ರಾಷ್ಟ್ರೀಯ

ಡಾ.ಜಾಕಿರ್ ನಾಯಕ್ ಹತ್ಯೆ ಮಾಡಿದವರಿಗೆ 15 ಲಕ್ಷ ಬಹುಮಾನ ಕೊಡುದಾಗಿ ಘೋಷಣೆ !

Pinterest LinkedIn Tumblr

zakir

ಲಖನೌ: ಉಗ್ರರಿಗೆ ಸ್ಫೂರ್ತಿಯಾಗಿದ್ದ ಆರೋಪದ ಹಿನ್ನೆಲೆಯಲ್ಲಿ ಮಾಧ್ಯಮಗಳು ತನ್ನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದು, ತನಗೆ ಬೆಂಬಲ ನೀಡಬೇಕು ಎಂದು ಜಾಕಿರ್ ನಾಯಕ್ ಮುಸ್ಲಿಂ ಸಮುದಾಯಕ್ಕೆ ಕರೆ ನೀಡಿದ್ದರು. ವಿಚಿತ್ರವೆಂದರೆ ಅದೇ ಮುಸ್ಲಿಂ ಸಮುದಾಯದ ಶಿಯಾ ಪಂಥದ ಸಂಘಟನೆಯೊಂದು ಜಾಕಿರ್ ನಾಯಕ್ ನನ್ನ ಹತ್ಯೆ ಮಾಡಿದವರಿಗೆ 15 ಲಕ್ಷ ಬಹುಮಾನ ನೀಡುವುದಾಗಿ ಘೋಷಿಸಿದೆ.

ಶಿಯಾ ಪಂಥದ ಹುಸೈನಿ ಟೈಗರ್ಸ್ ಎಂಬ ಸಂಘಟನೆ ಜಾಕಿರ್ ನಾಯಕ್ ನ್ನು ಖಳನಾಯಕ, ಕಾಫಿರ್ ವ್ಯಕ್ತಿಯಾಗಿದ್ದು, ಜಾಕಿರ್ ನಾಯಕ್ ನ ತಲೆ ಕಡಿದವರಿಗೆ 15 ಲಕ್ಷ ಬಹುಮಾನ ನೀಡುವುದಾಗಿ ಘೋಷಿಸಿದೆ. ಜಾಕಿರ್ ನಾಯಕ್ ಪ್ರವಾದಿ ಮೊಹಮ್ಮದ್ ಗೆ ಅವಮಾನ ಮಾಡಿದ್ದಾರೆ. ಆತನೊಬ್ಬ ಖಳನಾಯಕನಾಗಿದ್ದು ಹತ್ಯೆ ಮಾಡಿದವರಿಗೆ 15 ಲಕ್ಷ ಬಹುಮಾನ ನೀಡುತ್ತೇವೆ ಎಂದು ಅಖಿಲ ಭಾರತೀಯ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಉಪಾಧ್ಯಕ್ಷ ಹಾಗೂ ಪ್ರಮುಖ ಇಸ್ಲಾಮ್ ಧಾರ್ಮಿಕ ಮುಖಂಡ ಸಯೀದ್ ಕಾಲ್ಬೆ ಸಾದಿಕ್ ಅವರ ಪುತ್ರ ಸಯೀದ್ ಕಲ್ಬೆ ಹುಸೈನ್ ನಖ್ವಿ ತಿಳಿಸಿದ್ದಾರೆ.

ಢಾಕಾದಲ್ಲಿ ದಾಳಿ ನಡೆಸಿದ ಉಗ್ರರಿಗೆ ಜಾಕಿರ್ ನಾಯಕ್ ಸ್ಫೂರ್ತಿಯಾಗಿದ್ದರು ಎಂಬ ವರದಿಯಾಗಿದ್ದು, ಈ ಮಾಹಿತಿ ಬಹಿರಂಗವಾಗುತ್ತಿದ್ದಂತೆ ಇಸ್ಲಾಮ್ ಧಾರ್ಮಿಕ ಮುಖಂಡರು ಜಾಕಿರ್ ನಾಯಕ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸರ್ಕಾರವನ್ನು ಆಗ್ರಹಿಸಿದ್ದಾರೆ.

Comments are closed.