ಕ್ರೀಡೆ

ಫುಟ್‍ಬಾಲ್ ದಂತಕಥೆ ಡಿಯಾಗೋ ಮರಡೋನಾ ಇನ್ನಿಲ್ಲ !

Pinterest LinkedIn Tumblr

ಬ್ಯೂನಸ್ ಐರಿಸ್: ಅರ್ಜೆಂಟೀನಾದ ಫುಟ್‍ಬಾಲ್ ದಂತಕಥೆ ಡಿಯಾಗೋ ಮರಡೋನಾ ಅವರು ಇಂದು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಪುಟ್ಬಾಲ್​ನ ಸರ್ವಕಾಲಿಕ ಶ್ರೇಷ್ಟ ಆಟಗಾರ ಎಂದು ಗುರುತಿಸಿಕೊಂಡಿದ್ದ ಮರಡೋನಾ ಇಂದಿಗೂ ಅನೇಕರಿಗೆ ಸ್ಫೂರ್ತಿ. 1986ರಲ್ಲಿ ಅರ್ಜೆಂಟಿನಾಗೆ ವಿಶ್ವಕಪ್​ ಗೆದ್ದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ ಈ ಆಟಗಾರ ಇಂದು ಕೊನೆ ಉಸಿರೆಳೆದಿರುವುದಾಗಿ ಕುಟುಂಬದ ಮೂಲ ದೃಢಪಡಿಸಿದೆ. ಇತ್ತೀಚೆಗೆ ಇವರು ಮೆದುಳಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಅವರ ಮಿದುಳಿನಲ್ಲಿ ರಕ್ತ ಹೆಪ್ಪುಗಟ್ಟಿದ ಪರಿಣಾಮ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಪುಟ್ಬಾಲ್​ ಹೊರತಾಗಿ ಮಾದಕ ಚಟದಿಂದಾಗಿ ಕೂಡ ಇವರ ವೃತ್ತಿ ಜೀವನ ವಿವಾದಕ್ಕೆ ಗುರಿಯಾಗಿತ್ತು.

ಅವರ ಸಾವಿನ ಕುರಿತಾಗಿ ಅರ್ಜೆಂಟಿನಾ ಸುದ್ದಿವಾಹಿನಿಗಳು ವರದಿ ಮಾಡಿದೆ. ಅವರ ಸಾವು ಕೇವಲ ದೇಶಕ್ಕೆ ಮಾತ್ರವಲ್ಲ. ಇಡೀ ವಿಶ್ವದ ಕ್ರೀಡಾ ಪ್ರೇಮಿಗಳಿಗೆ ನೋವುಂಟು ಮಾಡಲಿದೆ ಎಂದಿದ್ದಾರೆ.

ಹ್ಯಾಂಡ್​ ಆಫ್​ ಗಾಡ್​ ಎಂದೇ ಖ್ಯಾತಿ ಗಳಿಸಿದ ಈತ, ಪುಟ್ಬಾಲ್​ ವಿಶ್ವಕಪ್​ನಲ್ಲಿ ಇಂಗ್ಲೆಡ್​ ವಿರುದ್ಧ ಗಳಿಸಿದ ಗೋಲ್​ ಇಂದಿಗೂ ದಾಖಲೆ ಪುಟ ಸೇರಿದೆ.

ಲೀಗ್‌ಗಳಲ್ಲೂ ಯಶಸ್ಸು ಸಾಧಿಸಿರುವ ಮರಡೋನ ಇಟಲಿಯ ಕ್ಲಬ್ ನಪೋಲಿ ಪರ 1987 ಹಾಗೂ 1990ರಲ್ಲಿ ಸೀರಿ ಎ ಪ್ರಶಸ್ತಿಯನ್ನು ಜಯಿಸಿದ್ದರು. 1987 ರಲ್ಲಿ ಇಟಾಲಿಯನ್ ಕಪ್ ಹಾಗೂ 1991ರಲ್ಲಿ ಯುಇಎಫ್‌ಎ ಕಪ್‌ನ್ನು ಗೆದ್ದಿದ್ದರು. ಈ ಅವಧಿಯಲ್ಲಿ ಅವರು ಉದ್ದೀಪನ ಮದ್ದು ಸೇವಿಸಿ ಸಿಕ್ಕಿಬಿದ್ದಿದ್ದರು. 1991ರಲ್ಲಿ ಅವರು ಕ್ಲಬ್‌ನ್ನು ತೊರೆದಿದ್ದರು. ಡ್ರಗ್ ನಿಯಮ ಉಲ್ಲಂಘಿಸಿರುವುದಕ್ಕೆ 15 ತಿಂಗಳ ಕಾಲ ನಿಷೇಧ ಎದುರಿಸಿದ್ದರು.

1994ರಲ್ಲಿ ಡ್ರಗ್ಸ್ ಪರೀಕ್ಷೆಯಲ್ಲಿ ವಿಫಲವಾದ ಬಳಿಕ ಮರಡೋನ ಅವರು ವಿಶ್ವಕಪ್‌ನಿಂದ ಹೊರಗುಳಿದಿದ್ದರು. 1997ರಲ್ಲಿ ಫುಟ್ಬಾಲ್‌ನಿಂದ ನಿವೃತ್ತಿಯಾದರು.

1999 ಹಾಗೂ 2000ರಲ್ಲಿ ಹೃದಯದ ಸಮಸ್ಯೆಗಳಿಗಾಗಿ ಆಸ್ಪತ್ರೆಗೆ ಸೇರಿದ್ದರು. ಎರಡನೇ ಬಾರಿ ಅವರಿಗೆ ಕೃತಕ ಉಸಿರಾಟದ ವ್ಯವಸ್ಥೆ ಮಾಡಲಾಗಿತ್ತು. 2004ರಲ್ಲಿ ಅವರು ತೀವ್ರ ಹೃದಯಾಘಾತಕ್ಕೆ ಒಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು.

ದೇಹದ ತೂಕವನ್ನು ನಿಯಂತ್ರಿಸಲು ಎರಡು ಬಾರಿ ಗ್ಯಾಸ್ಟ್ರಿಕ್ ಬೈಪಾಸ್‌ಗೆ ಒಳಗಾಗಿದ್ದರು. ಜನವರಿಯಲ್ಲಿ ಹೊಟ್ಟೆಯೊಳಗೆ ರಕ್ತಸ್ರಾವಕ್ಕಾಗಿ ಚಿಕಿತ್ಸೆ ಪಡೆದಿದ್ದರು. ಜುಲೈನಲ್ಲಿ ಮಂಡಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಮೂರು ವಾರಗಳ ಹಿಂದೆ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿದ ಕಾರಣ ಆಸ್ಪತ್ರೆಗೆ ದಾಖಲಾಗಿ ಸರ್ಜರಿಗೆ ಒಳಗಾಗಿದ್ದರು.

Comments are closed.