ಕರ್ನಾಟಕ

ರಂಪಾಟ ಮಾಡಿ ಜೈಲು ಸೇರಿರುವ ಉಗಾಂಡ ಯುವತಿಯ ಊಟದ ಲಿಸ್ಟ್ ನೋಡಿ ಬೆಚ್ಚಿ ಬಿದ್ದ ಜೈಲು ಅಧಿಕಾರಿ ! ನೀವು ಈ ಲಿಸ್ಟ್ ನೋಡಿ ಆಶ್ಚರ್ಯ ಪಡಬಹುದು …

Pinterest LinkedIn Tumblr

uganda

ಬೆಂಗಳೂರು: ದ್ಯದ ಅಮಲಿನಲ್ಲಿ ರಂಪಾಟ ಮಾಡಿ ಸಿಕ್ಕಿಬಿದ್ದಿರುವ ಉಗಾಂಡ ಯುವತಿ ನಂಫ್ಲಿಮಾ ಮರಿಯನ್ ಅವರು ಜೈಲಿನಲ್ಲಿ ನಾನೂ ಪ್ರತಿದಿನ ಸೇವಿಸುತ್ತಿದ್ದ ಊಟವನ್ನೇ ನೀಡುವಂತೆ ಹಠ ಹಿಡಿದಿದ್ದು ಆಕೆಯನ್ನು ಸಮಾಧಾನ ಪಡಿಸಲು ಜೈಲು ಅಧಿಕಾರಿಗಳು ಸುಸ್ತಾಗಿ ಹೋಗಿದ್ದಾರೆ.

ಮರಿಯನ್ ತಾನು ಪ್ರತಿದಿನ ಮಾಡುತ್ತಿದ್ದ ಊಟದ ಲಿಸ್ಟ್ ಹೇಳಿ ಅದನ್ನು ಒದಗಿಸುವಂತೆ ಹಠ ಹಿಡಿಯುತ್ತಿದ್ದು ಜೈಲಿನಲ್ಲಿ ಅದನ್ನೇಲ್ಲಾ ನೀಡಲು ಸಾಧ್ಯವಿಲ್ಲ ಎಂದು ಹೇಳಿ ಆಕೆಯನ್ನು ಸುಧಾರಿಸಲು ಸುಸ್ತಾಗಿ ಹೋಗಿರುವ ಜೈಲಿನ ಅಧಿಕಾರಿಗಳು ಹಿರಿಯ ಅಧಿಕಾರಿಗಳ ಮೊರೆ ಹೋಗಿದ್ದಾರೆ.

ಬೆಳಗ್ಗೆ ಮೂರು ಲೀಟರ್ ಹಸಿಹಾಲು ಊಟಕ್ಕೆ ಕುರಿ ಮಾಂಸದ ಜೊತೆ ಗೋ ಮಾಂಸ ಜೊತೆಗೆ ಗೋ ಮಾಂಸ, ಸೊಪ್ಪು ಬೆರಸಿದ ಸೂಪ್ ರಾತ್ರಿಯ ಊಟದ ಜೊತೆಯಲ್ಲಿ ಉಡದ ಮಾಂಸ ಬೇಕು ಜೊತೆಯಲ್ಲಿ ಮದ್ಯ ಬೇಕೇಬೇಕು ಎಂದು ಹಠ ಹಿಡಿದಿರುವ ಆಕೆಯನ್ನು ಸಮಾಧಾನ ಪಡಿಸಲು ಜೈಲಿನ ಅಧಿಕಾರಿಗಳು ಸುಸ್ತಾಗಿ ಹೋಗಿದ್ದಾರೆ.

ಮೂರು ದಿನ ಸತತ ಮದ್ಯ ಸೇವಿಸುವ ತಾಕತ್ತು ತನಗಿದೆ ಎಂದು ಹೇಳಿ ಜೈಲಿನ ಅಧಿಕಾರಿಗಳನ್ನು ಆಕೆ ದಂಗುಪಡಿಸಿದ್ದಾಳೆ.

