೆದುಕೊಂಡಿದ್ದರೆ ಅದನ್ನು ಈಗಲೇ ಕೈಬಿಡುವುದು ಒಳಿತು.

Comments are closed.