
ಆನೇಕಲ್: ವಿದ್ಯುತ್ ತಗುಲಿ ದಾರುಣವಾಗಿ ಸಾವನ್ನಪ್ಪಿದ್ದ 12 ವರ್ಷದ ಬಾಲಕನ ಕಣ್ಣನ್ನು ದಾನಮಾಡುವ ಮೂಲಕ ಪೋಷಕರು ಪುತ್ರ ಶೋಕದಲ್ಲೂ ಹೃದಯ ಶ್ರೀಮಂತಿಕೆ ಮೆರೆದಿದ್ದಾರೆ.
ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಅತ್ತಿಬೆಲೆಯ ವಿದು ಮೃತ ಬಾಲಕ. ನಿನ್ನೆ ಶಾಲೆ ಮುಗಿಸಿ ಬಂದಿದ್ದ ವಿದು, ಮನೆಯ ಟೆರೆಸ್‍ನಲ್ಲಿ ತನ್ನ ಸ್ನೇಹಿತರೊಂದಿಗೆ ಆಟವಾಡ್ತಿದ್ದ. ಈ ವೇಳೆ ಬಟ್ಟೆ ಒಣಗಲೆಂದು ಹಾಕಿದ್ದ ತಂತಿ ಆಟಕ್ಕೆ ಅಡ್ಡಿಪಡಿಸ್ತಿತ್ತು. ಆಗ ವಿದು ಆ ತಂತಿಯನ್ನು ತೆಗೆದು ಕೆಳಗೆಸೆದಾಗ ಅದು ಪಕ್ಕದಲ್ಲೇ ಹಾದು ಹೋಗಿದ್ದ ವಿದ್ಯುತ್ ಲೈನ್ ಮೇಲೆ ಬಿದ್ದಿದೆ. ಇದನ್ನರಿಯದ ಬಾಲಕ ಮತ್ತೊಮ್ಮೆ ತಂತಿಯನ್ನು ಮುಟ್ಟಿದ್ದಾನೆ. ಈ ವೇಳೆ ಆತನಿಗೆ ವಿದ್ಯುತ್ ಸ್ಪರ್ಶವಾಗಿದೆ.
ಈ ವೇಳೆ ಅಸ್ವಸ್ಥನಾದ ಬಾಲಕನನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತಾದರೆ, ಆತ ಉಳಿಯಲೇ ಇಲ್ಲ. ತಮ್ಮ ಮುದ್ದಿನ ಕಂದಮ್ಮನ ಸಾವಿನ ಆಘಾತದ ನಡುವೆಯೂ ಹೆತ್ತವರು ಹೃದಯ ವೈಶಾಲ್ಯತೆ ಮೆರೆದಿದ್ದಾರೆ. ಆದ್ರೆ ದುರಂತ ನಡೆದರೂ ಬೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿಲ್ಲದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
Comments are closed.