ಅಂತರಾಷ್ಟ್ರೀಯ

ಮಹಿಳೆಯರು ಬಯಸುವ ಏಳು ಬೆಡ್‌ ರೂಮ್ ಸಿಕ್ರೇಟ್‌ಗಳು ! ಪುರುಷರು ಇದನ್ನು ತಿಳಿದುಕೊಳ್ಳಲೇಬೇಕು…

Pinterest LinkedIn Tumblr

bed

ಹೆಚ್ಚಿನ ಪುರುಷರು ತಮ್ಮ ಸಂಗಾತಿಗೆ ಉತ್ತಮ ಸೆಕ್ಸ್‌ ಅನುಭವವನ್ನು ನೀಡಬೇಕೆಂದು ಭಾವಿಸುತ್ತಾರೆಯೇ ಹೊರತು ಆಕೆ ಏನನ್ನ ಬಯಸುತ್ತಾಳೆ ಎನ್ನುವುದನ್ನು ಯೋಚಿಸುವುದಿಲ್ಲ. ಬೆಡ್‌ರೂಮ್‌ನಲ್ಲಿ ಸೆಕ್ಸ್‌ ಬಿಟ್ಟು ಇನ್ನೂ ಹಲವು ವಿಷಯಗಳನ್ನು ಮಹಿಳೆಯರು ಇಷ್ಟಪಡುತ್ತಾರೆ. ಅವು ಯಾವುದೆಂದರೆ..

ಹೆಚ್ಚಿನ ಮಹಿಳೆಯರು ತಮ್ಮ ಸಂಗಾತಿಯೊಂದಿಗೆ ಮಾತನ್ನು ಹಂಚಿಕೊಳ್ಳಲು ಇಷ್ಟಪಡುತ್ತಾರೆ. ಮಾತಿನ ಮುಖಾಂತರ ತಮ್ಮ ಪ್ರೀತಿಯನ್ನು ತೋರಿಸಲು ಪ್ರಯತ್ನಿಸುತ್ತಾರೆ. ವಾಕ್‌ ಮಾಡುವ ಸಮಯದಲ್ಲಾಗಿರಬಹುದು ಅಥವಾ ವಿಶ್ರಮಿಸುವ ಸಮಯದಲ್ಲಾಗಿರಬಹುದು ನೀವು ನಿಮ್ಮ ಸಂಗಾತಿಯೊಂದಿಗೆ ಮಾತನಾಡಿದರೆ ಅದೊಂದು ಉತ್ತಮ ಕಾಮೋತ್ತೇಜಕವಾಗಿ ಪ್ರಭಾವ ಬೀರಬಲ್ಲದು. ಈ ಸಂದರ್ಭದಲ್ಲಿ ಪುರುಷ ತನ್ನ ಸಂಗಾತಿಯಲ್ಲಿ ತಾನು ಆಕೆಯನ್ನು ಎಷ್ಟು ಪ್ರೀತಿಸುತ್ತಿರುವುದಾಗಿ ಹೇಳುವ ಮೂಲಕ ತನ್ನ ಮನಸ್ಸಿನ ಭಾವನೆಯನ್ನು ಹೊರಹಾಕಬಹುದು.

