ಕರಾವಳಿ

ಬೇರೆಯವರೊಂದಿಗೆ ಮಲಗಿ ಗರ್ಭಿಣಿಯಾಗು ಎಂದ ಪತಿರಾಯ ! ಮುಂದೆ ಪತ್ನಿ ಮಾಡಿದ್ದೇನು…? ಆತ ಹೀಗೆ ಹೇಳಲು ಕಾರಣ…ಮುಂದಿದೆ …!!!

Pinterest LinkedIn Tumblr

couple

ಚನ್ನಪಟ್ಟಣ: ಹೆಣ್ಣು ತನ್ನ ಕೈ ಹಿಡಿದಾತ ನಪುಂಸಕನಾದರೂ ಸಹಿಸಿಕೊಳ್ಳುತ್ತಾಳೆ. ಆದರೆ ಇನ್ನೊಬ್ಬನೊಂದಿಗೆ ಸಂಸಾರ ನಡೆಸು ಎಂದರೆ ಮಾತ್ರ ಹೆಮ್ಮಾರಿಯಾಗುತ್ತಾಳೆ. ನಪುಂಸಕ ಪತಿ ಪರ ಪುರುಷನ ಸಂಗ ಮಾಡಿ ಗರ್ಭಿಣಿಯಾಗು. ಆಗ ನನ್ನ ಮಾನ ಮುಚ್ಚಿಕೊಳ್ಳಬಹುದು ಎಂದಾಗ ಕೈ ಹಿಡಿದವನು ಎಂಬುದನ್ನು ಮರೆತು ಚಪ್ಪಲಿ ಸೇವೆ ಮಾಡಿ ತವರು ಮನೆಗೆ ಬಂದು ಒಂಟಿ ಜೀವನ ನಡೆಸುತ್ತಿರುವ ಹೆಣ್ಣು ಮಗಳೊಬ್ಬಳ ಕರುಣಾಜನಕ ಕಥೆ ಇಲ್ಲಿದೆ. ನೀವೇ ಓದಿ.

ಆತನಿಗೆ ಕೈ ತುಂಬಾ ಸಂಬಳ. ನೋಡೋಕೂ ಪರವಾಗಿಲ್ಲ. ಆದರೆ ಹುಟ್ಟಿನಿಂದಲೇ ನಪುಂಸಕ. ಹೀಗಾಗಿ ಎಲ್ಲೂ ಹೆಣ್ಣು ಸಿಗದಿದ್ದಾಗ ತನ್ನ ನಿಜ ರೂಪವನ್ನು ಮರೆ ಮಾಚಿ ಮದುವೆಯಾದ.

ಕೈ ಹಿಡಿದಾಕೆಗೆ ಗಂಡಸೇ ಅಲ್ಲ ಎಂಬುದು ಮನದಟ್ಟಾದಾಗ ಹೆಮ್ಮಾರಿಯಾದಳು. ತನಗೆ ಮೋಸ ಮಾಡಿದ ಗಂಡನಿಗೆ ಹಿಗ್ಗಾ ಮುಗ್ಗಾ ಥಳಿಸಿ ನಿನ್ನ ಸಹವಾಸವೇ ಬೇಡ ಎಂದು ತವರು ಮನೆ ದಾರಿ ಹಿಡಿದಳು. ಇಂತಹ ಒಂದು ಘಟನೆ ನಡೆದಿರುವುದು ರೇಷ್ಮೆ ನಾಡು ಚನ್ನಪಟ್ಟಣದ ಒಂದು ಕುಗ್ರಾಮದಲ್ಲಿ.

ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ 32ರ ತರುಣ ಚಲುವ (ಹೆಸರು ಬದಲಿಸಲಾಗಿದೆ). ಈತ ಹುಟ್ಟಿದಂದಿನಿಂದಲೂ ನಪುಂಸಕ. ನಡವಳಿಕೆಯಲ್ಲಿ ಹೆಣ್ಣಿನಂತಾದರೂ ಗಂಡು ಮಗನಾಗಿದ್ದರಿಂದ ಆತನಿಗೆ ಪೋಷಕರು ಮದುವೆ ಮಾಡಲು ತಯಾರು ನಡೆಸಿದ್ದರೆನ್ನಲಾಗಿದೆ. ವಧು ಪರೀಕ್ಷೆಗೆ ತೆರಳಿದಾಗ ಗಂಡಿನ ವರ್ತನೆ ಕಂಡು ಯಾರೂ ಈತನಿಗೆ ಹೆಣ್ಣು ನೀಡಲು ಮನಸು ಮಾಡಲಿಲ್ಲ. ಇದರಿಂದ ರೋಸಿ ಹೋದ ಚೆಲುವ ತಾನು ಕೆಲಸ ಮಾಡುತ್ತಿದ್ದ ಕಚೇರಿಯ ಕಸ ಹೊಡೆಯುವ ಮಹಿಳೆಗೆ ಹಣದ ಆಸೆ ತೋರಿಸಿ ಹೆಣ್ಣು ಹುಡುಕಿ ಕೊಡುವಂತೆ ಪುಸಲಾಯಿಸಿದ್ದ.

