ಅಂತರಾಷ್ಟ್ರೀಯ

ಸೆಕ್ಸ್ ಸಿನೆಮಾಗಳನ್ನು ಹೆಚ್ಚು ನೋಡುದನ್ನು ನಿಲ್ಲಿಸಿ….ಇಲ್ಲದಿದ್ದರೆ ಅದುವೇ ನಿಮ್ಮ ಬದುಕಿನಲ್ಲಿ ವಿಲನ್ ಆಗಬಹುದು ! ಹೇಗೆ ಎನ್ನುವಿರಾ..? ಈ ವರದಿ ಓದಿ…

Pinterest LinkedIn Tumblr

Caucasian couple arguing on sofa

ಅತಿಯಾದರೆ ಅಮೃತವೂ ವಿಷವಾಗುತ್ತದೆ ಎಂಬ ಮಾತಿದೆ. ಅಂಥದ್ರಲ್ಲಿ ನೀಲಿ ಸಿನಿಮಾಗಳನ್ನು ನೋಡೋದು ಅತಿಯಾದರೆ ಏನಾದೀತಲ್ಲವಾ..? ಯುವಕರು ಪೋರ್ನ್ ವೀಕ್ಷಣೆಗೆ ಅಡಿಕ್ಟ್ ಆಗಿಬಿಟ್ಟರೆ ಎಷ್ಟು ಅಪಾಯ ಎಂಬುದಕ್ಕೆ ಅನೇಕ ನಿದರ್ಶನಗಳು ನಮಗೆ ಸಿಗುತ್ತವೆ. ಕೆಲವೊಂದು ನಿದರ್ಶನಗಳನ್ನು ಕೆಳಗಡೆ ಕೊಡಲಾಗಿದೆ.

ದೆಹಲಿಯ ಫೋರ್ಟಿಸ್ ಆಸ್ಪತ್ರೆಯ ವೈದ್ಯರ ಬಳಿಗೆ 26 ವರ್ಷದ ವಿವಾಹಿತ ಯುವಕನ ಪ್ರಕರಣ ಬರುತ್ತದೆ. ಈ ಯುವಕ ಪ್ರತೀ ದಿನ 3ರಿಂದ 7 ಗಂಟೆಗಳಷ್ಟು ಕಾಲ ಪೋರ್ನ್ ವೀಕ್ಷಣೆ ಮಾಡುತ್ತಾನೆ. ಮದುವೆಯ ಹೊಸದರಲ್ಲಿ ಗಂಡ-ಹೆಂಡತಿ ಇಬ್ಬರಿಗೂ ಇದೊಂದು ರೀತಿಯ ಖುಷಿ ಕೊಟ್ಟಿತ್ತು. ಆದರೆ, ಕಾಲಕಳೆದಂತೆ ಆ ಯುವಕ ತನ್ನ ಪತ್ನಿ ಇಲ್ಲದಿದ್ದಾಗಲೂ ಏಕಾಂಗಿಯಾಗಿ ಪೋರ್ನ್ ವೀಕ್ಷಿಸಲು ಆರಂಭಿಸಿದ. ಇದು ಗಂಡ-ಹೆಂಡತಿ ನಡುವೆ ವಿರಸಕ್ಕೆ ನಾಂದಿ ಹಾಡಿತು. ಇಬ್ಬರ ಲೈಂಗಿಕ ಜೀವನದಲ್ಲಿ ಪ್ರೀತಿಯೇ ಮಾಯವಾಗಿತ್ತು.

ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯ ಡಾ. ಸಮೀರ್ ಮಲ್ಹೋತ್ರಾ ಅವರು ಕಂಡ ವಿಶೇಷ ಕೇಸ್ ಇದು. ನವವಿವಾಹಿತ ಯುವಕನಿಗೆ ಪೋರ್ನ್ ಕ್ಲಿಪಿಂಗ್ಸ್ ನೋಡುತ್ತಾ ಸೆಕ್ಸ್ ಮೂಡ್’ಗೆ ಜಾರಿಕೊಳ್ಳುವುದು ಅಭ್ಯಾಸವಾಗಿ ಹೋಗಿತ್ತು. ಗಂಡನಿಗೆ ತನ್ನ ಮೇಲೆ ಆಸೆ ಇಲ್ಲವೇನೋ ಎಂಬ ಭಯ ಮತ್ತು ಅನುಮಾನಗಳು ಹೆಂಡತಿಗೆ ಕಾಡತೊಡಗಿದವು. ಆಕೆಗೆ ಸಂಭೋಗ ಎನ್ನುವುದು ಯಾಂತ್ರೀಕೃತವಾಗಿಹೋಗಿತ್ತು.

ಪೋರ್ನ್ ವೀಕ್ಷಿಸುವ ಯುವಕನೊಬ್ಬ ಅದರಲ್ಲಿರುವ ದೃಶ್ಯದಂತೆಯೇ ಸೆಕ್ಸ್ ಮಾಡಬೇಕೆಂದು ತನ್ನ ಪತ್ನಿಯನ್ನು ಒತ್ತಾಯಪಡಿಸುತ್ತಿದ್ದ. ಚಿತ್ರವಿಚಿತ್ರ, ಅಸ್ವಾಭಾವಿಕ ಕ್ರಿಯೆಗಳನ್ನ ಮಾಡುವಂತೆ ಬಲವಂತ ಮಾಡುತ್ತಿದ್ದ. ಇದರಿಂದಾಗಿ ಆತನ ಪತ್ನಿಗೆ ಸೆಕ್ಸ್ ಮೇಲೆ ಆಸಕ್ತಿಯೇ ಹೊರಟುಹೋಗಿತ್ತು.

ಇಂಥ ಅದೆಷ್ಟೋ ಪ್ರಕರಣಗಳು ವೈದ್ಯರಿಗೆ ಬರುತ್ತವೆ. ಲೈಂಗಿಕ ಅಜ್ಞಾನ ಇದಕ್ಕೆ ಪ್ರಮುಖ ಕಾರಣ. ಈಗಿನ ಯುವಕರಿಗೆ ಸೆಕ್ಸ್ ಬಗ್ಗೆ ತಿಳಿವಳಿಕೆ ಸಿಗುವುದು ಪೋರ್ನ್ ಮೂಲಕವೇ. ಬಹಳ ಸುಲಭವಾಗಿ ಸಿಗುವ ಪೋರ್ನ್ ಸರಕುಗಳಲ್ಲಿರುವ ಅಂಶಗಳೇ ನಿಜವಾದ ಸೆಕ್ಸ್ ಎಂದು ಯುವಪೀಳಿಗೆ ತಪ್ಪಾಗಿ ಭಾವಿಸುತ್ತಿದೆ. ಆ ಪೋರ್ನ್ ಸರಕುಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಯತ್ನಿಸುತ್ತಾರೆ. ಇದರಿಂದ ಸಂಬಂಧದ ಸೂಕ್ಷ್ಮತೆಗೆ ಧಕ್ಕೆ ಬರುತ್ತದೆ ಎಂದು ಮಾನಸಿಕ ತಜ್ಞರು ಎಚ್ಚರಿಸುತ್ತಾರೆ.

Comments are closed.