ಕ್ರೀಡೆ

ದುಬೈ: ಯಕ್ಷ ಯೋಧಾಸ್ ‘ಡುಮೆಕ್ ವೈ 20’ ಕ್ರಿಕೆಟ್ ಗೆದ್ದುಕೊಂಡ ಕುಡ್ಲ ಫ್ರೆಂಡ್ಸ್

Pinterest LinkedIn Tumblr

ಯಕ್ಷಗಾನ ಆಭ್ಯಾಸ ತರಗತಿ ದುಬಾಯಿಯ ಯುವಕರ ತಂಡ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಉದ್ದೇಶದಿಂದ ಸ್ಥಾಪಿಸಿದ *” ಯಕ್ಷಯೋಧಾಸ್ ದುಬಾಯಿ”* ವತಿಯಿಂದ ತಾರೀಕು 14-02-2020 ನೇ ಶುಕ್ರವಾರದಂದು ಅಲ್ ಇಟ್ಟಿಹಾಡ್ ಸ್ಕೂಲ್ ನ ಕ್ರೀಡಾಂಗಣದಲ್ಲಿ ಅಹ್ವಾನಿತ ತಂಡಗಳ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ *ಡುಮೆಕ್ ವೈ20* ಅತ್ಯಂತ ಶಿಸ್ತುಬದ್ಧವಾಗಿ,ಅದ್ದೂರಿಯಿಂದ ಸಂಪನ್ನಗೊಂಡಿತು.

ದುಬಾಯಿ ಯಕ್ಷಗಾನ ಅಭ್ಯಾಸ ತರಗತಿಯ ಬಾಲ ಕಲಾವಿದ ಆದಿತ್ಯ ದಿನೇಶ್ ಶೆಟ್ಟಿ ಕ್ರೀಡಾ ಜ್ಯೋತಿ ಹಿಡಿದು ಬಂದರೆ ವೇದಿಕೆಯಲ್ಲಿ ಉಪಸದಥಿತರಿದ್ದ ಶ್ರೀಯುತ ರವಿ ಶೆಟ್ಟಿಗಾರ್ ಕಾರ್ಕಳ, ಸುಧಾಕರ ರಾವ್ ಪೇಜಾವರ ಹಾಗೂ ನೋವೆಲ್ ಡಿಸೋಜರವರು ಜ್ಯೋತಿ ಬೆಳಗಿಸಿ ಪಂದ್ಯಾಟಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು.

ಕಾರ್ಯಕ್ರಮ ದ ಮೊದಲಿಗೆ ಯು.ಎ.ಇ ಮತ್ತು ಭಾರತದ ರಾಷ್ಟ್ರಗೀತೆಗಳನ್ನು ಹಾಡಲಾಯಿತು.

ಯು.ಎ.ಇ. ಯ 12 ತಂಡಗಳು ಈ ಪಂದ್ಯಾಟದಲ್ಲಿ ಬಾಗವಹಿದ್ದವು. ಅತ್ಯಂತ ಕುತೂಹಲಕಾರಿಯಾಗಿ‌ ನಡೆದ ಪಂದ್ಯದಲ್ಲಿ KDKGS ತಂಡವು ರನ್ನರ್ ಅಪ್ ಆದರೆ ಕುಡ್ಲ ಪ್ರೆಂಡ್ಸ್ ತಂಡವು ವಿಜಯಮಾಲೆ ಧರಿಸಿ ಡುಮೆಕ್ ವೈ 20 ಪ್ರಶಸ್ತಿಯನ್ನು ಪಡೆದು ಸಂಭ್ರಮಿಸಿತು.