ಬಹಳ ವರ್ಷಗಳಿಂದ ಜೊತೆಯಾಗಿರುವ ಕಪಲ್‌ಗಳಲ್ಲಿ ತನ್ನ ಸಂಗಾತಿಗೆ ತಾನು ಕಡಿಮೆ ಆಕರ್ಷಕಳಾಗಿಬಿಟ್ಟಿದ್ದೇನೋ ಎನ್ನುವ ಭಾವನೆ ಮೂಡುವುದು ಸಹಜ. ಹಾಗಾಗಿ ಬಹುತೇಕ ಮಹಿಳೆಯರು ಕತ್ತಲೆಯಲ್ಲಿ ವಿವಸ್ತ್ರಳಾಗಲು ಬಯಸುತ್ತಾರೆ. ಅವರಲ್ಲಿ ತಮ್ಮ ಸೌಂದರ್ಯದ ಬಗ್ಗೆ ಆತಂಕ ಇರುತ್ತದೆ. ನಿಜವಾಗಿಯೂ ತನ್ನ ಸಂಗಾತಿ ಬಗ್ಗೆ ಕಾಳಜಿ ಹೊಂದಿರುವ ಪುರುಷ ಮಾತ್ರ ಆಕೆಯ ಆತಂಕವನ್ನು ಅರ್ಥಮಾಡಿಕೊಳ್ಳಲು ಸಾಧ್ಯ. ನೀವು ಆಕೆಯ ಆತಂಕವನ್ನು ಅರ್ಥಮಾಡಿಕೊಂಡಲ್ಲಿ ನೀನು ಬಹಳ ಸುಂದರವಾಗಿದ್ದೀಯಾ ಎಂದು ಸುಳ್ಳು ಹೇಳುವ ಅಗತ್ಯವೂ ಇಲ್ಲ. ಹಾಗೆಯೇ ನೀನು ಆಕರ್ಷಕವಾಗಿಲ್ಲ ಎಂದು ಹೇಳುವ ಅಗತ್ಯವೂ ಬರುವುದಿಲ್ಲ.

ಮಹಿಳೆಯರಿಗೆ ಸೆಕ್ಸ್‌ ಎಂಬುದು ತಮ್ಮ ಜೀವನದ ಒಂದು ಭಾಗವಾದರೆ, ತಮ್ಮನ್ನು ತಾವು ಮಾನಸಿಕ ಒತ್ತಡದಿಂದ ಹೊರಬರಲು ಬಳಸುವ ಒಂದು ವಿಧಾನ ಎಂಬ ಭಾವನೆ ಪುರುಷರಿಗೆ ಇದೆ. ಮಹಿಳೆಯರಿಗೆ ಸಂಗಾತಿಯೊಂದಿಗಿನ ಮಿಲನವು ತೃಪ್ತಿ ನೀಡುವಂತಿರಬೇಕು. ಹಾಗೂ ಉತ್ತಮ ಫೀಲ್‌ನ್ನು ನೀಡಬೇಕು. ತನ್ನ ಸಂಗಾತಿ ತನ್ನನ್ನು ಬೆಡ್‌ನ ಹೊರಗಡೆ ಯಾವ ರೀತಿ ಉಪಚರಿಸುತ್ತಾನೆ ಎನ್ನುವುದರ ಮೇಲೆ ನಿಂತಿದೆ ಬೆಡ್‌ ರೂಂ ಒಳಗಡೆ ಆಕೆಯ ನಡವಳಿಕೆ. ಪುರುಷ ಗಟ್ಟಿ ಧ್ವನಿಯಲ್ಲಿ ಮಾತನಾಡುವುದು, ಕ್ರೂರವಾಗಿ ವರ್ತಿಸುವುದು, ಟೀಕಿಸುವುದು, ಅವ್ಯಾಚ ಶಬ್ಧದ ಬಳಕೆ ಮಾಡಿದರೆ ಮಹಿಳೆಯು ಪೂರ್ಣ ರೀತಿಯಲ್ಲಿ ತನ್ನನ್ನು ತಾನು ತೊಡಗಿಸುವುದರಲ್ಲಿ ವಿಫಲಾರಾಗುತ್ತಾರೆ.

ತನ್ನ ಸಂಗಾತಿಯನ್ನು ಲೈಂಗಿಕತೆಯ ಪರಾಕಾಷ್ಠೆಯ ಉತ್ತುಂಗಕ್ಕೆ ಏರಿಸುವವನೇ ಉತ್ತಮ ಪ್ರೇಮಿ ಎಂಬ ಭಾವನೆ ಹೆಚ್ಚಿನ ಪುರುಷರಲ್ಲಿದೆ. ಆ ರೀತಿಯಾಗಿ ಸಂತುಷ್ಠಿಗೊಳಿಸುವುದು ಉತ್ತಮವೇ ಆದರೆ ಯಾವಾಗಲು ಅದರ ಅಗತ್ಯವಿರುವುದಿಲ್ಲ. ಅದರ ಬದಲಾಗಿ ಮಹಿಳೆಯರು ಎಂಗೇಜಾಗಿರಲು ಹೆಚ್ಚು ಇಷ್ಟಪಡುತ್ತಾರೆ.

