
ಬೆಂಗಳೂರು: ಕನ್ನಡದಲ್ಲಿ ಮೊದಲ ಡಬ್ಬಿಂಗ್ ಚಿತ್ರವಾಗಿ ‘ನಾನು ನನ್ನ ಹೆಂಡತಿ ಪ್ರೀತಿ’ ತೆರೆಗೆ ಬರುತ್ತಿದೆ. ಕನ್ನಡದಲ್ಲಿ ದೊಡ್ಡ ಮಟ್ಟದಲ್ಲಿ ಡಬ್ಬಿಂಗ್ ವಿರೋಧಿಸಿ ಹೋರಾಟಗಳು ನಡೆದಿವೆ.
ಇತ್ತ ನಟ ಶಿವರಾಜ್‌ಕುಮಾರ್ ಕೂಡ ಡಬ್ಬಿಂಗ್ ವಿರುದ್ಧ ಗಟ್ಟಿಯಾಗಿ ಧ್ವನಿ ಎತ್ತಿದ್ದರು. ಆದರೆ, ಇನ್ನು ಮುಂದೆ ಶಿವಣ್ಣ ಡಬ್ಬಿಂಗ್ ವಿಷಯವಾಗಿ ಮಾತನಾಡಲ್ಲ. ಅದನ್ನು ವಿರೋಧಿಸಿ ಯಾವುದೇ ರೀತಿಯ ಹೇಳಿಕೆ ಕೊಡದಿರಲು ಅವರು ನಿರ್ಧರಿಸಿದ್ದಾರೆ.
‘ಸಿನಿಮಾ ನೋಡುವವರು ನಮಗಿಂತ ಬುದ್ಧಿವಂತರು. ಅವರಿಗೆ ಯಾವ ರೀತಿಯ ಸಿನಿಮಾ ಬೇಕು ಎಂಬುದನ್ನು ಅವರೇ ನಿರ್ಧರಿಸಲಿ. ಡಬ್ಬಿಂಗ್‌ನಿಂದ ನಮ್ಮ ಸಿನಿಮಾ ಕಾರ್ಮಿಕರು ಕೆಲಸ ಕಳೆದುಕೊಳ್ಳುತ್ತಾರೆ ಅನ್ನುವ ಕಾರಣಕ್ಕೆ ನಾನು ಡಬ್ಬಿಂಗ್ ವಿರುದ್ಧ ನಿಂತೆ. ಆದರೆ, ಜನ ಪರಭಾಷೆ ಸಿನಿಮಾಗಳನ್ನು ನೋಡುತ್ತಿದ್ದಾರೆ. ೩೦೦ ರಿಂದ ೪೦೦ ಚಿತ್ರಮಂದಿರಗಳಲ್ಲಿ ಪರಭಾಷೆ ಸಿನಿಮಾಗಳು ತೆರೆ ಕಾಣುತ್ತಿವೆ. ನಾನು ಯಾರ ಪರವಾಗಿ ನಿಂತು ಡಬ್ಬಿಂಗ್ ಬೇಡ ಅಂತ ಹೇಳಿದನೋ ಅವರೇ ಸುಮ್ಮನಿದ್ದಾರೆ. ಹೀಗಾಗಿ ಡಬ್ಬಿಂಗ್ ವಿಷಯ ನನ್ನದಲ್ಲ, ಜನರ ವಿಷಯ. ಡಬ್ಬಿಂಗ್ ಬೇಕೋ, ಬೇಡವೋ ಅವರೇ ನಿರ್ಧರಿಸಲಿ. ನಾನು ಈ ವಿಚಾರದಲ್ಲಿ ಮಾತನಾಡಲ್ಲ’ ಎಂದು ಖಡಕ್ ಆಗಿಯೇ ಹೇಳಿದ್ದಾರೆ ಶಿವರಾಜ್‌ಕುಮಾರ್.
Comments are closed.