ಅಂತರಾಷ್ಟ್ರೀಯ

ಪ್ಯಾರಾಲಿಂಪಿಕ್ಸ್: ಭಾರತದ ಶೂಟರ್’ಗಳಿಂದ ಮತ್ತೊಂದು ಇತಿಹಾಸ; ಮನೀಶ್’ಗೆ ಚಿನ್ನ, ಸಿಂಗರಾಜ್’ಗೆ ಬೆಳ್ಳಿ ಪದಕ

Pinterest LinkedIn Tumblr

ಟೋಕಿಯೊ: ಟೋಕಿಯೊದಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತ ಐತಿಹಾಸಿಕ ಸಾಧನೆ ಮಾಡಿದ್ದು, ಶೂಟಿಂಗ್ ನಲ್ಲಿ ಚಿನ್ನ ಮತ್ತು ಬೆಳ್ಳಿ ಪದಕಗಳನ್ನು ಗೆದ್ದಿದೆ.

ಶೂಟಿಂಗ್ ಪಿ4 50 ಮೀಟರ್ ಪಿಸ್ತೂಲ್ ಎಸ್ ಹೆಚ್ 1 ವಿಭಾಗದಲ್ಲಿ ಭಾರತದ ಮನೀಶ್ ನರ್ವಾಲ್ ಚಿನ್ನದ ಪದಕ ಪಡೆದಿದ್ದು, ಸಿಂಗರಾಜ್ 2ನೇ ಸ್ಥಾನ ಪಡೆದು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.

ಭಾರತದ ಮನೀಶ್ ನರ್ವಾಲ್ 218.2 ಅಂಕಗಳನ್ನು ಗಳಿಸಿ ಮೊದಲ ಸ್ಥಾನ ಪಡೆದಿದ್ದು, ಇದು ಭಾರತದ ಪರ ಗರಿಷ್ಠ ದಾಖಲೆ ಕೂಡ ಆಗಿದೆ. ಅದೇ ಪಂದ್ಯದಲ್ಲಿ ಭಾರತದ ಮತ್ತೋರ್ವ ಶೂಟರ್ ಅಧನ ಸಿಂಗರಾಜ್ ಅವರು 216.7 ಅಂಕಗಳೊಂದಿಗೆ 2ನೇ ಸ್ಥಾನಕ್ಕೇರಿ ಬೆಳ್ಳಿ ಪದಕಕ್ಕೆ ಮುತ್ತಿಟ್ಟಿದ್ದಾರೆ. ಆ ಮೂಲಕ ಒಂದೇ ಪೈನಲ್ ಪಂದ್ಯದಲ್ಲಿ ಉಭಯ ಆಟಗಾರರು ಚಿನ್ನ ಮತ್ತು ಬೆಳ್ಳಿ ಪದಕ ಗೆದ್ದ ಸಾಧನೆ ಮಾಡಿದ್ದಾರೆ.

ಈ ಪದಕಗಳ ಮೂಲಕ ಕ್ರೀಡಾಕೂಟದಲ್ಲಿ ಭಾರತದ ಪದಕಗಳ ಸಂಖ್ಯೆ 15ಕ್ಕೆ ಏರಿಕೆಯಾಗಿದ್ದು, ಈ ಪೈಕಿ ಚಿನ್ನ 3, ಬೆಳ್ಳಿ 7 ಮತ್ತು 5 ಕಂಚಿನ ಪದಕಗಳು ಸೇರಿವೆ.

Comments are closed.