ಕ್ರೀಡೆ

26 ಕೆಜಿ ತೂಕ ಇಳಿಸಿಕೊಂಡ ಸಾನಿಯಾ ಮಿರ್ಜಾ!

Pinterest LinkedIn Tumblr


ನವದೆಹಲಿ: ಭಾರತೀಯ ಟೆನಿಸ್ ತಾರೆ ಸಾನಿಯಾ ಮಿರ್ಜಾ ಈಗ ಫುಲ್ ಸ್ಲಿಮ್ ಆಗಿದ್ದಾರೆ. ತಾಯಿಯಾದ ಬಳಿಕ ಒಂದಷ್ಟು ವರ್ಷ ಕ್ರೀಡೆಯಿಂದ ದೂರವುಳಿದಿದ್ದ ಆಟಗಾರ್ತಿ ಗಂಡು ಮಗುವಿಗೆ ಜನ್ಮ ನೀಡಿದ ನಂತರದ 4 ತಿಂಗಳಲ್ಲಿ ಬರೋಬ್ಬರಿ 26 ಕೆಜಿ ತೂಕ ಇಳಿಸಿಕೊಂಡಿದ್ದಾರೆ.

ತೂಕ ಇಳಿಸಿಕೊಂಡಿರುವ ಬಗೆಯನ್ನು ತಮ್ಮ ಇನ್‌ಸ್ಟಾಗ್ರಾಂ ಪುಟದಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದು, ಹೆರಿಗೆಯ ನಂತರ ಮಹಿಳೆಯರಿಗೆ ಫಿಟ್ನೆಸ್‌ಗೆ ಮರಳುವುದು ಕಠಿಣ ಎಂದು ಹೇಳಲಾಗುತ್ತಿದೆ. ಬಹುಶ: ಪ್ರೇರಣೆ ಅಥವಾ ಸ್ಫೂರ್ತಿ ಸಿಗುವುದಿಲ್ಲ. ನನಗೀಗ ಮಾಡಲು ಸಾಧ್ಯವಾದರೆ ಯಾರಿಗೂ ಬೇಕಾದರೂ ಮಾಡಬಹುದು. ನನ್ನನ್ನು ನಂಬಿ ದೈನಂದಿನ ಒಂದು ಅಥವಾ ಎರಡು ತಾಸು ಅಭ್ಯಾಸ ನಡೆಸಿದರೆ ದೈಹಿಕ ಹಾಗೂ ಮಾನಸಿಕವಾಗಿ ಅದ್ಭುತವನ್ನು ಮಾಡಬಹುದು” ಎಂದು ತಿಳಿಸಿದ್ದಾರೆ.

32ರ ಹರೆಯದ ಸಾನಿಯಾ ತಮ್ಮ ಎರಡನೇ ವಿಡಿಯೋದಲ್ಲಿ ತಮಗೆ ಗಂಡು ಮಗು ಆದ ನಂತರ ನಿದ್ದೆಯಿಲ್ಲದ ರಾತ್ರಿಗಳಿಂದಾಗಿ ಜಿಮ್‌ಗೆ ಹೋಗುವ ಕಠಿಣ ದಣಿವಿನ ದಿನಗಳನ್ನು ನೆನಪಿಸಿದ್ದಾರೆ. ರಾತ್ರಿ ಬೆಳಗಾಗುವುದರೊಳಗೆ ಏನೂ ಮಾಡಲು ಸಾಧ್ಯವಿಲ್ಲ. ಕಠಿಣ ಪರಿಶ್ರಮ, ಶಿಸ್ತು ಹಾಗೂ ಸಮರ್ಪಣೆಯ ಮೂಲಕ ಫಿಟ್ನೆಸ್ ಮರಳಿ ಪಡೆಯಬಹುದು ಎಂದಿದ್ದಾರೆ.

ಪ್ರಸ್ತುತ ತರಬೇತಿಯಲ್ಲಿ ತೊಡಗಿಸಿಕೊಂಡಿರುವ ಸಾನಿಯಾ 2020ರ ವೇಳೆಗೆ ಟೆನಿಸ್ ಅಂಗಣಕ್ಕೆ ಮರಳುವ ವಿಶ್ವಾಸದಲ್ಲಿದ್ದಾರೆ.

Comments are closed.