ಕ್ರೀಡೆ

ಧೋನಿ ಭಾರಿಸಿದ ಸಿಕ್ಸ್ ಶಾರ್ಜಾ ಸ್ಟೇಡಿಯಂನಿಂದ ಹೊರಗೆ; ತನಗೆ ಸಿಕ್ಕ ‘ಬಾಲ್’ನ್ನು ವ್ಯಕ್ತಿ ಏನು ಮಾಡಿದ್ದಾನೆ ಗೊತ್ತೇ…?

Pinterest LinkedIn Tumblr

ದುಬೈ: ನಿನ್ನೆ ಶಾರ್ಜಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2020ರ ನಾಲ್ಕನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ ವಿರುದ್ಧ ರಾಜಸ್ಥಾನ್ ರಾಯಲ್ಸ್ ತಂಡ ಭರ್ಜರಿ ಗೆಲುವು ಸಾಧಿಸಿದ್ದು, ಈ ಪಂದ್ಯದಲ್ಲಿ ರೋಚಕ ಘಟನೆಯೊಂದು ನಡೆದಿದೆ.

ಚೆನ್ನೈ ಸೂಪರ್ ಕಿಂಗ್ಸ್ ಗೆಲುವಿಗೆ ಕಠಿಣ ಪರಿಶ್ರಮಪಟ್ಟ ನಾಯಕ ಧೋನಿ, ಬಾರಿಸಿದ ಸಿಕ್ಸರ್​ ಎಲ್ಲರ ಗಮನ ಸೆಳೆದಿದೆ. ರಾಜಸ್ಥಾನ್ ರಾಯಲ್ಸ್ ನೀಡಿದ್ದ 217 ರನ್​ಗಳ ಬೆಟ್ಟದಂತಹ ಟಾರ್ಗೆಟ್ ಬೆನ್ನಟ್ಟಿದ ಸಿಎಸ್​ಕೆ ಕೊನೆಗೂ ಗುರಿ ಸಾಧಿಸುವಲ್ಲಿ ವಿಫಲವಾಯಿತು.

 

https://twitter.com/i/status/1308495410026037248

 

ಇತ್ತ ಡುಪ್ಲೆಸಿಸ್ ಅವರು ಧೋನಿ ಜೊತೆಗೂಡಿ ತಂಡದ ಗೆಲುವಿಗೆ ಕಠಿಣ ಹೋರಾಟ ನಡೆಸಿದರು. ಧೋನಿ ನೇರವಾಗಿ ಮೂರು ಸಿಕ್ಸ್​​ಗಳನ್ನು ಬಾರಿಸಿದರು. ಇದು, ಅವರ ಅಭಿಮಾನಿಗಳಿಗೆ ಖುಷಿ ನೀಡಿತು. ವಿಶೇಷ ಎಂದರೆ ಒಂದು ಸಿಕ್ಸ್​ ಸ್ಟೇಡಿಯಂ ದಾಟಿ ಹೊರ ಹೋಗಿತ್ತು. ವಿಶೇಷ ಎಂದರೆ ಶಾರ್ಜಾ ಸ್ಟೇಡಯಿಂದ ಹೊರ ಭಾಗದಲ್ಲಿ ಸುತ್ತಾಡುತ್ತಿದ್ದ ವ್ಯಕ್ತಿಯೋರ್ವ ಈ ಬಾಲ್​ ಅನ್ನು ಎತ್ತಿಕೊಂಡು ಹೋಗಿದ್ದಾನೆ. ಈ ಮೂಲಕ ವಿಶೇಷ ಐಪಿಎಲ್​ ಗಿಫ್ಟ್​ ಸಿಕ್ಕ ಖುಷಿಯಲ್ಲಿ ಆತ ಮನೆಗೆ ತೆರಳಿದ್ದಾನೆ. ಇದನ್ನು ಮೈದಾನದಲ್ಲಿದ್ದ ಕ್ಯಾಮೆರಾಮೆನ್​ ಸೆರೆ ಹಿಡಿದಿದ್ದಾನೆ. ಕೆಲವರು ಆತ ಬಾಲನ್ನು ಕದ್ದು ಪರಾರಾಯಿದ್ದಾನೆ ಎಂದು ನಗೆ ಚಟಾಕಿ ಹಾರಿಸಿದ್ದಾರೆ.

Comments are closed.