ಈ ಮೊದಲು ನಡೆದ ಉಪಾಂತ್ಯ ಪಂದ್ಯದಲ್ಲಿ ಬಿಲ್ಲವಾಸ್ ದುಬಾಯಿ ತಂಡವನ್ನು ಸೋಲಿಸಿ, ಕುಡ್ಲ ಪ್ರೆಂಡ್ಸ್ ಅಂತಿಮ ಸುತ್ತಿಗೆ ತೇರ್ಗಡೆಯಾದರೆ, ಮಂಗಳಾದೇವಿ ತಂಡವನ್ನು ಸೋಲಿಸಿದ ಕೊಡಗು ಗೌಡಾಸ್ ತಂಡವು ( KDKGS) ತಂಡವು ಅಂತಿಮ‌ ಸುತ್ತಿಗೆ ಪ್ರವೇಶ ಪಡೆದಿತ್ತು.

ಜಯಾನಂದ ಪಕ್ಕಳ, ದಿನೇಶ್ ಶೆಟ್ಟಿ ಕೊಟ್ಟಿಂಜ ಮತ್ತು ಶೇಖರ್ ಡಿ. ಶೆಟ್ಟಿಗಾರ್ ಕಿನ್ನಿಗೋಳಿಯವರು ಪ್ರಶಸ್ತಿ ವಿಜೇತರಿಗೆ ಪ್ರಶಸ್ತಿ ಗಳನ್ನು ವಿತರಿಸಿದರು. ಕುಡ್ಲ ಪ್ರೆಂಡ್ಸ್ನ ಮುನೀರ್ ಅವರು ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರೆ, KDGS ತಂಡದ ರಾಕೇಶ್ ಕುದ್ವ ಅವರು ಉತ್ತಮ‌ ದಾಂಡಿಗ ಹಾಗೂ ಕುಡ್ಲ ಪ್ರೆಂಡ್ಸ್ ನ ನಜ್ಹೀಮ್ ರವರು ಉತ್ತಮ‌ ಎಸೆತಗಾರ ಪ್ರಶಸ್ತಿ ಪಡೆದರು.

 

ಬಾಗವಹಿಸಿದ ಎಲ್ಲಾ ತಂಡಗಳಿಗೂ ಸ್ಮರಣಿಕೆ ನೀಡಲಾಯಿತು. ಪ್ರತೀ ಪಂದ್ಯಾಟದಲ್ಲೂ ಪಂದ್ಯಪುರುಷ ಪ್ರಶಸ್ತಿ ಯನ್ನು ವಿವಿಧ ಗಣ್ಯಾತಿಗಣ್ಯರು ವಿತರಿಸಿದರು. ಡುಮೆಕ್ ಮುಖ್ಯ ಪ್ರಾಯೋಜಕತ್ವ ವಹಿಸಿಕೊಂಡ ಈ ಕಾರ್ಯಕ್ರಮದಲ್ಲಿ ಉಪಸ್ಥತರಿದ್ದು ಪ್ರೋತ್ಸಾಹಿಸಿದ ಚಲನಚಿತ್ರದ ನಿರ್ಮಾಪಕ, ದುಬಾಯಿ ಉದ್ಯಮಿ ಶ್ರೀ ಹರೀಶ್ ಶೇರಿಗಾರ್ ರವರು ಪ್ರಥಮ ಬಹುಮಾನ ಮೊತ್ತ ನೀಡಿ ಸಹಕರಿಸಿದರೆ, ವಿವಿಧ ಪ್ರಶಸ್ತಿ, ಕಪ್ ಗಳನ್ನು ಪ್ರಾಯೋಜಿಸಿ ಗಿರೀಶ್ ನಾರಾಯಣ ಕಾಟಿಪಳ್ಳ, ಧನಂಜಯ್ ಶೆಟ್ಟಿಗಾರ್ ಮತ್ತು ರಾಜೇಶ್ ಕುತ್ತಾರು ನೀಡಿ ಸಹಕರಿಸಿದರು. ಡುಮೆಕ್ ಜೊತೆಗೆ ಎಕಾರ್ಡ್, ಧಡ್ಕನ್ ಮತ್ತು ಎಸ್ ಪಿ ಸಂಸ್ಥೆಗಳು ಪ್ರಾಯೋಜಕತ್ವ ವಹಿಸಿ ಕಾರ್ಯಕ್ರಮ ವನ್ನು ಪ್ರೋತ್ಸಾಹಿಸಿದರು.

Comments are closed.