ಹಸಿ ಹಾಲನ್ನ ಸೌಂದರ್ಯಕ್ಕೆ ಕುಡಿಯಲಿದ್ದು ಇದರಿಂದ ಮತ್ತು ಬರಿಸುವ ಶಕ್ತಿಯ ಹೆಚ್ಚಾಗಲಿದೆ ಎಂದು ಹೇಳಿದ್ದಾಳೆ ಉಡದ ಮಾಂಸ ರಾಜ್ಯದಲ್ಲಿ ಸಿಗುವುದು ಅಪರೂಪ ಅಲ್ಲದೇ ಅದರ ಮಾರಾಟಕ್ಕೆ ನಿಷೇಧವಿದ್ದರು ಅದೂ ಹೇಗೆ ಮರಿಯಾಗೆ ಸಿಗುತ್ತಿತ್ತು ಎನ್ನುವುದರ ತನಿಖೆಯನ್ನು ಪೊಲೀಸರು ನಡೆಸಬೇಕಿದೆ.

ಕುರಿ ಮಾಂಸದ ಜೊತೆಗೆ ಗೋ ಮಾಂಸವನ್ನ ಹಾಕಿ ಸೂಪ್ ಮಾಡೋದು ಮರಿಯಾಂಗೆ ಫೇವರಿಟ್ ಅಂತೆ. ಊರುದ್ದ ಊಟದ ಪಟ್ಟಿಯನ್ನ ನೋಡಿ ತಲೆಕೆಡಿಸಿಕೊಂಡ ಜೈಲಾಧಿಕಾರಿಗಳು ಎಲ್ಲಾ ಕೈದಿಗಳಿಗೂ ಏನು ಊಟ ನೀಡಲಾಗುತ್ತದೆಯೋ ಅದನ್ನೆ ತಿನ್ನಬೇಕು ಎಂದು ಹೇಳಿದ್ದಾರೆ ಅಂದಹಾಗೆ ಮರಿಯಾ ಅವರನ್ನು ಜುಲೈ ೧೩ರವರೆಗೆ ನ್ಯಾಯಾಂಗ ಬಂಧನವನ್ನು ವಿಧಿಸಲಾಗಿದೆ.

ಈ ನಡುವೆ ವೇಳೆ ಮರಿಯಾ ಅವರ ಮನೆಯನ್ನು ಶೋಧ ನಡೆಸಿದ ಉಪ್ಪಾರಪೇಟೆ ಪೊಲೀಸರಿಗೆ ಆಕೆ ಉಗಾಂಡದ ಪ್ರಜೆಯಾಗಿರುವುದು ಪ್ರವಾಸಿ ವೀಸಾ ಮೇಲೆ ಭಾರತಕ್ಕೆ ಬಂದಿರುವುದು ಪತ್ತೆಯಾಗಿದೆ.

ಉಗಾಂಡ ನಕಲು ಪಾಸ್‌ಪೋರ್ಟ್, ಟ್ರಾವೆಲ್ಸ್ ಏಜೆನ್ಸಿ ಡಿಟೇಲ್ಸ್ ನಕಲು, ವೀಸಾ ಕಾಫಿ ನಕಲು, ಪಾಸ್ ಪೋರ್ಟ್ ಕಳೆದು ಹೋಗಿರೋ ಬಗ್ಗೆ ಎಫ್‌ಐಆರ್ ಕಾಪಿ ದೊರೆತಿದೆ.ಕೆಲವೊಂದು ಮದ್ಯದ ಬಾಟಲುಗಳು ಅವಧಿ ಮುಗಿದು ಮೂರು ವರ್ಷವಾಗಿರುವ ವೀಸಾ ದೊರೆತಿದ್ದು ಆಕೆ ಯಾವುದೇ ಕಾಲೇಜು ವಿದ್ಯಾರ್ಥಿಯಾಗಿರಲಿಲ್ಲ ಎನ್ನುವುದು ಗೊತ್ತಾಗಿದೆ ಎಂದು ಡಿಸಿಪಿ ಅಜಯ್ ಹಿಲೋರಿ ತಿಳಿಸಿದ್ದಾರೆ.

Comments are closed.