India

ಭವತಾರಿಣಿ ದರುಶನ ಪಡೆದ ಪ್ರಧಾನಿ

Pinterest LinkedIn Tumblr

mooo

ದಕ್ಷಿಣೇಶ್ವರ: ಪ್ರಧಾನಿ ನರೇಂದ್ರ ಮೋದಿ  ಭಾನುವಾರ ಕೋಲ್ಕತದ ಪ್ರಸಿದ್ಧ ದಕ್ಷಿಣೇಶ್ವರ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಇಂದು ಮುಂಜಾನೆ 7.77ಕ್ಕೆ ದಕ್ಷಿಣೇಶ್ವರ ದೇವಸ್ಥಾನಕ್ಕೆ ಆಗಮಿಸಿದ ಪ್ರಧಾನಿ ಕಾಳಿ ದೇವಿ ದರುಶನ ಪಡೆದು ಪುನೀತರಾದರು.
ಶ್ರೀ ರಾಮಕೃಷ್ಣ ಪರಮಹಂಸರ ಆರಾಧ್ಯ ದೈವವಾಗಿದ್ದ ಕಾಳಿ ದೇವಿಯ ಅಂಶವಾದ ದೇವಿ ಭವತಾರಿಣಿಗೆ ಮೋದಿ ಪುಷ್ಪಾರ್ಚನೆ ಸಲ್ಲಿಸಿದರು. ಪರಮಹಂಸರು ಇದೇ ದೇವಸ್ಥಾನದಲ್ಲಿ ವಾಸವಾಗಿದ್ದರೆಂದು ಹೇಳಲಾಗುತ್ತದೆ.

ದೇವಾಲಯದ ಟ್ರಸ್ಟಿ ಹಾಗೂ ಕಾರ್ಯದರ್ಶಿ ಕುಶಾಲ್ ಚೌಧರಿ ಪ್ರಧಾನಿಯವರನ್ನು ದೇವಸ್ಥಾನಕ್ಕೆ ಬರಮಾಡಿಕೊಂಡರು. ‘ರಾಷ್ಟ್ರವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಶಕ್ತಿ ನೀಡುವಂತೆ ಅವರು ತಾಯಿ ಕಾಳಿಯಲ್ಲಿ ಬೇಡಿಕೊಂಡರು’, ಎಂದು ಚೌಧರಿ ಹೇಳಿದ್ದಾರೆ.

ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಪ್ರಧಾನ ಮಂತ್ರಿಗಳ ಕಾರ್ಯಾಲಯವನ್ನು ಸಂಪರ್ಕಿಸುವಂತೆ ಅವರು ದೇವಾಲಯದ ಅಧಿಕಾರಿಗಳಿಗೆ ಸೂಚಿಸಿದರು. ದೇವಾಲಯದ ಜೀರ್ಣೋದ್ಧಾರ ಬಗ್ಗೆ ಪ್ರಧಾನಿ ವೈಯಕ್ತಿಕ ಆಸಕ್ತಿ ವ್ಯಕ್ತಪಡಿಸಿದರು ಎಂದು ಚೌಧರಿ ತಿಳಿಸಿದ್ದಾರೆ.

ದೇವಾಲಯದ ಪ್ರಾಂಗಣದಲ್ಲಿರುವ ರಾಮಕೃಷ್ಣರು ವಾಸವಿದ್ದ ಕೊಠಡಿಗೂ ಅವರು ಭೇಟಿ ನೀಡಿದರು.

ರಾಮಕೃಷ್ಣರ ಸಹಕಾರದೊಂದಿಗೆ ಕಾಳಿಯ ಭಕ್ತೆ ದಾನಿ ರಾಣಿ ರಾಶೋಮೋನಿ ಅವರು 1855ರಲ್ಲಿ ಈ ದೇವಾಲಯವನ್ನು ಕಟ್ಟಿಸಿದ್ದರು.

ದೇವಸ್ಥಾನದಲ್ಲಿ 25 ನಿಮಿಷ ಕಳೆದ ಪ್ರಧಾನಿ ಜತೆ ಬಿಜೆಪಿ ಸಂಸದ ಮತ್ತು ಕೇಂದ್ರ ಸಚಿವರಾದ ಬಾಬುಲ್ ಸುಪ್ರಿಯೋ ಪಕ್ಷದ  ರಾಜ್ಯಾಧ್ಯಕ್ಷ ರಾಹುಲ್ ಸಿನ್ಹಾ ಅವರು ಸಹ ಉಪಸ್ಥಿತರಿದ್ದರು.

ಕೋಲ್ಕತಾ ಬಳಿಯ ದಕ್ಷಿಣೇಶ್ವರ ಹೂಗ್ಲಿ ನದಿಯ ಪೂರ್ವ ದಡದಲ್ಲಿರುವ ದೇವಸ್ಥಾನ 19 ನೇ ಶತಮಾನದಲ್ಲಿ ಬದುಕಿದ್ದ ಧಾರ್ಮಿಕ ನೇತೃರಾದ ರಾಮಕೃಷ್ಣ ಪರಮಹಂಸರಿಂದ ಪ್ರಸಿದ್ಧಿಗೆ ಬಂದಿದೆ.

ಅವರು ರಾಮಕೃಷ್ಣ ಮಠ ಮತ್ತು ಮಿಷನ್ ಜಾಗತಿಕ ಪ್ರಧಾನ ಕಚೇರಿಯಾದ  ಬೇಲೂರು ಮಠಕ್ಕೂ ಭೇಟಿ ನೀಡಲಿದ್ದಾರೆ.

Write A Comment