ಅಂತರಾಷ್ಟ್ರೀಯ

ಹ್ಯಾಟ್ರಿಕ್ ವಿಕೆಟ್ ಪಡೆದ ಹರ್ಷಲ್ ಪಾಟೇಲ್-ಮುಂಬೈ ವಿರುದ್ಧ ಆರ್.ಸಿ.ಬಿ.ಗೆ 54 ರನ್ ಗಳ ಭರ್ಜರಿ ಗೆಲುವು

Pinterest LinkedIn Tumblr

ದುಬೈ: ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಐಪಿಎಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ ಆರ್.ಸಿ.ಬಿ 54 ರನ್ ಗಳ ಭರ್ಜರಿ ಗೆಲುವು ದಾಖಲಿಸಿಕೊಂಡಿದೆ.

ಇಲ್ಲಿನ ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಐಪಿಎಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಗೆಲ್ಲಲು 166 ರನ್ ಗಳ ಗುರಿ ನೀಡಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಆರ್ ಸಿಬಿ 20 ಓವರ್ ಗಳಲ್ಲಿ 6 ವಿಕೆಟ್ ಗಳ ನಷ್ಟಕ್ಕೆ 165 ರನ್ ಗಳಿಸಿತು. ಬೆಂಗಳೂರು ತಂಡದ ಪರ ವಿರಾಟ್ ಕೊಹ್ಲಿ 51, ಭರತ್ 32, ಮ್ಯಾಕ್ಸ್ ವೆಲ್ 56 ರನ್ ಗಳಿಸಿದರು.

ಮುಂಬೈ ತಂಡ ಬ್ಯಾಟಿಂಗ್ ನಡೆಸಿದ ಉತ್ತಮ ಆರಂಭ ಪಡೆದುಕೊಂಡಿತು. ರೋಹಿತ್ 43, ಡಿಕಾಕ್ 24 ರನ್ ಸಿಡಿಸಿದರು. ಉಳಿದಂತೆ ಯಾವೊಬ್ಬ ಆಟಗಾರ ಉತ್ತಮ ಪ್ರದರ್ಶನ ನೀಡಲಿಲ್ಲ. ಆರ್ ಸಿಬಿ ಪರ ಹರ್ಷಲ್ ಹ್ಯಾಟ್ರಿಕ್ ಸಹಿತ 4 ವಿಕೆಟ್ ಪಡೆದರು. ಚಾಹಲ್ 3, ಮ್ಯಾಕ್ಸ್ ವೆಲ್ 2 ವಿಕೆಟ್ ಪಡೆದರು.

 

Comments are closed.