ಪ್ರಮುಖ ವರದಿಗಳು

ಮೊನಾಲಿಸಾಳ ಚೆಲುವನ್ನು ಮೀರಿಸುವ ಸೌಂದರ್ಯದ ಚಿಲುಮೆ ಶಿವನದ್ದು …!

Pinterest LinkedIn Tumblr

Shiva-Mona Lisa

ಜಗತ್ತಿನಲ್ಲಿ ಮೊನಾಲಿಸಾಳ ಚೆಲುವನ್ನು ಮೀರಿಸುವ ಮತ್ತೊಂದು ಚೆಲುವು ಇಲ್ಲ ಅಂತಲೇ ನಂಬಲಾಗಿತ್ತು. ಆದರೆ ಇದೀಗ ಮುಂಬೈನ ಭೌತಶಾಸ್ತ್ರಜ್ಞರು ಮೊನಾಲಿಸಾಳ ಚೆಲುವನ್ನು ಮೀರಿಸುವ ಸೌಂದರ್ಯದ ಚಿಲುಮೆ ಶಿವನದ್ದು ಎಂದು ಅಭಿಪ್ರಾಯ ಮಂಡಿಸಿದ್ದಾರೆ.

ಇಟಲಿ ಖ್ಯಾತ ಕಲಾವಿದ ಲಿಯೊನಾರ್ಡೊ ಡಾವಿನ್ಸಿ ಕುಂಚದಲ್ಲಿ ಅರಳಿದ ಮೊನಾಲಿಸಾಳ ನಗುಮೊಗವನ್ನೇ ಇದುವರೆಗೂ ಪ್ರಪಂಚದಲ್ಲಿ ಸೌಂದರ್ಯದ ಪರಾಕಾಷ್ಠೆ ಎಂದು ನಂಬಲಾಗಿದೆ. ಆದರೆ ಬಿಹಾರದ ಭೋಜ್ ಪುರದಲ್ಲಿರುವ ಜಾನಪದ ಶೈಲಿಯ ಪುರಾತನ ಶಿವನ ಕಲಾಕೃತಿ ಮೊನಾಲಿಸಾಳ ಚೆಲುವನ್ನು ಮೀರಿಸಿದೆ ಎಂದು ಹೋಮಿ ಬಾಬಾ ವಿಜ್ಞಾನ ಶಿಕ್ಷಣ ಕೇಂದ್ರದ ಭೌತಶಾಸ್ತ್ರಜ್ಞರಾದ ವಿಜಯ್ ಸಿಂಗ್ ಹಾಗೂ ಪ್ರವೀಣ್ ಪಾಠಕ್ ಅವರು ತಮ್ಮ ಅಧ್ಯಯನದ ವರದಿಯನ್ನು ಯೂರೋಪಿಯನ್ ಜರ್ನಲ್ ಆಫ್ ಫಿಸಿಕ್ಸ್ ನಲ್ಲಿ ಪ್ರಕಟಿಸಿದ್ದಾರೆ.

ಜಾನಪದ ಶೈಲಿಯ ಪುರಾತನ ಶಿವನ ಕಲಾಕೃತಿಯಲ್ಲಿ ಶಿವ ಮತ್ತು ಮೊನಾಲಿಸಾಳ ಸೌಂದರ್ಯದ ನಡುವಿನ ಸಾಮ್ಯತೆ ಹಾಗೂ ನಂಟನ್ನು ವಿಜಯ್ ಹಾಗೂ ಪ್ರವೀಣ್ ಗುರುತಿಸಿದ್ದಾರೆ. ಶಿವನ ತಲೆಯ ಮೇಲಿರುವ ಅರ್ಧಚಂದ್ರ, ಕಲಾಕೃತಿಯ ಸೌಂದರ್ಯವನ್ನು ಇಮ್ಮಡಿಸುವಲ್ಲಿ ಮಹತ್ವದ ಪಾತ್ರವಹಿಸಿದೆ. ಒಂದು ಬೃಹತ್ ವೃತ್ತದಿಂದ ಹೊರತೆಗೆದಂತೆ ಕಾಣುವ ಈ 1.618 ಅಂಶದ ಅರ್ಧ ಚಂದ್ರಾಕೃತಿಯು ಸೌಂದರ್ಯ ಶಾಸ್ತ್ರದಲ್ಲಿ ಹೇಳಲಾಗುವ ಗೋಲ್ಡನ್ ರೇಶಿಯೋ ಮಾನದಂಡವನ್ನು ಪೂರೈಸುತ್ತದೆ ಎಂದು ಹೇಳಿದ್ದಾರೆ.

ಗೋಲ್ಡನ್ ರೇಶಿಯೋ ಎಂದರೇನು
ಸೌಂದರ್ಯ ಆಧರಿತ ಕ್ಷೇತ್ರದಲ್ಲಿ ಗೋಲ್ಡನ್ ರೇಶಿಯೋವನ್ನು ಸೌಂದರ್ಯಕ್ಕೆ ಮಾನದಂಡವಾಗಿ ಗುರುತಿಸಲಾಗುತ್ತದೆ. ದೇಹದ ಎಲ್ಲ ಅಂಗಗಳ ನಡುವೆ ಹಾಗೂ ಮೊಗದಲ್ಲಿ ಯಾವುದು ಹೆಚ್ಚಾಗದಂತೆ ಯಾವುದು ಕಡಿಮೆಯಾಗದಂತೆ ಅನುರೂಪ ಅನುಪಾತ ಕಾಯ್ದುಕೊಳ್ಳುವುದನ್ನು ಗೋಲ್ಡನ್ ರೇಶಿಯೋ ಎನ್ನುತ್ತಾರೆ.

Comments are closed.