ಪ್ರಮುಖ ವರದಿಗಳು

ನಕ್ಸಲ್ ದಾಳಿಯಲ್ಲಿ ಯೋಧ ದಿವಾಕರ್ ಹುತಾತ್ಮ: ಮದುವೆಯಾಗಿ 21ಕ್ಕೆ ವಿಧವೆಯಾದ ಪತ್ನಿ

Pinterest LinkedIn Tumblr

diwakar-priya

ಖಗರಿಯಾ: ಬಿಹಾರದಲ್ಲಿ ನಡೆದ ನಕ್ಸಲ್ ದಾಳಿಯಲ್ಲಿ ಮೃತಪಟ್ಟ 10 ಸಿಆರ್ಪಿಎಫ್ ಯೋಧರ ಪೈಕಿ ದಿವಾಕರ್ ಒಬ್ಬರಾಗಿದ್ದು, ಅವರಿಗೆ ಮದುವೆಯಾಗಿ ಆಗಷ್ಟೇ 21 ದಿನವಾಗಿತ್ತು.

ಹುತಾತ್ಮ ಯೋಧ ದಿವಾಕರ್ ಮತ್ತು ಪ್ರಿಯಾ ಮದುವೆ ಜೂನ್ 27ಕ್ಕೆ ನಡೆದಿತ್ತು. ಮದುವೆ ಬಳಿಕ ಕೆಲಸಕ್ಕೆ ಸೇರಿದ್ದ ದಿವಾಕರ್ ಸೋಮವಾರ ರಾತ್ರಿ ನಡೆದ ನಕ್ಸಲ್ ದಾಳಿಯಲ್ಲಿ ಮೃತಪಟ್ಟಿದ್ದರು. ಮದುವೆಯಾಗಿ 21 ದಿನಕ್ಕೆ ಪತಿಯನ್ನು ಕಳೆದುಕೊಂಡ ಪ್ರಿಯಾ ಕಣ್ಣೀರಿನಲ್ಲಿ ಮುಳುಗಿದ್ದು, ಮನೆಗೆ ಆಸೆಯಾಗಿದ್ದ ಮಗನನ್ನು ಕಳೆದುಕೊಂಡ ಪೋಷಕರು ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ.

ತನುಕಲಾಲ್ ಅವರಿಗೆ ಐದು ಜನ ಮಕ್ಕಳಿದ್ದು, ದಿವಾಕರ್ ಒಬ್ಬನೇ ಮಗನಾಗಿದ್ದ. ದಿವಾಕರ್ ನಂತರ ನಾಲ್ಕು ಜನ ಹೆಣ್ಣು ಮಕ್ಕಳಿದ್ದು ಅವರ ಮದುವೆ ಚಿಂತೆ ಇದೀಗ ತಂದೆ ತನುಕಲಾಲ್ ಅವರಿಗೆ ಕಾಡುತ್ತಿದೆ.

ಬಿಹಾರದ ಗಯಾ ಮತ್ತು ಔರಂಗಾಬಾದ್ ಜಿಲ್ಲೆಯ ಗಡಿ ಭಾಗ ದುಮ್ರಿ ನಲ್ಲಾ ಅರಣ್ಯ ಪ್ರದೇಶದಲ್ಲಿ ನಕ್ಸಲರು ಹೂತಿಟ್ಟಿದ್ದ ನೆಲಬಾಂಬ್ ಸ್ಪೋಟಗೊಂಡು 10 ಸಿಆರ್ಪಿಎಫ್ ಕಮಾಂಡೋಗಳು ಹುತಾತ್ಮರಾಗಿದ್ದರು.

Comments are closed.