ಈತನ ಮಾತಿನಂತೆ ಹೆಣ್ಣಿಗೆ ಹೆಣ್ಣೇ ಶತ್ರು ಎಂಬ ಗಾದೆಯಂತೆ ಕೆಲಸದಾಕೆ ತನ್ನ ಸಂಬಂಧಿಕರ ಸ್ಫುರದ್ರೂಪಿ ಯುವತಿಯೊಬ್ಬಳ ಕುಟುಂಬದವರಿಗೆ ಹುಡುಗ ಒಳ್ಳೆ ಕೆಲಸದಲ್ಲಿದ್ದಾನೆ. ಕೈ ತುಂಬಾ ಸಂಬಳ. ಇಂತಹ ಸಂಬಂಧ ಸಿಗುವುದೇ ಇಲ್ಲ. ನಿಮ್ಮ ಮಗಳನ್ನು ಧಾರೆ ಎರೆದುಕೊಡಿ ಎಂದು ಪುಸಲಾಯಿಸಿ ನಂಬಿಸಿದ್ದಳು. ಕೆಲಸದಾಕೆ ತಮ್ಮ ಕಿವಿಗೆ ದಾಸವಾಳ ಮುಡಿಸುತ್ತಿದ್ದಾಳೆ ಎಂಬ ಅರಿವೇ ಇಲ್ಲದ ಯುವತಿಯ ಮನೆಯವರು ಚಲುವನಿಗೆ ತನ್ನ ಮಗಳನ್ನು ಧಾರೆ ಎರೆದುಕೊಟ್ಟರು. ನಗರದ ಪ್ರಸಿದ್ಧ ಕಲ್ಯಾಣ ಮಂಟಪದಲ್ಲಿ ನಡೆದ ಮದುವೆ ಸಮಾರಂಭಕ್ಕೆ ಆಗಮಿಸಿದ ಸ್ನೇಹಿತರು, ಸಂಬಂಧಿಕರು ಹಾಗೂ ಸಹೋದ್ಯೋಗಿಗಳು ಸ್ಫುರದ್ರೂಪಿ ಯುವತಿ ಚಲುವನನ್ನು ವಿವಾಹವಾಗುತ್ತಿರುವುದನ್ನು ಕಂಡು ಮನಸ್ಸಿನಲ್ಲೇ ಚಲುವನಿಗೆ ಶಾಪ ಹಾಕಿ, ಅನ್ಯಾಯವಾಗಿ ಒಂದು ಹೆಣ್ಣು ಮಗಳ ಬಾಳು ಹಾಳು ಮಾಡುತ್ತಿದ್ದಾನನಲ್ಲಾ ಎಂದು ನೊಂದು ಕೊಂಡರು.

ಎಲ್ಲಾ ಅಂದುಕೊಂಡಂತೆ ಅದ್ದೂರಿಯಾಗಿ ವಿವಾಹವೇನೋ ನಡೆಯಿತು. ಆದರೆ ಚಲುವ ಮದುವೆ ಓಡಾಟದಿಂದ ಆರೋಗ್ಯ ಸರಿ ಇಲ್ಲ. ಸದ್ಯಕ್ಕೆ ಮಧುಚಂದ್ರ ಬೇಡ ಎಂದು ಮುಂದೂಡುತ್ತಿದ್ದ. ಮೂರ್ನಾಲ್ಕು ತಿಂಗಳು ಮಧುಚಂದ್ರ ಶಾಸ್ತ್ರ ಮುಂದೂಡಲ್ಪಟ್ಟಿದ್ದರಿಂದ ಅಕ್ಕ ಪಕ್ಕದವರು ಏನೆಂದು ಕೊಂಡಾರೋ ಎಂದು ಹುಡುಗಿ ಪೋಷಕರು ಒಂದು ದಿನ ಶಾಸ್ತ್ರಕ್ಕೆ ನಿಗದಿಪಡಿಸಿ ಮನೆಗೆ ಬರುವಂತೆ ಚಲುವನಿಗೆ ತಿಳಿಸಿದ್ದರು. ಇಲ್ಲ ಎಂದರೆ ಮಾವನ ಮನೆಯವರಿಗೆ ಅನುಮಾನ ಬರುವುದೆಂದು ಭಾವಿಸಿ ಚಲುವ ಓಕೆ ಎಂದ. ಪ್ರಸ್ಥದ ದಿನ ಸ್ಫುರದ್ರೂಪಿ ಯುವತಿ ಕನಸು ಕಾಣುತ್ತಾ ತನ್ನ ಕೈ ಹಿಡಿದವನಿಗಾಗಿ ಪರಿತಪಿಸುತ್ತಿದ್ದಳು. ಆದರೆ ಬೆಡ್‍ರೂಮ್‍ಗೆ ಬಂದ ಪತಿರಾಯ ಯಾಕೋ ಮೂಡ್ ಸರಿ ಇಲ್ಲ ಎಂದು ನಿದ್ದೆಗೆ ಜಾರಿದಾಗ ನೂರಾರು ಕನಸು ಕಂಡಿದ್ದ ಯುವತಿಗೆ ಭ್ರಮನಿರಸನವಾಯಿತು.

