ಕ್ರೀಡೆ

ಹೆಂಡತಿಯೊಂದಿಗೆ ಸ್ನಾನ ಮಾಡುವ ಪೋಟೋ ಹರಿ ಬಿಟ್ಟ ಕ್ರಿಕೆಟಿಗ…!!

Pinterest LinkedIn Tumblr


ತನ್ನ ಬ್ಯಾಟಿಂಗ್ ನಿಂದ ಎಲ್ಲರನ್ನು ಬೋಲ್ಡ್ ಮಾಡುತ್ತಿದ್ದ ವೆಸ್ಟ್ ಇಂಡೀಸ್ ಆರಂಭಿಕ ಆಟಗಾರ ಎವಿನ್ ಲೂಯಿಸ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ಟ್ರೋಲ್ ಆಗುತ್ತಿದ್ದಾರೆ.

ಸದ್ಯ ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಸೇಂಟ್ ಕಿಟ್ಸ್ ಅ್ಯಂಡ್ ನೆವಿಸ್ ಪೇಟ್ರಿಯಾಟ್ಸ್ ಪರ ಆಡುತ್ತಿರುವ ಸ್ಫೋಟಕ ಬ್ಯಾಟ್ಸ್ ಮನ್ ಎವಿನ್ ಇತ್ತೀಚೆಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪತ್ನಿ ಶರಣಾ ಅಲಿಯೊಂದಿಗಿರುವ ಪೋಟೋ ಅಪ್ ಲೋಡ್ ಮಾಡಿದ್ದು ನೆಟ್ಟಿಗರು ಎವಿನ್ ವಿರುದ್ಧ ನಿಗಿ ನಿಗಿ ಕೆಂಡ ಕಾರುತ್ತಿದ್ದಾರೆ.

ಅರೇ, ಎವಿನ್ ಆತನ ಪತ್ನಿಯೊಂದಿಗಿನ ಪೋಟೋ ವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡೋದು ತಪ್ಪಾ? ನೆಟ್ಟಿಗರ್ಯಾಕೆ ಲೂಯಿಸ್ ವಿರುದ್ಧ ಟ್ರೋಲ್ ಮಾಡ್ತಿದ್ದಾರೆ ಅಂದ್ಕೊತ್ತಿದ್ದೀರಾ? ಹೌದು ಅದರಲ್ಲಿ ಇರೋದು ಕಹಾನಿ ಮೇಲೆ ಟ್ವಿಸ್ಟ್.

ಇಷ್ಟು ದಿನ ಕ್ರಿಕೆಟ್​ ಮೈದಾನದಲ್ಲಿ ಸ್ಪೋಟಕ ಆಟದಿಂದ ಕ್ರಿಕೆಟ್ ಅಭಿಮಾನಿಗಳ ಫೆವರೆಟ್ ಬ್ಯಾಟ್ಸ್​ಮ್ಯಾನ್ ಆಗಿದ್ದಾ ವೆಸ್ಟ್​ ಇಂಡೀಸ್ ಟೀಮ್​ನ ಆರಂಭಿಕ ದಾಂಡಿಗ ಎವಿನ್ ಲೂಯಿಸ್ ಹೆಂಡತಿಯೊಂದಿಗೆ ಸಾರ್ವಜನಿಕವಾಗಿ ಸ್ನಾನ ಮಾಡುತ್ತಿರುವ ಪೋಟೋವನ್ನು ‘ಫನ್ ಡೇ ವಿತ್ ಮೈ ಲವ್’ ಎಂದು ಬರೆದುಕೊಂಡು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋ ನೋಡಿದ ನೆಟ್ಟಿಗರು ಕಮೆಂಟ್​ಗಳ ಸುರಿ ಮಳೆಯನ್ನೆ ಸುರಿಸಿದ್ದಾರೆ.

ಅಲ್ಲದೆ ಅತ್ಯುತ್ತಮ ಫಾರ್ಮ್​ನಲ್ಲಿರುವ ನೀವು ಇಂತಹದೆನ್ನೆಲ್ಲಾ ಮಾಡಿ ಸುದ್ದಿಯಾಗುವ ಅವಶ್ಯಕತೆ ಇಲ್ಲ. ಚೆನ್ನಾಗಿ ಬ್ಯಾಟ್ ಮಾಡಿ ಅರ್ಧಶತಕ, ಸೆಂಚುರಿ ಬಾರಿಸಿದರೆ ಸಾಕು ಎಲ್ಲ ಕಡೆ ನಿಮ್ಮ ಫೋಟೋ ಹರಿದಾಡುತ್ತದೆ. ಅದು ಬಿಟ್ಟು ಹೀಗೆ ಮಾಡಿದರೆ ಅಸಹ್ಯ ಎನಿಸಿಬಿಡುತ್ತದೆ ಎಂದು ವ್ಯಕ್ತಿಯೊಬ್ಬರು ಕಮೆಂಟ್ ಮಾಡಿದ್ದಾರೆ.

ಇನ್ನು ಈ ಪೋಟೋದಲ್ಲಿ ಪತ್ನಿ ಶರಣಾ ಅಲಿ ಬೆನ್ನಿಗೆ ಸೋಪ್ ಹಾಕುತ್ತಾ ತಬ್ಬಿಕೊಂಡಿರುವ ಹಾಗೆ ಪೋಸ್ ಕೊಟ್ಟಿದ್ದಾರೆ.

Comments are closed.