ಕ್ರೀಡೆ

ತರಬೇತಿದಾರನ ಮುಂದೆ ಬಟ್ಟೆ ಬಿಚ್ಚಿದ ಪಾಕ್ ಕ್ರಿಕೆಟಿಗ

Pinterest LinkedIn Tumblr


ಕರಾಚಿ: ಅಂತರಾಷ್ಟ್ರೀಯ ತಂಡದಲ್ಲಿ ಸ್ಥಾನಪಡೆದುಕೊಳ್ಳಲು ಶ್ರಮ ಪಡುತ್ತಿರುವ ಪಾಕಿಸ್ತಾನ ವಿಕೆಟ್ ಕೀಪರ್ ಉಮರ್ ಅಕ್ಮಲ್ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ. ನ್ಯಾಷನಲ್ ಕ್ರಿಕೆಟ್ ಅಕಾಡೆಮಿಗಾಗಿ ನಡೆದ ಫಿಟ್ನೆಸ್ ಪರೀಕ್ಷೆ ವೇಳೆ ಟ್ರೈನರ್ ಅಸಭ್ಯವಾಗಿ ವರ್ತಿಸಿದ್ದಾರೆಂಬ ಆರೋಪ ಕೇಳಿ ಬಂದಿದೆ.

ಫಿಟ್ನೆಸ್ ಟೆಸ್ಟ್ ವೇಳೆ ಉಮರ್ ಅಕ್ಮಲ್ ಅವರ ಫ್ಯಾಟ್ ಪರೀಕ್ಷಿಸಲಾಗುತ್ತಿತ್ತು. ಈ ಪರೀಕ್ಷೆಯಲ್ಲಿ ಅಕ್ಮಲ್ ಫೇಲ್ ಆಗಿದ್ದರು. ಇದರಿಂದ ಕೋಪಗೊಂಡ ಅಕ್ಮಲ್ ಟ್ರೈನರ್ ಮುಂದೆ ತಮ್ಮ ಬಟ್ಟೆ ಬಿಚ್ಚಿ ಎಲ್ಲಿ ದಪ್ಪವಿದ್ದೇನೆ ತೋರಿಸಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ.

ಫಿಟ್ನೆಸ್ ಪರೀಕ್ಷೆ ನಡೆಸುತ್ತಿದ್ದ ತಂಡ, ಅಕ್ಮಲ್ ಅಸಭ್ಯ ವರ್ತನೆಯ ಬಗ್ಗೆ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಗೆ ದೂರು ಸಲ್ಲಿಸಿದ್ದಾರೆ. ಈ ವರ್ತನೆಯಿಂದಾಗಿ ಉಮರ್ ಅಕ್ಮಲ್ ಮೇಲೆ ನಿಷೇಧ ಅಥವಾ ಮುಂದಿನ ಸರಣಿಗಳಿಗೆ ಉಮರ್ ಅಕ್ಮಲ್ ಅವರನ್ನು ತಂಡದಿಂದ ಕೈ ಬಿಡುವ ಸಾಧ್ಯತೆಗಳಿವೆ. ಇತ್ತ ಉಮರ್ ಅಕ್ಮಲ್ ಹಿರಿಯ ಸೋದರ ಕಾಮರಾನ್ ಮತ್ತು ಮಾಜಿ ನಾಯಕ ಸಲ್ಮಾನ್ ಭಟ್ ಫಿಟ್ನೆಸ್ ಪರೀಕ್ಷೆಯಲ್ಲಿ ಫೇಲ್ ಆಗಿದ್ದಾರೆ.

ಉಮರ್ ಅಕ್ಮಲ್ ಈ ಹಿಂದೆಯೂ ಹಲವು ಬಾರಿ ವಿವಾದದ ಸುಳಿಯಲ್ಲಿ ಸಿಲುಕಿದ್ದರು. 2017ರಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಪಂದ್ಯದಿಂದ ಉಮರ್ ಅಕ್ಮಲ್ ಅವರನ್ನು ಇಂಗ್ಲೆಂಡ್ ನಿಂದ ಪಾಕಿಸ್ತಾನಕ್ಕೆ ಕಳುಹಿಸಲಾಗಿತ್ತು. ಅಂದು ಫಿಟ್ನೆಸ್ ಪರೀಕ್ಷೆಯಲ್ಲಿ ಫೇಲಾಗಿದ್ದರಿಂದ ಕೋಚ್ ಮಿಕೀ ಆರ್ಥರ್ ವಿಚಾರಣೆ ನಡೆಸಿದ್ದರು.

Comments are closed.