ಕ್ರೀಡೆ

ತಂದೆಯ ಜೊತೆ ಜೀಪ್ ತೊಳೆದ ಧೋನಿ ಮಗಳು

Pinterest LinkedIn Tumblr


ರಾಂಚಿ: ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಪುತ್ರಿ ಝೀವಾ ಅಪ್ಪನ ಜೊತೆಗ ಹೊಸ ಜೀಪ್ ತೊಳೆದಿದ್ದಾಳೆ.

ಎಂ.ಎಸ್.ಧೋನಿ ಮನೆಗೆ ಹೊಸ ಅತಿಥಿಯಾಗಿ ಭಾರತೀಯ ಸೇನೆಯಲ್ಲಿ ಬಳಸುವ ನಿಸ್ಸಾನ್ ಕಂಪನಿಯ ಜೊಂಗಾ ಜೀಪ್ ಬಂದಿದೆ. ಹೊಸ ಜೀಪ್‍ನಲ್ಲಿ ಜಾಲಿ ರೈಡ್ ಹೋಗಿದ್ದ ಧೋನಿ, ಅದನ್ನು ತೊಳೆಯುತ್ತಿರುವ ವಿಡಿಯೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಈ ವೇಳೆ ಅಪ್ಪನಿಗೆ ಪುತ್ರಿ ಝೀವಾ ಕೂಡ ಸಹಾಯ ಮಾಡಿದ್ದಾರೆ.

ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಪೋಸ್ಟ್ ಮಾಡಿರುವ ಧೋನಿ, ಚಿಕ್ಕ ಸಹಾಯವು ನಿಮ್ಮನ್ನ ಹೆಚ್ಚು ದೂರದವೆರಗೂ ಕರೆದುಕೊಂಡು ಹೋಗುತ್ತದೆ. ಇಂತಹ ದೊಡ್ಡ ಜೀಪ್ ಎಂದು ಭಾವಿಸಿದಾಗಲೂ ಎಂದು ಬರೆದುಕೊಂಡಿದ್ದಾರೆ.

ಅಪ್ಪನಿಗೆ ಸಹಾಯ ಮಾಡಿದ ಝೀವಾಳ ಬಗ್ಗೆ ನಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋ ಪೋಸ್ಟ್ ಆಗ ಕೇವಲ ಒಂದು ಗಂಟೆಯಲ್ಲಿ 9 ಲಕ್ಷಕ್ಕೂ ಅಧಿಕ ಜನರು ವೀಕ್ಷಿಸಿದ್ದು, 7 ಲಕ್ಷಕ್ಕೂ ಅಧಿಕ ನೆಟ್ಟಿಗರು ಲೈಕ್ ಮಾಡಿದ್ದಾರೆ. ಅನೇಕರು ತಮ್ಮದೇ ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ.

ಕ್ರಿಕೆಟ್ ಜೊತೆಗೆ ಧೋನಿಗೆ ಕಾರು, ಬೈಕ್ ಖರೀದಿರುವ ಕ್ರೇಝ್ ಸ್ವಲ್ಪ ಹೆಚ್ಚೇ ಇದೆ. ಧೋನಿ ಅವರ ಮನೆಯಲ್ಲಿ ದುಬಾರಿ ಹಮ್ಮರ್ ಕಾರು ಸೇರಿದಂತೆ ಹಲವು ಕಾರುಗಳಿವೆ. ಇತ್ತೀಚೆಗಷ್ಟೇ ಜೀಪ್ ಕಂಪಾಸ್ ಚೆರೋಕಿ ಟ್ರಾಕ್‍ವಾಕ್ ಕಾರನ್ನು ಖರೀಸಿದ್ದರು. ಈ ಬೆನ್ನಲ್ಲೇ ಅವರ ಮನೆ ಹೊಸ ಅತಿಥಿಯಾಗಿ ನಿಸ್ಸಾನ್ ಕಂಪನಿಯ ಜೊಂಗಾ ಜೀಪ್ ಬಂದಿದೆ.

ತಮ್ಮ ನೂತನ ಜೀಪ್‍ನಲ್ಲಿ ಕೆಲ ದಿನಗಳ ಹಿಂದಷ್ಟೇ ಜಾಲಿ ರೈಡ್ ಮಾಡಿದ್ದ ಎಂ.ಎಸ್.ಧೋನಿ ಸ್ಥಳೀಯ ಪೆಟ್ರೋಲ್ ಬಂಕ್‍ಗೆ ಬಂದಿದ್ದರು. ಈ ವೇಳೆ ಧೋನಿ ಅವರನ್ನು ನೋಡಿದ ಅಭಿಮಾನಿಗಳು ಆಟೋಗ್ರಾಫ್‍ಗೆ ಮುಗಿಬಿದ್ದಿದ್ದರು. ಅಭಿಮಾನಿಗಳನ್ನು ನಿರಾಶೆಗೊಳಿಸದ ಧೋನಿ, ಪ್ರತಿಯೊಬ್ಬರಿಗೂ ಆಟೋಗ್ರಾಫ್ ನೀಡಿ ಸೆಲ್ಫಿ ತೆಗೆಸಿಕೊಂಡಿದ್ದರು.

Comments are closed.