ಕ್ರೀಡೆ

ವೆಸ್ಟ್ ಇಂಡೀಸ್ ವಿರುದ್ಧ 53 ರನ್ ಗಳಿಂದ ಜಯಗಳಿಸಿದ ಮಹಿಳಾ ಕ್ರಿಕೆಟ್ ತಂಡ

Pinterest LinkedIn Tumblr

ಭಾರತೀಯ ಮಹಿಳಾ ಕ್ರಿಕೆಟ್ ತಂಡ ಎರಡನೇ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 53 ರನ್ ಗಳಿಂದ ಗೆದ್ದುಕೊಂಡಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಟೀಂ ಇಂಡಿಯಾ ನಿಗದಿತ 50 ಓವರ್ ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 191 ರನ್ ಗಳಿಸಿತು. ಪೂನಂ ರಾವತ್ 77 ರನ್ ಗಳಿಸಿದರೆ ನಾಯಕಿ ಮಿಥಾಲಿ ರಾಜ್ 40 ಮತ್ತು ಹರ್ಮನ್ ಪ್ರೀತ್ ಕೌರ್ 46 ರನ್ ಗಳಿಸಿದರು.

192 ರನ್ ಗುರಿ ಬೆನ್ನತ್ತಿದ ವಿಂಡೀಸ್ ಮಹಿಳೆಯರು, ಕೇವಲ 138 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡರು. ಕೀಪರ್ ಶರ್ಮನ್ ಕ್ಯಾಂಪ್ ಬೆಲ್ 39 ರನ್ ಗಳಿಸಿದ್ದು ಬಿಟ್ಟರೆ ಮತ್ಯಾರು ಹೋರಾಟ ನಡೆಸಲಿಲ್ಲ. ಸರಣಿಯ ಅಂತಿಮ ಪಂದ್ಯ ಬುಧವಾರ ನಡೆಯಲಿದೆ.

Comments are closed.