ಅಡಿಲೇಡ್, ಮಾ.15: ಸರ್ಫರಾಝ್ ಅಹ್ಮದ್ ಚೊಚ್ಚಲ ಶತಕದ ನೆರವಿನಿಂದ ಪಾಕಿಸ್ತಾನ ತಂಡ ರವಿವಾರ ಇಲ್ಲಿ ನಡೆದ ವಿಶ್ವಕಪ್‌ನ ‘ಬಿ’ ಗುಂಪಿನ ಕೊನೆಯ ಪಂದ್ಯದಲ್ಲಿ ‘ದೈತ್ಯ ಸಂಹಾರಿ’ ಖ್ಯಾತಿಯ ಐರ್ಲೆಂಡ್ ತಂಡ ವನ್ನು 7 ವಿಕೆಟ್‌ಗಳಿಂದ ಮ ಣಿಸಿತು. ಈ ಮೂಲಕ ಕ್ವಾರ್ಟರ್ ಫೈನಲ್‌ಗೆಪ್ರವೇಶ ಗಿಟ್ಟಿಸಿಕೊಂಡಿತು.
ಗೆಲ್ಲಲು 238 ರನ್ ಗುರಿ ಪಡೆದಿದ್ದ ಪಾಕಿಸ್ತಾನ 46.1 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 241 ರನ್ ಗಳಿಸಿ ಸುಲಭ ಗೆಲುವು ಸಾಧಿಸಿತು. ಸರ್ಫರಾಝ್(ಅಜೇಯ 101, 124 ಎಸೆತ, 6 ಬೌಂಡರಿ) ಅವರು ಇಮ್ರಾನ್ ನಝೀರ್ (2007ರ ವಿಶ್ವಕಪ್) ಬಳಿಕ ವಿಶ್ವಕಪ್‌ನಲ್ಲಿ ಶತಕ ಸಿಡಿಸಿದ ಪಾಕ್‌ನ ಎರಡನೆ ದಾಂಡಿಗನೆಂಬ ಕೀರ್ತಿಗೆ ಭಾಜನರಾದರು.
6 ಪಂದ್ಯಗಳಲ್ಲಿ 4ರಲ್ಲಿ ಜಯ ಸಾಧಿಸಿ ‘ಬಿ’ ಗುಂಪಿನಲ್ಲಿ 3ನೆ ಸ್ಥಾನಕ್ಕೇರಿರುವ ಪಾಕಿಸ್ತಾನ ಮಾ.20 ರಂದು ಇದೇ ಮೈದಾನದಲ್ಲಿ ನಡೆಯಲಿರುವ ಕ್ವಾರ್ಟರ್ ಫೈನಲ್‌ನಲ್ಲಿ ಆಸ್ಟ್ರೇಲಿಯ ತಂಡವನ್ನು ಎದುರಿಸಲಿದೆ. ಟೂರ್ನಿಯ ಆರಂಭಿಕ ಪಂದ್ಯಗಳಲ್ಲಿ ಆಡುವ ಅವಕಾಶದಿಂದ ವಂಚಿತರಾಗಿದ್ದ ಸರ್ಫರಾಝ್ ಅವರು ರವಿವಾರ ಅಹ್ಮದ್ ಶೆಹಝಾದ್‌ರೊಂದಿಗೆ ಇನಿಂಗ್ಸ್ ಆರಂಭಿಸಿದರು. ಮೊದಲ ವಿಕೆಟ್‌ಗೆ 120 ರನ್ ಜೊತೆ ಯಾಟ ನಡೆಸಿದ ಸರ್ಫರಾಝ್-ಶೆಹಝಾದ್ ಜೋಡಿ ಪಾಕ್‌ಗೆ ಭದ್ರ ಬುನಾದಿ ಹಾಕಿಕೊಟ್ಟರು. ಪಾಕ್ ಪರ ಸರ್ಫರಾಝ್‌ರಲ್ಲದೆ ಶೆಹಝಾದ್(63 ರನ್), ನಾಯಕ ಮಿಸ್ಬಾವುಲ್ ಹಕ್(39) ಹಾಗೂ ಉಮರ್ ಅಕ್ಮಲ್(ಅಜೇಯ 20) ಪ್ರಮುಖ ಕಾಣಿಕೆ ನೀಡಿದರು. ಐರ್ಲೆಂಡ್ ಪರವಾಗಿ ವೇಗದ ಬೌಲರ್ ಅಲೆಕ್ಸ್ ಕ್ಯೂಸಕ್(1-43) ಯಶಸ್ವಿ ಬೌಲರ್ ಎನಿಸಿ ಕೊಂಡರು.
