ಕ್ರೀಡೆ

ಆರ್‌ಸಿಬಿಯ ಸ್ಪೋಟಕ ಬ್ಯಾಟ್ಸ್ ಮನ್ ಡಿವಿಲಿಯರ್ಸ್ ಭಾರಿಸಿದ ಭರ್ಜರಿ ಸಿಕ್ಸರ್ ಬಿದ್ದದ್ದು ಎಲ್ಲಿಗೆ ಗೊತ್ತೇ…? ಈ ವೀಡಿಯೊ ನೋಡಿ…

Pinterest LinkedIn Tumblr

ಶಾರ್ಜಾ: ಐಪಿಎಲ್ 13ನೇ ಆವೃತ್ತಿಯಲ್ಲಿ ಸ್ಫೋಟಕ ಬ್ಯಾಟ್ಸ್ ಮನ್ ಎಬಿ ಡಿವಿಲಿಯರ್ಸ್ ಭರ್ಜರಿ ಬ್ಯಾಟಿಂಗ್ … ಇನ್ನು ನಿನ್ನೆ ನಡೆದ ಪಂದ್ಯದಲ್ಲಿ ಅದ್ಭುತ ಬ್ಯಾಟಿಂಗ್ ಮಾಡಿದ ಡಿವಿಲಿಯರ್ಸ್ ಸಿಕ್ಸರ್ ಗಳ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದರು.

https://twitter.com/i/status/1315710012409491456

ಇನ್ನು ಡಿವಿಲಿಯರ್ಸ್ ಸಿಡಿಸಿದ ಚೆಂಡು ಮೈದಾನದ ಹೊರಗೆ ರಸ್ತೆಯಲ್ಲಿ ಸಾಗುತ್ತಿದ್ದ ಕಾರಿನ ಗಾಜನ್ನು ಪುಡಿ ಪುಡಿ ಮಾಡಿದೆ. ಮತ್ತೊಂದು ಚೆಂಡು ಅಲ್ಲಿನ ಬಾಲಕನೋರ್ವನಿಗೆ ಸಿಕ್ಕಿದ್ದು ಅದನ್ನು ಕೈಯಲ್ಲಿ ಹಿಡಿದು ಸಂಭ್ರಮಿಸಿದ್ದಾನೆ.

https://twitter.com/i/status/1315686233209794560

ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಡಿವಿಲಿಯರ್ಸ್ 33 ಎಸೆತಗಳಲ್ಲಿ 73 ರನ್ ಪೇರಿಸಿದ್ದರು. ಇನ್ನು ಎಬಿಡಿ ಆರು ಸಿಕ್ಸರ್ ಬಾರಿಸಿದ್ದರು. ಇದರಲ್ಲಿ ಮೂರು ಸಿಕ್ಸ್ ಗಳು ಮೈದಾನದ ಹೊರಗೆ ಹೋಗಿತ್ತು.

ಐಪಿಎಲ್ 28ನೇ ಪಂದ್ಯದಲ್ಲಿ ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ನಡುವಿನ ಪಂದ್ಯದಲ್ಲಿ ಕೊಹ್ಲಿ ಪಡೆ 82 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ.

Comments are closed.