ಕ್ರೀಡೆ

ಉಲ್ಟಾ ಬ್ಯಾಟ್​ನಲ್ಲಿ ಸಿಕ್ಸ್​ ಬಾರಿಸಿದ ಕೊಹ್ಲಿ

Pinterest LinkedIn Tumblr


ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ನಾಯಕ ವಿರಾಟ್​ ಕೊಹ್ಲಿ ನಿನ್ನೆ ಚೆನ್ನೈ ಸೂಪರ್​ ಕಿಂಗ್ಸ್​ ವಿರುದ್ಧ . ನಿನ್ನೆಯ ಪಂದ್ಯದಲ್ಲಿ ಕೊಹ್ಲಿ ಹೊಡೆದ ಚಿತ್ರ-ವಿಚಿತ್ರ ಶಾಟ್​ಗಳನ್ನು ನೋಡಿ ಚೆನ್ನೈ ಬೌಲರ್​ಗಳು ದಂಗಾಗಿದ್ದಾರೆ.

ಆರ್​ಸಿಬಿ ಆರಂಭದಲ್ಲೇ ಆ್ಯರೋನ್ ಫಿಂಚ್ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ದೀಪಕ್ ಚಹಾರ್ ಬೌಲಿಂಗ್​ನಲ್ಲಿ ಫಿಂಚ್(2) ಬೌಲ್ಡ್​ ಆದರು. ಆದರೆ, ಎರಡನೇ ವಿಕೆಟ್​ಗೆ ನಾಯಕ ವಿರಾಟ್ ಕೊಹ್ಲಿ ಹಾಗೂ ದೇವದತ್ ಪಡಿಕ್ಕಲ್ ಉತ್ತಮ ಆಟ ಪ್ರದರ್ಶಿಸಿದರು. ಈ ಜೋಡಿ ಅರ್ಧಶತಕದ ಜೊತೆಯಾಟ ಆಡಿತು. ಆದರೆ, 11ನೇ ಓವರ್​ನಲ್ಲಿ ಪಡಿಕ್ಕಲ್ 34 ಎಸೆತಗಳಲ್ಲಿ 33 ರನ್ ಗಳಿಸಿದ್ದಾಗ ಔಟ್ ಆಗಿ ಶಾಕ್ ನೀಡಿದರು. ಬಂದ ಬೆನ್ನಲ್ಲೇ ಎಬಿ ಡಿವಿಲಿಯರ್ಸ್​ ಶೂನ್ಯಕ್ಕೆ ಔಟ್ ಆಗಿದ್ದು ತಂಡಕ್ಕೆ ದೊಡ್ಡ ಹೊಡೆತ ಬಿದ್ದಿತು. ವಾಷಿಂಗ್ಟನ್ ಸುಂದರ್ 10 ರನ್​ಗೆ ಬ್ಯಾಟ್ ಕೆಳಗಿಟ್ಟರು. ಈ ನಡುವೆ ವಿರಾಟ್ ಕೊಹ್ಲಿ ತಂಡದ ರನ್ ಗತಿಯನ್ನ ಏರಿಸಲು ಶ್ರಮಿಸಿದರು. ಕೊನೆಯ ಹಂತದಲ್ಲಿ ಶಿವಂ ದುಬೆ ಜೊತೆಯಾಗಿ ವಿರಾಟ ಪ್ರದರ್ಶನ ತೋರಿದ ಕೊಹ್ಲಿ ಅರ್ಧಶತಕ ಸಿಡಿಸಿ ತಂಡದ ಮೊತ್ತವನ್ನು 150ರ ಗಡಿ ದಾಟಿಸಿದರು.

ಈ ಮಧ್ಯೆ ಕೊಹ್ಲಿ ಹೊಡೆದ ಒಂದು ಶಾಟ್​ ಎಲ್ಲರ ಗಮನ ಸೆಳೆದಿದೆ. ಅದು 14ನೇ ಓವರ್​ನ ಮೊದಲ ಬಾಲ್​. ಸ್ಯಾಮ್ ಕರನ್ ಬೌಲಿಂಗ್​ಗೆ ಇಳಿದಿದ್ದರು. ಕರನ್​ ಹಾಕಿದ ಬೌಲ್​ ಅನ್ನು ಎಡಭಾಗಕ್ಕೆ ಅಟ್ಟಲು ಕೊಹ್ಲಿ ಬ್ಯಾಟ್​ ಬೀಸಿದ್ದರು. ಆದರೆ ಬೌಲ್​ ಬ್ಯಾಟ್​ನ ಮತ್ತೊಂದು ಭಾಗಕ್ಕೆ ತಾಗಿ ಹಿಂಭಾಗದಲ್ಲಿ ಸಿಕ್ಸ್​ ಹೋಗಿದೆ. ಈ ವಿಡಿಯೋ ನೋಡಿದವರು ಕೊಹ್ಲಿ ಹೊಸ ಶಾಟ್​ ಒಂದನ್ನು ಕಂಡು ಹಿಡಿದಿದ್ದಾರೆ ಎಂದು ಅಚ್ಚರಿ ಹೊರ ಹಾಕಿದ್ದಾರೆ.

Comments are closed.