ಕ್ರೀಡೆ

ಗರ್ಭಿಣಿ ಪತ್ನಿ ಅನುಷ್ಕಾಗೆ ಮೈದಾನದಿಂದಲೇ ಊಟ ಆಯಿತಾ ಎಂದು ಕೇಳಿದ ಕೊಹ್ಲಿ ವೀಡಿಯೋ ವೈರಲ್!

Pinterest LinkedIn Tumblr


ಅಬುಧಾಬಿ: ಚೆನ್ನೈ ವಿರುದ್ಧದ ಪಂದ್ಯದ ವೇಳೆ ಮೈದಾನದಲ್ಲಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕೊಹ್ಲಿ ಅಲ್ಲಿಂದಲೇ ಗರ್ಭಿಣಿ ಪತ್ನಿ ಅನುಷ್ಕಾ ಕುರಿತು ಕಾಳಜಿ ಮಾಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕೊರೋನಾ ಹಿನ್ನೆಲೆಯಲ್ಲಿ ಐಪಿಎಲ್ 13ನೇ ಆವೃತ್ತಿ ಯುಎಇನಲ್ಲಿ ನಡೆಯುತ್ತಿದೆ. ಜೈವಿಕ ಸುರಕ್ಷಿತ ವಾತಾವರಣದಲ್ಲಿ ಬಿಸಿಸಿಐ ಟೂರ್ನಿಯನ್ನು ನಡೆಸುತ್ತಿದೆ. ಇನ್ನು ಭಾನುವಾರ ಚೆನ್ನೈ ಮತ್ತು ಬೆಂಗಳೂರು ತಂಡದ ನಡುವಿನ ಪಂದ್ಯದ ವೇಳೆ ಅನುಷ್ಕಾ ಶರ್ಮಾ ತಂಡವನ್ನು ಹುರಿದುಂಬಿಸಲು ವಿಶೇಷ ಗ್ಯಾಲರಿಗೆ ಬಂದಿದ್ದರು. ಈ ವೇಳೆ ಪತ್ನಿಯನ್ನು ಕಂಡ ಕೊಹ್ಲಿ ಅಲ್ಲಿಂದಲೇ ಊಟ ಮಾಡಿದಾ ಎಂದು ಪ್ರಶ್ನಿಸಿದ್ದಾರೆ.

ಇದಕ್ಕೆ ಅನುಷ್ಕಾ ಶರ್ಮಾ ನಗುಮುಖದೊಂದಿಗೆ ಆಯ್ತು ಎಂದು ಹೇಳಿದ್ದಾರೆ. ಈ ಮಾತನ್ನು ಕೇಳಿ ಕೊಹ್ಲಿ ಸಂಭ್ರಮಿಸಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಗ್ರೋ ಗ್ರೀನ್ ಪ್ರಯುಕ್ತ ಹಸಿರು ಜೆರ್ಸಿ ತೊಟ್ಟು ಕಣಕ್ಕಿಳಿದಿದ್ದ ಆರ್ ಸಿಬಿ ತಂಡ ಚೆನ್ನೈ ವಿರುದ್ಧ ಸೋಲು ಕಂಡಿತ್ತು.

Comments are closed.