ಇದಕ್ಕೂ ಮೊದಲು ಟಾಸ್ ಜಯಿಸಿದ ಐರ್ಲೆಂಡ್ ತಂಡ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತ್ತು. ಆರಂಭಿಕ ದಾಂಡಿಗ ವಿಲಿಯಮ್ ಪೋರ್ಟರ್‌ಫೀಲ್ಡ್ ಶತಕ ಸಿಡಿಸಿದರೂ ಅತ್ಯುತ್ತಮ ಬೌಲಿಂಗ್ ಸಂಘಟಿಸಿದ್ದ ಪಾಕ್ ಬೌಲರ್‌ಗಳು ಐರ್ಲೆಂಡ್‌ನ್ನು 237 ರನ್‌ಗೆ ನಿಯಂತ್ರಿಸಿದರು. ಪಾಕಿಸ್ತಾನ ಕೊನೆಯ 10 ಓವರ್‌ಗಳಲ್ಲಿ ಕೇವಲ 49 ರನ್ ನೀಡಿ ಐದು ವಿಕೆಟ್‌ಗಳನ್ನು ಕಬಳಿಸಿತು. ವಹಾಬ್ ರಿಯಾಝ್(3-54) ಪಾಕ್ ಪರ ಯಶಸ್ವಿ ಬೌಲರ್ ಎನಿಸಿಕೊಂಡರು. ಸೊಹೈಲ್ ಖಾನ್ ಹಾಗೂ ರಹತ್ ಅಲಿ ತಲಾ ಎರಡು ವಿಕೆಟ್‌ಗಳನ್ನು ಕಬಳಿಸಿದರು. ಅಡಿಲೇಡ್ ಓವಲ್‌ನಲ್ಲಿ ಪಾಕ್ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದ ಪೋರ್ಟರ್‌ಫೀಲ್ಡ್ (107 ರನ್)ಏಕಾಂಗಿ ಹೋರಾಟ ನೀಡಿದರು. ಇತರ ಅಗ್ರ ಕ್ರಮಾಂಕದ ದಾಂಡಿಗರಾದ ಪೌಲ್ ಸ್ಟಿರ್ಲಿಂಗ್, ಎಡ್ ಜಾಯ್ಸಿ ಹಾಗೂ ನಿಯಾಲ್ ಒಬ್ರಿಯಾನ್ ವಿಫಲ ರಾದರು. ಪೋರ್ಟರ್ ಫೀಲ್ಡ್ ಅವರು ಆ್ಯಂಡಿ ಬಲ್‌ಬಿರ್ನಿ(18) ಹಾಗೂ ಗ್ಯಾರಿ ವಿಲ್ಸನ್(29) ಅವರೊಂದಿಗೆ ಕ್ರಮವಾಗಿ 4ನೆ ಹಾಗೂ 5ನೆ ವಿಕೆಟ್‌ಗೆ ತಲಾ 48 ರನ್ ಜೊತೆಯಾಟ ನಡೆಸಿದರು.
ಟೂರ್ನಿಯಲ್ಲಿ ಐದು ಪಂದ್ಯಗಳಲ್ಲಿ ಮೂರರಲ್ಲಿ ಗೆಲುವು ಸಾಧಿಸಿದ್ದ ಐರ್ಲೆಂಡ್ ಬಿ ಗುಂಪಿನ ಅಂತಿಮ ಪಂದ್ಯದಲ್ಲಿ ಗೆಲುವು ಸಾಧಿಸಿ ಕ್ವಾರ್ಟರ್‌ಫೈನಲ್‌ಗೇರುವ ವಿಶ್ವಾಸದಲ್ಲಿತ್ತು. ಆದರೆ, ಪೋರ್ಟರ್‌ಫೀಲ್ಡ್ 7ನೆ ಶತಕ ಹೊರತುಪಡಿಸಿದರೆ ಪಂದ್ಯದಲ್ಲಿ ಎಲ್ಲೂ ಹೋರಾಟವನ್ನೇ ನೀಡದೆ ಸುಲಭವಾಗಿ ಶರಣಾಯಿತು.
