
ಕೊರೋನಾ ಅವಾಂತರ ಹೆಚ್ಚಾಗುತ್ತಲೇ ಇದೆ. ದಿನೇ ದಿನೇ ಸಾಕಷ್ಟು ಜನರನ್ನು ಕೋವಿಡ್-19 ಬಲಿ ತೆಗೆದುಕೊಳ್ಳುತ್ತಿದೆ. ಎಲ್ಲಾ ದೇಶಗಳು ಈ ಮಹಾಮಾರಿ ವೈರಸ್ ಯಾವಾಗ ತೊಲಗುತ್ತೋ ಎಂದು ದೇವರ ಬಳಿ ಪ್ರಾರ್ಥಿಸುತ್ತಿದ್ದಾರೆ. ಇತ್ತ ಕ್ರಿಕೆಟ್ ಲೋಕಕ್ಕೂ ಕೊರೋನಾ ಕಾಲಿಟ್ಟಿದೆ. ಕ್ರಿಕೆಟ್ ತಾರೆಯರು ಕೂಡ ಕೊರೋನಾ ಸೋಂಕಿಗೆ ಒಳಗಾಗಿದ್ದಾರೆ. ಪಾಕಿಸ್ತಾನದಲ್ಲಿ ಒಟ್ಟು 10 ಕ್ರಿಕೆಟಿಗರಿಗೆ ಕೊರೋನಾ ಪಾಸಿಟಿವ್ ಕಂಡುಬಂದಿದೆ.
ಇಂಗ್ಲೇಡ್ ಪ್ರವಾಸಕ್ಕೆ ಸಿದ್ಧಗೊಂಡಿರುವ ಪಾಕಿಸ್ತಾನ ತಂಡ ಕಳೆದ ವಾರ 29 ಆಟಗಾರರ ತಂಡವನ್ನು ಪ್ರಕಟಿಸಿತ್ತು. ಜೂನ್ 28 ರಂದು ಮ್ಯಾಚೆಂಸ್ಟರ್ಗೆ ಪ್ರಯಾಣ ಬೆಳೆಸುವ ಈ ಆಟಗಾರರು ಮೊದಲ ಎರಡು ಹಂತಗಳಲ್ಲಿ ಕೊರೋನಾ ವೈರಸ್ ತಪಾಸಣೆಗೆ ಒಳಪಡಬೇಕಿತ್ತು.
ಆದರೆ ಮೊದಲ ಹಂತದಲ್ಲಿ ಮೂವರು ಆಟಗಾರರಗಿದೆ ಕೊರೋನಾ ಪಾಸಿಟಿವ್ ಕಾಣಿಸಿಕೊಂಡಿದೆ. ನಂತರದ ಹಂತದ ಪರೀಕ್ಷೆಯಲ್ಲಿ 7 ಆಟಗಾರರಲ್ಲಿ ಕೋವಿಡ್ ಸೋಂಕು ತಗುಲಿರುವು ದೃಢಪಟ್ಟಿದೆ.
ಪಾಕ್ ಆಟಗಾರರಾದ ಶಾದಬ್ ಖಾನ್, ಹ್ಯಾರಿಸ್ ರೌಫ್, ಹೈದರ್ ಅಲಿ ಮೊದಲ ಹಂತದಲ್ಲಿ ಕೊರೋನಾ ಪಾಸಿಟಿವ್ ಕಂಡುಬಂದಿದೆ. ನಂತರ ಮೊಹ್ಮಮದ್ ಹಫೀಜ್, ಕಾಶಿಫ್ ಭಟ್ಟಿ, ಮಹಮ್ಮದ್ ಹಸ್ನೈನ್, ಫಖರ್ ಜಮಾನ್, ಮೊಹ್ಮಮದ್ ರಿಜ್ವಾನ್, ಇಮ್ರಾನ್ ಖಾನ್, ಮೊಹಮ್ಮದ್ ಹಫೀಜ್ ಮತ್ತು ವಾಹೆಬ್ ರಿಯಾಜ್ಗೆ ಕೋವಿಡ್-19ರ ಪರೀಕ್ಷೆಯಲ್ಲಿ ಪಾಸಿಟಿವ್ ಕಾಣಿಸಿಕೊಂಡಿದೆ.
ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಪಾಕಿಸ್ತಾನ ಕ್ರಿಕೆಟ್ ಮಂಡಲಿಯ (ಪಿಸಿಬಿ) ಸಿಇಒ ವಾಸಿಮ್ ಖಾನ್ ‘ಇದು ಸರಿಯಾದ ಪರಿಸ್ಥಿತಿಯಲ್ಲ. ಕೊರೋನಾ ಪಾಸಿಟೀವ್ ಬಂದಿರುವ ಈ 10 ಆಟಗಾರ ಉತ್ತಮ ಆಟಗಾರರು. ಈ ಆಟಗಾರರಿಂದ ಉಳಿದ ಆಟಗಾರರಿಗೂ ಸೋಂಕು ಹರಡಬಹುದು. ಸೋಂಕು ತಗುಲಿದ ಆಟಗಾರರಿಗೆ ಅಗತ್ಯದ ವೈದ್ಯಕೀಯ ನೆರವು ನೀಡಲಾಗುವುದು. ಅವರಲ್ಲಿ ನೆಗೆಟಿವ್ ಬಂದ ಕೂಡಲೇ ಇಂಗ್ಲೆಂಡ್ ಪ್ರವಾಸ ಕೈಗೊಂಡು ತಂಡ ಸೇರಿಕೊಳ್ಳಲ್ಲಿದ್ದಾರೆ. ಅದಕ್ಕೂ ಮುನ್ನ ಅವರನ್ನು ಐಸೊಲೇಷನ್ನಲ್ಲಿ ಇಡಲಾಗಿದೆ. ತಂಡದ ಆಟಗಾರರು 28ಕ್ಕೆ ಮ್ಯಾಂಚೆಸ್ಟರ್ಗೆ ಪ್ರಯಾಣ ಬೆಳೆಸಲಿದ್ದಾರೆ’ ಎಂದು ಹೇಳಿದ್ದಾರೆ.
Comments are closed.