
ಬಾಯಿಗೆ ರುಚಿ ಅನಿಸಿದ್ದನ್ನೆಲ್ಲ ಹಿಂದೆ ಮುಂದೆ ಯೋಚಿಸದೇ ತಿನ್ನುವ ಜನರಿದ್ದಾರೆ. ಅಂಥವರಿಗೆಲ್ಲ ಇಲ್ಲೊಂದು ಎಚ್ಚರಿಕೆ ಇದೆ. ಹಸಿ ಮೀನನ್ನು ತಿನ್ನುವ ಅಭ್ಯಾಸ ಮಾಡಿಕೊಂಡಿದ್ದ ಕ್ಯಾಲಿಫೋರ್ನಿಯಾದ ವ್ಯಕ್ತಿಯೊಬ್ಬರ ಹೊಟ್ಟೆಯಲ್ಲಿ ಲಾಡಿ ಹುಳ ಪತ್ತೆಯಾಗಿದೆ. ಅದು ಕೂಡ ಸಾಮಾನ್ಯ ಗಾತ್ರದಲ್ಲ. ಒಟ್ಟು 5.5 ಅಡಿ ಉದ್ದದ್ದು.
ಕೆನ್ನಿ ಬನ್Ø ಶೌಚಕ್ಕೆಂದು ಹೋದಾಗ ಅವರಿಗೆ ಅಸಾಧಾರಣ ಹೊಟ್ಟೆನೋವು ಕಾಣಿಸಿಕೊಂಡಿತು. ಅನಂತರ ಮಲ ವಿಸರ್ಜನೆಯಲ್ಲಿ ಹುಳು ಹೊರಬಂದಿದೆ. ಮೊದಲಿಗೆ ಅದು ಏನೆಂದು ಅವರಿಗೆ ತಿಳಿದಿಲ್ಲ. ಇವರು ಅದನ್ನು ನೆಲದ ಮೇಲೆ ಇಟ್ಟಾಗ ಅದು ಚಲಿಸಲು ಆರಂಭಿಸಿದೆ. ಆಗಲೇ ಇದು ಹುಳ ಎಂದು ಅವರಿಗೆ ತಿಳಿದಿದ್ದಂತೆ. ಇದನ್ನು ನೋಡಿ ಒಮ್ಮೆಗೆ ಅವರು ಗಾಬರಿಯಿಂದ ಕೂಗಿಕೊಂಡರಂತೆ. ಅಲ್ಲಿಂದ ನೇರವಾಗಿ ಆಸ್ಪತ್ರೆಗೆ ಬಂದಿದ್ದಾರೆ. ಇಷ್ಟು ದೊಡ್ಡ ಲಾಡಿ ಹುಳ ಇವರ ಹೊಟ್ಟೆಯಲ್ಲಿ ಬೆಳೆಯಲು ಕಾರಣವೇನಿರಬಹುದು ಎಂದು ವೈದ್ಯರು ತಪಾಸಣೆ ಮಾಡಿದ ಬಳಿಕ, ಆ ವ್ಯಕ್ತಿಗೆ ಹಸಿ ಮೀನಿನ ಖಾದ್ಯವನ್ನು ಸೇವಿಸುವ ಅಭ್ಯಾಸ ಹೆಚ್ಚಿತ್ತು ಎಂಬ ವಿಚಾರ ತಿಳಿದು ಬಂದಿತಂತೆ.
-ಉದಯವಾಣಿ
Comments are closed.