ಕರಾವಳಿ

ರಾಜ್ಯ ಮಟ್ಟದ ಪೊಲೀಸ್‌ ವಾರ್ಷಿಕ ಕ್ರೀಡಾಕೂಟದಲ್ಲಿ ಉಡುಪಿ ಜಿಲ್ಲಾ ಪೊಲೀಸರಿಗೆ ಹಲವು ಪ್ರಶಸ್ತಿ

Pinterest LinkedIn Tumblr

ಉಡುಪಿ: ಬೆಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಕರ್ನಾಟಕ ರಾಜ್ಯ ಪೊಲೀಸ್‌ ವಾರ್ಷಿಕ ಕ್ರೀಡಾಕೂಟ – 2022 ಇದರಲ್ಲಿ ಉಡುಪಿ ಜಿಲ್ಲೆಯಿಂದ ಹಾಗೂ ಪಶ್ವಿಮ ವಲಯದಿಂದ ಭಾಗವಹಿಸಿ ವಿವಿಧ ಸ್ಪರ್ಧೆಗಳಲ್ಲಿ ಸ್ಪರ್ಧಿಸಿದ್ದಾರೆ.

ಉಡುಪಿ ಜಿಲ್ಲೆಯಿಂದ ಸ್ಪರ್ಧಿಸಿದ ಸುಷ್ಮಾ ಭಂಡಾರಿ, ಪಿಎಸ್‌ಐ ಮಲ್ಪೆ ಇವರು ಜಾವಲಿನ್‌ ಪ್ರಥಮ, ಶಾಟ್‌ಪುಟ್‌ ದ್ವಿತೀಯ, ಪಿಸ್ತೂಲ್‌ ಶೂಟಿಂಗ್‌ ತೃತೀಯ ಮತ್ತು 100 ಮೀ. ಓಟದಲ್ಲಿ ತೃತೀಯ ಬಹುಮಾನ ಗಳಿಸಿದ್ದಸರೆ. ನಾಗಶ್ರೀ ಎಚ್‌.ಪಿ ಬ್ರಹ್ಮಾವರ ವೃತ್ತ ಕಛೇರಿ ಇವರು ಶಾಟ್‌ಪುಟ್‌ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಗಳಿಸಿರುತ್ತಾರೆ. 4 x 100 ಮೀ ರಿಲೇ ಸ್ಪರ್ಧೆಯಲ್ಲಿ ಉಡುಪಿ ತಂಡದ ಸದಸ್ಯರಾದ ಜಯ ಪಟಗಾರ್‌, ಪ್ರೀತಿ, ನಾಗರತ್ನ ಜೆ.ಡಿ. ನಾಗಶ್ರೀ ಎಚ್‌.ಪಿ ಇವರುಗಳು ತೃತೀಯ ಸ್ಥಾನ ಪಡೆದಿದ್ದಾರೆ. ವಾಲಿಬಾಲ್‌ ಸ್ಪರ್ಧೆಯಲ್ಲಿ ಪಶ್ಚಿಮ ವಲಯ ಮಂಗಳೂರು ತಂಡ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿರುತ್ತಾರೆ. ಈ ತಂಡದಲ್ಲಿ ಉಡುಪಿ ಜಿಲ್ಲೆಯಿಂದ ರಾಮು ಹೆಗಡೆ, ವಿಜಯ್‌ ಕುಮಾರ್‌, ಶರತ್‌ ಜೆ, ಕಾರ್ತಿಕ್‌ ಎಮ್‌ ರವರು ಭಾಗವಹಿಸಿದ್ದರು. ಸ್ಪರ್ಧೆಯಲ್ಲಿ ವಿಜೇತರಾದ ಸ್ಪರ್ದಾಳುಗಳಿಗೆ ಹಾಗೂ ಕ್ರೀಡಾಕೂಟದಲ್ಲಿ ಭಾಗವಹಿಸಿದ ಎಲ್ಲಾ ಅಧಿಕಾರಿ/ಸಿಬ್ಬಂದಿಯವರಿಗೆ ಉಡುಪಿ ಜಿಲ್ಲಾ ಪೊಲೀಸ್‌ ಅಧೀಕ್ಷಕ ಅಕ್ಷಯ್ ಎಂ ಹಾಕೆ ಅವರು ಅಭಿನಂದಿಸಿದ್ದಾರೆ.

Comments are closed.