ಬೆಂಗಳೂರು: ತಮ್ಮ ಗುಂಪನ್ನು ಬಿಟ್ಟು ಬೇರೆ ಗುಂಪಿಗೆ ಸೇರಿದ ಮಂಗಳಮುಖಿಯನ್ನು ಅವರ ಸಂಗಡಿಗರೇ ಕೈ-ಕಾಲಿನಿಂದ ಥಳಿಸಿ ಕೊಲೆ ಮಾಡಿರುವ ಘಟನೆ ರಾಮಮೂರ್ತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಶೃತಿ(25) ಕೊಲೆಯಾಗಿರುವ ಮಂಗಳಮುಖಿ.
ಘಟನೆ ವಿವರ: ಶೃತಿ ಮೊದಲು ಸೋನು, ಅಶ್ವಿನಿ, ಮೈನಾ, ಶೀತಲ್ ಎಂಬುವರ ಜೊತೆಯಲ್ಲಿದ್ದು, ಇತ್ತೀಚೆಗೆ ಬೇರೊಂದು ಗುಂಪಿಗೆ ಸೇರಿದ್ದು, ವಿರೋಧಿ ಗುಂಪಿನ ಆಕ್ರೋಶಕ್ಕೆ ಕಾರಣವಾಗಿತ್ತು. ನಿನ್ನೆ ರಾಮಮೂರ್ತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ರಾಘವೇಂದ್ರ ವೃತ್ತದ ಬಳಿ ಶೃತಿ ತನ್ನ ಸ್ನೇಹಿತರೊಂದಿಗೆ ಹೋಗುತ್ತಿದ್ದಾಗ ವಿರೋಧಿ ಗುಂಪು ಎದುರಿಗೆ ಬಂದಿದೆ. ಈ ಸಂದರ್ಭದಲ್ಲಿ ಎರಡು ಗುಂಪಿನ ನಡುವೆ ಮಾತಿಗೆ ಮಾತು ಬೆಳೆದು ಶೃತಿ ಮೇಲೆ ಮನಬಂದಂತೆ ಹಲ್ಲೆ ನಡೆಸಿದರು.
ವಿರೋಧಿ ಗುಂಪಿನ ಹಲ್ಲೆಯಿಂದ ಅಸ್ವಸ್ಥಗೊಂಡಿದ್ದ ಶೃತಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ನಂತರ ಬೌರಿಂಗ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಚಿಕಿತ್ಸೆ ಫಲಕಾರಿಯಾಗದೆ ಶೃತಿ ಸಾವನ್ನಪ್ಪಿದ್ದು, ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ರಾಮಮೂರ್ತಿನಗರ ಠಾಣೆ ಪೊಲೀಸರು ಮುಂದಿನ ಕ್ರಮ ಜರುಗಿಸಿದ್ದಾರೆ.
Comments are closed.