ಹೆಚ್ಚಿನ ಪುರುಷರು ಸೆಕ್ಸ್‌ ಬಗ್ಗೆ ತುಂಬಾ ಗಂಭೀರವಾಗಿರುತ್ತಾರೆ. ಅವರು ನಗುವುದನ್ನೇ ಮರೆತಿರುತ್ತಾರೆ. ಈ ಗಂಭೀರತೆಯಿಂದಾಗಿ ಅವರು ರೊಮ್ಯಾಂಟಿಕ್‌ ಆಗಿರಲು ಹಾಗೂ ಮಿಲನದ ಪೂರ್ಣ ರೀತಿಯ ಆನಂದವನ್ನು ಅನುಭವಿಸುವುದರಲ್ಲಿ ವಿಫಲರಾಗುತ್ತಾರೆ

ಮಹಿಳೆಯರು ರೊಮ್ಯಾನ್ಸನ್ನು ಇಷ್ಟಪಡುತ್ತಾರೆ. ಕೈ ಹಿಡಿಯುವುದು, ಕಿಸ್‌ ಮಾಡುವುದು ಇಂತಹ ಸ್ಪರ್ಶದಲ್ಲೂ ಮಹಿಳೆಯರು ಸುಖವನ್ನು ಕಾಣುತ್ತಾರೆ. ಪುರುಷರು ಮಿಲನದ ಸಮಯದಲ್ಲಿ ಮಾತ್ರ ಇದೆಲ್ಲವನ್ನು ಮಾಡುತ್ತಾರೆಯೇ ಹೊರತು ಬಾಕಿ ಸಮಯದಲ್ಲಿ ತನ್ನ ಸಂಗಾತಿ ಇದೆಲ್ಲವನ್ನು ಮಾಡುವುದಿಲ್ಲ ಎನ್ನುವುದು ಬಹುತೇಕ ಮಹಿಳೆಯರ ಅಳಲು. ಮಹಿಳೆಯು ತನ್ನ ಸಂಗಾತಿಯ ಮುಖದ ಮೇಲೆ ಕೈಯಾಡಿಸುತ್ತಾ, ಕೂದಲನ್ನು ಸವರುತ್ತಾ ಇದ್ದರೆ ಆತನಿಗೂ ಸ್ಪರ್ಶ ಸುಖದ ಅನುಭವವಾಗುತ್ತದೆ.

ಸಾಕಷ್ಟು ಪುರುಷರು ಲೈಂಗಿಕ ಕ್ರಿಯೆ ನಡೆಸಿದ ನಂತರ ನಿದ್ರೆ ಹೋಗುತ್ತಾರೆ. ಅದನ್ನು ಮಹಿಳೆಯರು ಇಷ್ಟಪಡಲ್ಲ. ಲೈಂಗಿಕ ಕ್ರಿಯೆ ನಡೆಸಿದ ನಂತರ ಸುಸ್ತಾಗುವುದು ಸಹಜ, ಆದರೆ ನಿಮ್ಮ ಸಂಗಾತಿ ನಿಮ್ಮಿಂದ ಇನ್ನಷ್ಟು ಪ್ರೀತಿಯನ್ನು ಬಯಸುತ್ತಾರೆ. ಹಾಗಾಗಿ ಸಂಗಾತಿ ಜೊತೆಗೆ ಸ್ವಲ್ಪ ಕಾಲ ಜೊತೆಯಾಗಿ ಕಳೆಯಿರಿ. ಸೆಕ್ಸ್‌ ನಂತರದ ಬೆಚ್ಚಗಿನ ಅಪ್ಪುಗೆಯ ಅನುಭವವನ್ನು ನೀಡಿ.

Comments are closed.