ಪುದುಚೆರಿ: ಜವಾಹರಲಾಲ್ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯು (ಜಿಐಪಿಎಂಇಆರ್- ಜಿಪ್ಮರ್) ಆಸ್ಪತ್ರೆಯಲ್ಲಿ ಜನಿಸುವ ಅವಧಿಪೂರ್ವ ಮಕ್ಕಳಿಗಾಗಿ ಮಾನವ ತಾಯಿಯ ಹಾಲಿನ ಬ್ಯಾಂಕ್ ಸ್ಥಾಪಿಸಿದ್ದು, ಕಳೆದ ಬುಧವಾರ ಅದು ಉದ್ಘಾಟನೆಗೊಂಡಿದೆ. ’ಅಮುದನ್ ಥಾಯಿಪ್ಪಲ್ ಮೈಯಿಯಮ್ (ಎಟಿಎಂ) ಹೆಸರಿನ ಈ ಬ್ಯಾಂಕ್ ತಾಯಂದಿರಿಗೆ ಮಕ್ಕಳಿಗೆ ಹಾಲೂಡಿಸುವ ಬಗ್ಗೆ ಆಪ್ತ ಸಮಾಲೋಚನೆಯ ಸೇವೆಯನ್ನೂ ಒದಗಿಸುತ್ತದೆ.
ಜಿಪ್ಮರ್ನಲ್ಲಿ ಒಂದು ತಿಂಗಳಲ್ಲಿ ಜನಿಸುವ 1500 ಶಿಶುಗಳಲ್ಲಿ ಶೇಕಡಾ 30ರಷ್ಟು ಅವಧಿಪೂರ್ವವಾಗಿ ಜನಿಸುತ್ತಿದ್ದು, ಜನನ ಕಾಲದಲ್ಲೇ ಕಡಿಮೆ ತೂಕ ಹೊಂದಿರುತ್ತವೆ, ಇಂತಹ ಮಕ್ಕಳಿಗೆ ದಾನಿ ತಾಯಿಯ ಹಾಲಿನ ಬ್ಯಾಂಕ್ ಸ್ಥಾಪಿಸುವ ಅಗತ್ಯ ಇದೆ ಎಂದು ಜಿಪ್ಮರ್ ನಿರ್ದೇಶಕ ಸಿ. ಪಾರಿಜ ಸೋಮವಾರ ಇಲ್ಲಿ ಹೇಳಿದರು.
ಅವಧಿಪೂರ್ವ ಜನನ ಶಿಶುಗಳು ಮತ್ತು ಕನಿಷ್ಠ 6 ತಿಂಗಳವರೆಗೆ ತಾಯ ಹಾಲು ಸಿಗದ ಶಿಶುಗಳು ಕಡಿಮೆ ತೂಕದ ಕಾರಣ ಮುಂದೆ ಹಲವಾರು ಆರೋಗ್ಯ ಸಮಸ್ಯೆ ಎದುರಿಸಬೇಕಾಗುತ್ತದೆ. ಅಂತಹ ಮಕ್ಕಳಿಗೆ ತಾಯಿಯ ಹಾಲು ಸಾಕಷ್ಟು ಪ್ರಮಾಣದಲ್ಲಿ ಲಭಿಸದೇ ಇದ್ದಲ್ಲಿ , ಆಗ ದಾನಿ ತಾಯಿಯ ಪ್ಯಾಶ್ಚರೀಕರಿಸಿದ ಹಾಲು ನೀಡುವುದೇ ಇರುವ ಪರ್ಯಾಯ ಮಾರ್ಗ’ ಎಂದು ಅವರು ನುಡಿದರು.
Comments are closed.