ನವದೆಹಲಿ: ಮದುವೆ ಬಳಿಕ ಮಹಿಳೆಯರ ಪೋರ್ನ್ ವೀಕ್ಷಣೆ ಪ್ರಮಾಣ ಹೆಚ್ಚಾಗುತ್ತಾ..? ಹೌದು ಎನ್ನುತ್ತಿದೆ ಹೊಸ ಅಧ್ಯಯನ.
ನೂರಕ್ಕೂ ಅಧಿಕ ವಿವಾಹಿತ ಪುರುಷ ಮತ್ತು ಮಹಿಳೆಯರನ್ನ ಸಂದರ್ಶಿಸಿರುವ ಸಂಶೋಧಕರ ತಂಡವೊಂದು ಲೈಂಗಿಕತೆ ಕುರಿತಂತೆ ಅವರ ಆಸಕ್ತಿಯಲ್ಲಾದ ಬದಲಾವಣೆಗಳ ಬಗ್ಗೆ ಮಾಹಿತಿ ಕಲೆ ಹಾಕಿದೆ.
ಮಹಿಳೆಯರು ಮದುವೆಗೆ ಮುನ್ನ ಪೋರ್ನ್ ವೀಕ್ಷಿಸುವ ಪ್ರಮಾಣ ಶೇ. 9ರಷ್ಟಿದ್ದರೆ, ಮದುವೆ ಬಳಿಕ ಶೇ. 24ಕ್ಕೆ ಏರಿಕೆಯಾಗಿರುವುದು ಕಂಡುಬಂದಿದೆ. ಪುರುಷರಲ್ಲಿ ಇದಕ್ಕೆ ವಿರುದ್ಧವಾದ ಅಂಶ ಪತ್ತೆಯಾಗಿದೆ. ಮುದುವೆಗೆ ಮುನ್ನ ಶೇ, 23ರಷ್ಟಿದ್ದ ಪುರುಷರ ಪೋರ್ನ್ ವೀಕ್ಷಣೆ ಪ್ರಮಾಣ, ಮದುವೆ ಬಳಿಕ 14ಕ್ಕೆ ಕುಸಿದಿದೆ.
ವಿವಾಹಿತ ದಂಪತಿಯ ಲೈಂಗಿಕ ಚಟುವಟಿಕೆ ಬಗ್ಗೆಯೂ ಮಾಹಿತಿ ಕಲೆಹಾಕಲಾಗಿದ್ದು, ಶೇ.13ರಷ್ಟು ಪುರುಷರು ಮತ್ತು 12ರಷ್ಟು ಮಹಿಳೆಯರು ಯೋನಿಯ ಮೈಥುನವನ್ನ ಬಯಸಿದರೆ, 2ರಷ್ಟು ವಿವಾಹಿತ ಪುರುಷರು ಗುದ ಮೈಥುನವನ್ನ ಬಯಸುತ್ತಾರಂತೆ. ಇನ್ನೂ, 0.4ರಷ್ಟು ಮಹಿಳೆಯರು ಮತ್ತು 5.9ರಷ್ಟು ವಿವಾಹಿತ ಪುರುಷರು ಸೆಕ್ಸುವಲ್ ಫ್ಯಾಂಟಸಿಯಲ್ಲಿ ಕಾಲ ಕಳೆಯಲು ಇಚ್ಛಿಸುತ್ತಾರಂತೆ.
ಒಟ್ಟಿನಲ್ಲಿ ಮದುವೆ ಬಳಿಕ ಪುರುಷ ಮತ್ತು ಮಹಿಳೆಯರ ಲೈಂಗಿಕ ವಿಷಯದಲ್ಲಿ ಗಮನಾರ್ಹ ಬದಲಾವಣೆಯಾಗಿರುವುದ ಕಂಡುಬಂದಿದೆ. ಪುರುಷರಲ್ಲಿ ಮದುವೆ ಬಳಿಕ ಲೈಂಗಿಕಾಸಕ್ತಿ ಕುಸಿದಿದ್ದರೆ, ಮಹಿಳೆಯರಲ್ಲಿ ಹೆಚ್ಚಾಗಿದೆ. ಸೆಕ್ಸುಯಾಲಜಿಸ್ಟ್ ಜರ್ನಲ್`ನಲ್ಲಿ ಅಧ್ಯಯನದ ವರದಿ ಪ್ರಕಟವಾಗಿದೆ.
Comments are closed.