ರಾಷ್ಟ್ರೀಯ

ಉಪನ್ಯಾಸಕಿ ಮೇಲೆ ಪೆಟ್ರೋಲ್ ಸುರಿದು ಬೆಂಕಿಹಚ್ಚಿದ ಭಗ್ನ ಪ್ರೇಮಿ ಯುವಕ!

Pinterest LinkedIn Tumblr


ವಾರ್ಧಾ(ಮಹಾರಾಷ್ಟ್ರ): 25 ವರ್ಷದ ಕಾಲೇಜು ಉಪನ್ಯಾಸಕಿ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಘಟನೆ ಮಹಾರಾಷ್ಟ್ರದಲ್ಲಿ ಸೋಮವಾರ ನಡೆದಿದೆ.

ಇಂದು ಬೆಳಗ್ಗೆ ಕಾಲೇಜಿಗೆ ತೆರಳುತ್ತಿದ್ದ ವೇಳೆ ಆರೋಪಿ ವಿಕಿ ನಗ್ರಾಲೇ ಎಂಬಾತ ಬೈಕ್ ನಲ್ಲಿ ಬಂದು ಆಕೆ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಬಿಟ್ಟಿದ್ದ. ಉಪನ್ಯಾಸಕಿ ದೇಹ ಸುಮಾರು ಶೇ.40ರಷ್ಟು ಸುಟ್ಟು ಹೋಗಿದ್ದು, ಆಸ್ಪತ್ರೆಯಲ್ಲಿ ಚಿಂತಾಜನಕ ಸ್ಥಿತಿಯಲ್ಲಿದ್ದಿರುವುದಾಗಿ ವರದಿ ತಿಳಿಸಿದೆ.

ಈತ ಕಳೆದ ಎರಡು ವರ್ಷಗಳಿಂದ ಆಕೆಯನ್ನು ಹಿಂಬಾಲಿಸುತ್ತಿದ್ದ ಎಂದು ವರದಿ ಹೇಳಿದೆ. ಯುವತಿ ಮೇಲೆ ಪೆಟ್ರೋಲ್ ಸುರಿದು ಪರಾರಿಯಾಗಿದ್ದು, ಸ್ಥಳದಲ್ಲಿದ್ದ ಪ್ರಯಾಣಿಕರು ಆಕೆ ಮೈಮೇಲೆ ನೀರು ಚೆಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದರು. ನಂತರ ಆಕೆಯನ್ನು ಆರೇಂಜ್ ಸಿಟಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು ಎಂದು ವರದಿ ವಿವರಿಸಿದೆ. ಘಟನೆಗೆ ಸಂಬಂಧಿಸಿದಂತೆ ಯುವಕನನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ವಿಕಿ ನಗ್ರಾಲೇಗೆ ಮದುವೆಯಾಗಿದ್ದು, ದಂಪತಿಗೆ ಏಳು ತಿಂಗಳ ಗಂಡು ಮಗು ಇದೆ. ಆದರೂ ಈತ ಕಾಲೇಜು ಉಪನ್ಯಾಸಕಿಯನ್ನು ದಿನಂಪ್ರತಿ ಹಿಂಬಾಲಿಸುತ್ತಿದ್ದ. ಇದೊಂದು ಏಕಮುಖ ಪ್ರೀತಿಯ ಪ್ರಕರಣವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Comments are closed.