ತನ್ನ ಗಂಡನಿಗೆ ಕೆಲಸ ಹೆಚ್ಚಾಗಿ ಸುಸ್ತಾಗಿರಬಹುದು ಎಂದು ಭಾವಿಸಿದ ಯುವತಿ. ಅದನ್ನು ಸಹಿಸಿಕೊಂಡಳು. ಆದರೆ ಆತನ ಈ ಕಳ್ಳಾಟ ಪ್ರತಿ ನಿತ್ಯ ಮುಂದುವರೆದಾಗ ಆಕೆಯ ಮನದಲ್ಲಿ ಏನೋ ಸಂಶಯ ಕಾಡತೊಡಗಿತು.

ಅಂತೂ ಇಂತೂ ತನ್ನ ಗಂಡ ಗಂಡಸೇ ಅಲ್ಲ ಎಂಬುದನ್ನು ಖಚಿತಪಡಿಸಿಕೊಂಡ ಪತ್ನಿ ಹೆಮ್ಮಾರಿಯಾದಳು. ಕೆಲಸ ಮುಗಿಸಿ ಮನೆಗೆ ಬಂದ ಪತಿಯ ಕತ್ತಿನ ಪಟ್ಟಿ ಹಿಡಿದು ಮನ ಬಂದಂತೆ ಥಳಿಸಿದಳು. ಆದರೂ ಸಂಸಾರದ ಗುಟ್ಟು ಬಹಿರಂಗವಾಗಬಾರದು ಎಂದು ಆ ಮಹಾತಾಯಿ ನಪುಂಸಕ ಗಂಡನೊಂದಿಗೆ ಬಾಳಲು ತೀರ್ಮಾನಿಸಿದ್ದಳು. ಇದನ್ನೇ ಬಂಡವಾಳ ಮಾಡಿಕೊಂಡ ನಾಮರ್ಧ ಗಂಡ ಮದುವೆಯಾದ ಆರು ತಿಂಗಳ ನಂತರ ನನ್ನ ಹೆಂಡತಿ 4 ತಿಂಗಳ ಗರ್ಭಿಣಿ ಎಂದು ಕಂಡ ಕಂಡವರ ಬಳಿ ಬೂಸಿ ಬಿಡುತ್ತಿದ್ದ.

ನಾಮರ್ಧ ಗಂಡನ ಈ ವರ್ತನೆಯಿಂದ ಬೇಸತ್ತ ಪತ್ನಿ ಇದುವರೆಗೂ ಸಂಸಾರದ ಗುಟ್ಟು ರಟ್ಟಾಗಬಾರದು ಎಂದು ನಿನ್ನ ಜತೆ ಸಂಸಾರ ಮಾಡಿದೆ. ಆದರೆ ನೀನು ಗಂಡಸು ಎಂಬುದನ್ನು ಸಾಬೀತುಪಡಿಸಲು ನನ್ನ ಮೇಲೆ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದೀಯಾ ಎಂದು ಪ್ರಶ್ನಿಸಿದಾಗ ಆತ ಹೌದು ಇದರಲ್ಲಿ ತಪ್ಪೇನಿದೆ. ಏನೇ ಆಗಲಿ ನೀನು ಗರ್ಭಿಣಿಯಾಗಬೇಕು. ನನ್ನಿಂದಲೇ ಆಗಬೇಕು ಎಂದು ನಿಯಮವೇನಿಲ್ಲವಲ್ಲ ಎಂದಾಗ ಚಂಡಿಯಂತಾದ ಪತ್ನಿ ಚಪ್ಪಲಿ ಸೇವೆ ಮಾಡಿ ತವರು ಮನೆ ಕಡೆಗೆ ಹೆಜ್ಜೆ ಹಾಕಿದ್ದಾಳೆ.

Comments are closed.