ಮುಂಬೈ: ಮಂಗ, ನಾಯಿ ಗ್ಯಾಂಗ್ ವಾರ್ ನಡೆದಿದ್ದು, 80 ನಾಯಿಗಳು ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿ ನಡೆದಿದೆ.
(ಸಾಂದರ್ಭಿಕ ಚಿತ್ರ)
ಬೀದಿ ನಾಯಿಗಳ ಮೇಲಿನ ಪ್ರತೀಕಾರದಿಂದ ಕೋತಿಗಳ ಗುಂಪು ಸಿಕ್ಕ ಸಿಕ್ಕ ನಾಯಿಮರಿಗಳನ್ನೆಲ್ಲಾ ಹೊತ್ತೊಯ್ದು ಎತ್ತರದ ಕಟ್ಟಡ ಅಥವಾ ಮರದಿಂದ ಕೈಬಿಟ್ಟು ಕೊಂದು ಹಾಕಿವೆ.
ಸ್ಥಳೀಯರ ಪ್ರಕಾರ ಇಲ್ಲಿನ ಮಜಲ್‍ಗಾವ್‍ನಲ್ಲಿ ನಾಯಿಗಳು ಕೋತಿಮರಿಯ ಮೇಲೆ ದಾಳಿ ಮಾಡಿ ಕೊಂದಿದ್ದವು. ಆಗಿನಿಂದಲೂ ಕೋತಿಗಳ ಗುಂಪು ಕಂಡ ಕಂಡ ನಾಯಿಮರಿಗಳನ್ನೆಲ್ಲಾ ಹೊತ್ತೊಯ್ದು ಎತ್ತರದ ಮನೆ ಅಥವಾ ಮರದಿಂದ ಕೈ ಬೊಟ್ಟು ಕೊಂದು ಹಾಕಿವೆ. ಕೋತಿಗಳ ಕೃತ್ಯಕ್ಕೆ ಈಗಾಗಲೇ 80 ನಾಯಿಮರಿಗಳು ಬಲಿಯಾಗಿವೆ.
ಮುಜಲ್‍ಗಾವ್‍ನಲ್ಲಿ ಅಂದಾಜು 5000 ನಿವಾಸಿಗಳಿದ್ದಾರೆ. ಆದರೆ ಮಂಗಳ ದಾಳಿಯಿಂದಾಗಿ ಒಂದೂ ನಾಯಿಮರಿಗಳು ಇಲ್ಲದಂತಾಗಿದೆ. ಮಂಗಗಳ ಇಂಥ ರಾಕ್ಷಸೀ ಕೃತ್ಯದಿಂದ ಬೇಸತ್ತ ನಿವಾಸಿಗಳು ಅರಣ್ಯ ಇಲಾಖೆಯ ಮೊರೆ ಹೋಗಿದ್ದಾರೆ. ಇಲಾಖೆಯವರು ಬಹುತೇಕ ಕೋತಿಗಳನ್ನು ಸೆರೆ ಹಿಡಿದಿದ್ದಾರೆ. ಮಂಗಗಳು ಶಾಲೆಗೆ ಹೋಗುವ ಮಕ್ಕಳ ಮೇಲೂ ದಾಳಿಗೆ ಮೂಂದಾಗುತ್ತಿವೆ ಎಂದು ನಿವಾಸಿಗಳು ಆತಂಕಿತರಾಗಿದ್ದಾರೆ.
Comments are closed.