ಕ್ರೀಡೆ

22 ಸಾವಿರ ರನ್ ಪೂರೈಸಿದ ವಿಶ್ವದ 8ನೇ ಮತ್ತು 3ನೇ ಭಾರತೀಯ ಆಟಗಾರ!: ಸರಣಿ ಸೋತರೂ, ಹೊಸ ದಾಖಲೆ ಬರೆದ ಕೊಹ್ಲಿ

Pinterest LinkedIn Tumblr


ನವದೆಹಲಿ: ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯದಲ್ಲಿ ಅತೀ ವೇಗವಾಗಿ 22,000 ರನ್ ಪೂರೈಸುವ ಮೂಲಕ ಹೊಸದೊಂದು ದಾಖಲೆ ಬರೆದಿದ್ದಾರೆ.

ಭಾನುವಾರ ನಡೆದ ಭಾರತ-ಆಸ್ಟೇಲಿಯಾ ನಡುವಿನ ಎರಡನೇ ಏಕದಿನ ಪಂದ್ಯಾಟದಲ್ಲಿ, 89 ರನ್ ಸಿಡಿಸಿದ ನಾಯಕ ಕೊಹ್ಲಿ, ಆ ಮೂಲಕ ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯದಲ್ಲಿ 22,000 ಸಾವಿರ ರನ್ ಪೂರೈಸಿದ ಸಾಧನೆ ಮಾಡಿದರು. ಈ ಸಾಧನೆ ಮಾಡಿದ ವಿಶ್ವದ 8ನೇ ಹಾಗೂ 3ನೇ ಭಾರತೀಯ ಆಟಗಾರ ಎಂಬ ಕೀರ್ತಿಗೂ ಭಾಜನರಾಗಿದ್ದಾರೆ.

ಕೊಹ್ಲಿ ಒಟ್ಟು 418 ಪಂದ್ಯಗಳಲ್ಲಿ 22,011 ರನ್ ಗಳನ್ನು ಬಾರಿಸಿದ್ದಾರೆ. ಈ ಮೊದಲು ಸಚಿನ್ ತೆಂಡೂಲ್ಕರ್ ಮತ್ತು ರಾಹುಲ್ ದ್ರಾವಿಡ್ ಈ ಸಾಧನೆ ಮಾಡಿದ್ದರು.

ಸಚಿನ್ ತೆಂಡೂಲ್ಕರ್ ಒಟ್ಟು 664 ಪಂದ್ಯಗಳಲ್ಲಿ 34,357 ರನ್ ಗಳಿಸುವ ಮೂಲಕ ಮೊದಲ ಸ್ಥಾನದಲ್ಲಿದ್ದಾರೆ. ರಾಹುಲ್ ದ್ರಾವಿಡ್ ಒಟ್ಟು 509 ಪಂದ್ಯಗಳಲ್ಲಿ 24,208 ರನ್ ಗಳನ್ನು ಬಾರಿಸಿ ಈ ಸಾಧನೆಗೈದಿದ್ದರು.

Comments are closed.