ಆತ ಹೆಂಡತಿಯೊಂದಿಗೆ ಸುಳ್ಳು ಹೇಳಿ ಮನೆಯಿಂದ ಹೊರ ಹೋಗಿದ್ದ. ಆದರೆ ಆತನ ಹೇಳಿದ್ದು ಸುಳ್ಳು ಎಂಬುದು ಟಿವಿಯಿಂದ ಬಹಿರಂಗವಾಗಿತ್ತು. ಹೌದು, ಈಕ್ವೆಡಾರ್‌ನ ಡೈವಿ ಆಂಡ್ರಾಡ್ ಎಂಬಾತ ಮನೆಯಿಂದ ಅದೇನೋ ಕೆಲಸ ಇದೆ ಹೋಗಿ ಬರುತ್ತೀನಿ ಎಂದು ಮನೆಯಿಂದ ಹೊರಟ್ಟಿದ್ದ. ಅಲ್ಲಿಂದ ನೇರವಾಗಿ ಹೋಗಿದ್ದು ಪ್ರೇಯಸಿಯನ್ನು ಭೇಟಿಯಾಗಲು. ಆ ಬಳಿಕ ಆ ಮೊದಲೇ ಖರೀದಿಸಿಟ್ಟಿದ್ದ ಟಿಕೆಟ್ ತೆಗೆದು ಬಾರ್ಸಿಲೋನಾ ಎಫ್ಸಿ ಮತ್ತು ಡೆಲ್ಫೈನ್ ನಡುವಿನ ಫುಟ್ಬಾಲ್ ಪಂದ್ಯ ವೀಕ್ಷಿಸಲು ತೆರಳಿದ್ದರು.
ಅಷ್ಟೇ ಅಲ್ಲದೆ ತನ್ನ ಗರ್ಲ್ಫ್ರೆಂಡ್ ಜೊತೆ ಪಂದ್ಯವನ್ನು ವೀಕ್ಷಿಸುತ್ತಾ ಮಸ್ತ್ ಮಜಾದಲ್ಲಿ ತೊಡಗಿಕೊಂಡಿದ್ದ. ಅದರಲ್ಲೂ ಅಧರಗಳ ಮಧುರ ಬೆರೆಯಲು ಟಿವಿ ಕ್ಯಾಮೆರಾ ಇವರಿಬ್ಬರತ್ತ ತಿರುಗಿತು. ತುಟಿ ತುಟಿಗೆ ಒತ್ತಿದ್ದ ಡೈವಿ ನಿಧಾನಕ್ಕೆ ಇತ್ತ ತಿರುಗಿದ. ಕ್ಯಾಮೆರಾ ತಮ್ಮತ್ತ ತಿರುಗಿರುವುದು ಕಂಡೊಡನೆ ಏನೂ..ಎತ್ತ ಎಂಬಂತೆ ನನಗೇನು ಸಂಬಂಧವೇ ಇಲ್ಲವಂತೆ ಕೂತಿದ್ದನು.
ಅತ್ತ ಅದಾಗಲೇ ಹೆಂಡತಿ ಗಂಡನ ಸ್ಟೇಡಿಯಂ ಚಕ್ಕಂದವನ್ನು ಟಿವಿಯಲ್ಲಿ ನೋಡಿದ್ದಳು. ಮೋಸ ಮಾಡಿದ ಗಂಡನ ವಿಡಿಯೋವನ್ನು ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾಳೆ ಎಂದು ಸುದ್ದಿಯಾಗಿದೆ.
ಈ ವಿಡಿಯೋ ಇದೀಗ ಭಾರೀ ವೈರಲ್ ಆಗಿದ್ದು, ಸ್ಟೇಡಿಯಂ ಲವ್ವಿ-ಡವ್ವಿ ಬಗ್ಗೆ ಹಾಸ್ಯಗಳ ಸುರಿಮಳೆಯಾಗುತ್ತಿದೆ.
Comments are closed.