ಕ್ರೀಡೆ

ಭಾರತೀಯ ಮೂಲದ ಯುವಕನಿಂದ ಆಸೀಸ್ ಯುವತಿಗೆ ಲವ್ ಪ್ರಪೋಸ್; ಮುಂದೇನಾಯಿತು?

Pinterest LinkedIn Tumblr


ಸಿಡ್ನಿ: ಭಾರತೀಯ ಮೂಲದ ಯುವಕನೊಬ್ಬ, ಆಸ್ಟ್ರೇಲಿಯಾ ಮೂಲದ ಯುವತಿಗೆ ಪ್ರೇಮ ನಿವೇದನೆ ಮಾಡಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.

ಭಾರತ ಆಸೀಸ್ ಎರಡನೇ ಏಕದಿನ ಪಂದ್ಯದ ವೇಳೆ ಪ್ರೇಕ್ಷಕ ಗ್ಯಾಲರಿಯಲ್ಲಿ ಕುಳಿತಿದ್ದ ಯುವತಿಯ ಬಳಿ ತೆರಳಿದ ಭಾರತೀಯ ಯುವಕ, ಮಂಡಿಯೂರಿ ಉಂಗುರ ಮುಂದಿಟ್ಟು ಪ್ರಪೋಸ್ ಮಾಡಿದ್ದಾನೆ. ಯುವತಿ ತಕ್ಷಣ ಒಪ್ಪಿಗೆ ನೀಡಿದ್ದು, ಪರಸ್ಪರ ಚುಂಬಿಸುವ ಮೂಲಕ ಪ್ರೀತಿಯ ಪಯಣ ಆರಂಭಿಸಿದ್ದಾರೆ. ಈ ಮಧುರ ಕ್ಷಣ ದೊಡ್ಡ ಪರದೆಯಲ್ಲಿ ಕಾಣಿಸಿಕೊಂಡಿದ್ದು ನೂರಾರು ಮಂದಿ ಕ್ರೀಡಾಭಿಮಾನಿಗಳು ನವಜೋಡಿಗೆ ಶುಭಹಾರೈಸಿದ್ದಾರೆ.

ಈ ವೇಳೆ ಆಸ್ಟ್ರೇಲಿಯಾ ಆಟಗಾರ ಮ್ಯಾಕ್ಸ್ ವೆಲ್ ಕೂಡ ಸುಮಧುರ ಕ್ಷಣವನ್ನು ವೀಕ್ಷಿಸಿ ಚಪ್ಪಾಳೆಯ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.

ಎರಡನೇ ಏಕದಿನ ಪಂದ್ಯದಲ್ಲಿ ಆಸೀಸ್ ನೀಡಿದ 390 ರನ್ ಗಳ ಬೃಹತ್ ಮೊತ್ತದ ಗುರಿಯನ್ನು ತಲುಪಲಾಗದೆ ಭಾರತ 338 ರನ್ ಗಳಿಸಿ ಸೋಲಿಗೆ ಶರಣಾಯಿತು. ಆ ಮೂಲಕ 3 ಏಕದಿನ ಪಂದ್ಯಗಳಲ್ಲಿ 2ರಲ್ಲಿ ಸೋತು ಭಾರತ ಸರಣಿಯನ್ನು ಕೈಚೆಲ್ಲಿದೆ.

ಇಂದಿನ ಪಂದ್ಯದಲ್ಲಿ ನಾಯಕ ಕೊಹ್ಲಿ ಕೇವಲ 11 ರನ್ ಗಳ ಅಂತರದಿಂದ 71 ನೇ ಅಂತರಾಷ್ಟ್ರೀಯ ಶತಕವನ್ನು ಸಿಡಿಸುವಲ್ಲಿ ವಿಫಲರಾದರು.

Comments are closed.