ಕರಾವಳಿ

ಅಶ್ವತ್ಥ ಎಲೆಯಲ್ಲಿ‌ ಭಾವಚಿತ್ರ ಕಲೆ ಮೂಲಕ ಎಕ್ಸ್‌ಕ್ಲೂಸಿವ್‌ ವರ್ಲ್ಡ್ ರೆಕಾರ್ಡ್‌; ಮರ್ಣೆ ಕಲಾವಿದನಿಗೆ ತೆಂಡುಲ್ಕರ್ ಪ್ರಶಂಸೆ

Pinterest LinkedIn Tumblr

ಉಡುಪಿ: ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡುಲ್ಕರ್‌ ಅವರ ಭಾವಚಿತ್ರವನ್ನು ಅಶ್ವತ್ಥ ಎಲೆಯಲ್ಲಿ ಕೇವಲ 7 ನಿಮಿಷದಲ್ಲಿ ಬಿಡಿಸುವ ಮೂಲಕ ಉಡುಪಿ ಜಿಲ್ಲೆಯ ಮಣಿಪುರ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಮರ್ಣೆಯ ಯುವ ಕಲಾವಿದ ಮಹೇಶ್‌ ಮರ್ಣೆ ಎಕ್ಸ್‌ಕ್ಲೂಸಿವ್‌ ವರ್ಲ್ಡ್ ರೆಕಾರ್ಡ್‌ನಲ್ಲಿ ಸ್ಥಾನ ಪಡೆದಿದ್ದರು.

ಅವರು ಈ ಭಾವಚಿತ್ರವನ್ನು ತೆಂಡುಲ್ಕರ್‌ಗೆ ಕಳುಹಿಸಿದ್ದರು. ಈ ಕಲಾಸಾಧನೆಯನ್ನು ಕಂಡು ಸಚಿನ್‌ ತೆಂಡುಲ್ಕರ್‌ ಸಂತಸಗೊಂಡು, ಶುಭಾಶಯ ಪತ್ರವೊಂದನ್ನು ಕಳುಹಿಸಿದ್ದಾರೆ. ಸಚಿನ್ ತೆಂಡೂಲ್ಕರ್ ಅವರು ಪ್ರಶಂಸನಾ ಪತ್ರದ ಜೊತೆಗೆ ತಮ್ಮ ಅಚ್ಚುಮೆಚ್ಚಿನ ಎರಡು ಫೊಟೋಗಳನ್ನು ಮಹೇಶ್ ಅವರಿಗೆ ಕಳುಹಿಸಿಕೊಟ್ಟಿದ್ದಾರೆ.

 

 

Comments are closed.