ಕ್ರೀಡೆ

ಸೂಪರ್ ಓವರ್‌ನಲ್ಲಿ ಸನ್‌ರೈಸರ್ಸ್‌ ಹೈದರಾಬಾದ್ ತಂಡವನ್ನು ಸೋಲಿಸಿದ ಡೆಲ್ಲಿ ಕ್ಯಾಪಿಟಲ್ಸ್

Pinterest LinkedIn Tumblr

ಚೆನ್ನೈ: ತೀವ್ರ ಜಿದ್ದಾಜಿದ್ದಿಗೆ ಸಾಕ್ಷಿಯಾದ ಹಣಾಹಣಿಯಲ್ಲಿ ಸೂಪರ್ ಓವರ್‌ನಲ್ಲಿ ಮೇಲುಗೈ ಸಾಧಿಸಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಐಪಿಎಲ್-14ರ ತನ್ನ 6ನೇ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್ ತಂಡವನ್ನು ಮಣಿಸಿತು. ನಿಗದಿತ ಓವರ್‌ನಲ್ಲಿ ಉಭಯ ತಂಡಗಳು ಸಮಬಲ ಸಾಧಿಸಿದ ಹಿನ್ನೆಲೆಯಲ್ಲಿ ಫಲಿತಾಂಶ ನಿರ್ಣಾಯಕ್ಕಾಗಿ ನಡೆದ ಸೂಪರ್ ಓವರ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಸನ್‌ರೈಸರ್ ನೀಡಿದ 8 ರನ್ ಗುರಿಯನ್ನು ಡೆಲ್ಲಿ ತಂಡ ಬೆನ್ನಟ್ಟಿತು.

ಇದಕ್ಕೂ ಮೊದಲು ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ತಂಡ, ಪೃಥ್ವಿ ಷಾ (53ರನ್, 39 ಎಸೆತ, 7 ಬೌಂಡರಿ, 1 ಸಿಕ್ಸರ್) ಅರ್ಧಶತಕದಾಟದ ನೆರವಿನಿಂದ 4 ವಿಕೆಟ್‌ಗೆ 159 ರನ್‌ಗಳಿಸಿತು. ಕೇನ್ ವಿಲಿಯಮ್ಸನ್ (66*ರನ್, 51 ಎಸೆತ, 8 ಬೌಂಡರಿ) ಏಕಾಂಗಿ ನಿರ್ವಹಣೆ ನಡುವೆಯೂ 7 ವಿಕೆಟ್‌ಗೆ 159 ರನ್‌ಗಳಿಸಿ ಸಮಬಲ ಸಾಧಿಸಿತು.

ಡೆಲ್ಲಿ ಕ್ಯಾಪಿಟಲ್ಸ್: 4 ವಿಕೆಟ್‌ಗೆ 159 (ಪೃಥ್ವಿ ಷಾ 53, ಶಿಖರ್ ಧವನ್ 28, ರಿಷಭ್ ಪಂತ್ 37, ಸ್ಟೀವನ್ ಸ್ಮಿತ್ 34*, ಸಿದ್ದಾರ್ಥ್ ಕೌಲ್ 31ಕ್ಕ2, ರಶೀದ್ ಖಾನ್ 31ಕ್ಕೆ 1), ಸನ್‌ರೈಸರ್ಸ್‌ ಹೈದರಾಬಾದ್: 7 ವಿಕೆಟ್‌ಗೆ 159 (ಕೇನ್ ವಿಲಿಯಮ್ಸನ್ 66*, ಜಾನಿ ಬೇರ್‌ಸ್ಟೋ 38, ಜೆ.ಸುಚಿತ್ 14*, ಅವೇಶ್ ಖಾನ್ 34ಕ್ಕೆ 3, ಅಕ್ಷರ್ ಪಟೇಲ್ 26ಕ್ಕೆ 2).

Comments are closed.