ಸ್ಕೋರ್ ಪಟ್ಟಿ
ಐರ್ಲೆಂಡ್: 50 ಓವರ್‌ಗಳಲ್ಲಿ 237/10
ಪೋರ್ಟರ್ ಸಿ ಅಫ್ರಿದಿ ಬಿ ಸೊಹೈಲ್ ಖಾನ್ 107
ಸ್ಟ್ಟಿರ್ಲಿಂಗ್ ಎಲ್‌ಬಿಡಬ್ಲೂ ಎಹ್ಸಾನ್ ಅದಿಲ್ 3
ಜಾಯ್ಸ ಸಿ ಅಕ್ಮಲ್ ಬಿ ವಹಾಬ್ ರಿಯಾಝ್ 11
ನಿ.ಒಬ್ರಿಯಾನ್ ಸಿ ಅಕ್ಮಲ್ ಬಿ ರಹತ್ ಅಲಿ 12
ಬಲ್‌ಬಿರ್ನಿ ಸಿ ಅಫ್ರಿದಿ ಬಿ ಸೊಹೈಲ್ 18
ವಿಲ್ಸನ್ ಸಿ ರಿಯಾಝ್ ಬಿ ಸೊಹೈಲ್ 29
ಕೆ.ಒಬ್ರಿಯಾನ್ ಸಿ ಮಕ್ಸೂದ್ ಬಿ ರಿಯಾಝ್ 8
ಥಾಮ್ಸನ್ ಸಿ ಅಕ್ಮಲ್ ಬಿ ರಹತ್ ಅಲಿ 12
ಮೂನಿ ಸಿ ಅಕ್ಮಲ್ ಬಿ ರಿಯಾಝ್ 13
ಡಾಕ್ರೆಲ್ ರನೌಟ್ 11
ಕ್ಯೂಸಕ್ ಅಜೇಯ 1
ಇತರ 12
ವಿಕೆಟ್‌ಪತನ:
1-11, 2-56, 3-86, 4-134, 5-182, 6-189, 7-204, 8-216, 9-230, 10-237
ಬೌಲಿಂಗ್ ವಿವರ: ಸೊಹೈಲ್ ಖಾನ್ 10-0-44-2
ಎಹ್ಸಾನ್ ಅದಿಲ್ 7-0-31-1
ರಹತ್ ಅಲಿ 10-0-48-2
ವಹಾಬ್ ರಿಯಾಝ್ 10-0-54-3
ಶಾಹಿದ್ ಅಫ್ರಿದಿ 10-0-38-0
ಹಾರೀಸ್ ಸೊಹೈಲ್ 3-0-20-1
ಪಾಕಿಸ್ತಾನ: 46.1 ಓವರ್‌ಗಳಲ್ಲಿ 241/3
ಅಹ್ಮದ್ ಶೆಹಝಾದ್ ಸಿ ಜಾಯ್ಸ ಬಿ ಥಾಮ್ಸನ್ 63
ಸರ್ಫರಾಝ್ ಅಹ್ಮದ್ ಅಜೇಯ 101
ಹಾರೀಸ್ ಸೊಹೈಲ್ ರನೌಟ್ 3
ಮಿಸ್ಬಾವುಲ್ ಹಕ್ ಹಿಟ್‌ವಿಕೆಟ್ ಬಿ ಕ್ಯುಸಕ್ 39
ಉಮರ್ ಅಕ್ಮಲ್ ಅಜೇಯ 20
ಇತರ 15
ವಿಕೆಟ್ ಪತನ:
1-120, 2-126, 3-208
ಬೌಲಿಂಗ್ ವಿವರ:
ಕ್ಯೂಸಕ್ 10-1-43-1
ಮೂನಿ 9-1-40-0
ಥಾಮ್ಸನ್ 10-0-59-1
ಡಾಕ್ರೆಲ್ 6-0-43-0
ಕೆವಿನ್ ಒಬ್ರಿಯಾನ್ 10-0-49-0
ಸ್ಟಿರ್ಲಿಂಗ್ 1.1-0-5-0